ಆ್ಯಪ್ನಗರ

ಶಮಿ ರಿವರ್ಸ್ ಸ್ವಿಂಗ್ ಕಿಂಗ್; ರೋಹಿತ್‌ಗೆ ವೀರುಗಿಂತಲೂ ಉತ್ತಮ ಟೆಕ್ನಿಕ್: ಶೋಯಿಬ್ ಅಖ್ತರ್ ಶ್ಲಾಘನೆ

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಬಗ್ಗೆ ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Vijaya Karnataka Web 8 Oct 2019, 12:51 pm
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 203 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ.
Vijaya Karnataka Web shami-rohit


ಟೀಮ್ ಇಂಡಿಯಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ರೋಹಿತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ನಿರ್ವಹಣೆಯನ್ನು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಿಬ್ ಅಖ್ತರ್ ಮುಕ್ತಕಂಠವಾಗಿ ಶ್ಲಾಘಿಸಿದ್ದಾರೆ.

ಎಚ್ಚರ; ಪುಣೆ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಕಾದಿದೆ ಅಪಾಯ!

ರೋಹಿತ್ ಶರ್ಮಾ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರಿಗಿಂತಲೂ ಉತ್ತಮ ತಂತ್ರಗಾರಿಕೆಯನ್ನು ಹೊಂದಿದ್ದಾರೆ. ಹಾಗೆಯೇ ಮೊಹಮ್ಮದ್ ಶಮಿ ರಿವರ್ಸ್ ಸ್ವಿಂಗ್ ಕಿಂಗ್ ಆಗಬಲ್ಲರು ಎಂದು ಭವಿಷ್ಯ ನುಡಿದರು.

ರೋಹಿತ್ ಬಗ್ಗೆ ಹೇಳಿದ್ದೇನು?

ಸೆಹ್ವಾಗ್ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಹೊಂದಿದ್ದರು. ಅಲ್ಲದೆ ಚೆಂಡನ್ನು ಮೈದಾನದ ಎಲ್ಲ ದಿಕ್ಕುಗಳಿಗೂ ಅಟ್ಟುತ್ತಿದ್ದರು. ಇನ್ನೊಂದೆಡೆ ರೋಹಿತ್ ಶರ್ಮಾ, ವೀರುಗಿಂತಲೂ ಉತ್ತಮ ಟೆಕ್ನಿಕ್ ಹೊಂದಿದ್ದು, ಚೆಂಡಿನ ಮೇಲೆ ಅತ್ಯುತ್ತಮ ಟೈಮಿಂಗ್ ಹೊಂದಿದ್ದಾರೆ. ಹಾಗೆಯೇ ತಮ್ಮ ಬತ್ತಳಿಕೆಯಲ್ಲಿ ವಿಭಿನ್ನ ಶಾಟ್‌ಗಳ ಆಯ್ಕೆಯನ್ನು ಹೊಂದಿದ್ದಾರೆ ಎಂದು ವಿವರಿಸಿದ್ದಾರೆ.

ಟೆಸ್ಟ್ ರ‍್ಯಾಂಕಿಂಗ್‌ನಲ್ಲೂ ಅಬ್ಬರಿಸಿದ ರೋಹಿತ್, ಮಯಾಂಕ್

ರೋಹಿತ್ ಶರ್ಮಾ ಭಾರತದ ಇಂಜಮಾಮ್ ಉಲ್ ಹಕ್ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಇದೀಗ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಡುವೆ ನೈಜ ಪೈಪೋಟಿ ನಡೆಯಲಿದೆ ಎಂದು ಹೇಳಿದ್ದಾರೆ.

ಶಮಿ ರಿವರ್ಸ್ ಕಿಂಗ್...
ಇನ್ನೊಂದೆಡೆ ಮೊಹಮ್ಮದ್ ಶಮಿ ತಮ್ಮ ಬಳಿ ಸಲಹೆಯನ್ನು ಕೇಳುತ್ತಿದ್ದು, ರಿವರ್ಸ್ ಸ್ವಿಂಗ್ ಕಿಂಗ್ ಆಗಲಿದ್ದಾರೆ ಎಂದು ಹೇಳಿದ್ದಾರೆ. ಹಾಗೆಯೇ ಉತ್ತಮ ಫಿಟ್ನೆಸ್ ಕಾಪಾಡುವಂತೆ ಸಲಹೆ ಮಾಡಿದ್ದಾರೆ.

ನಾಯಕನ ಆಟವಾಡಿದ ಪಾಂಡೆ ಫಿಫ್ಟಿ; ಆಂಧ್ರ ವಿರುದ್ಧ ಕರ್ನಾಟಕ ಗೆಲುವು

ವೇಗಿಗಳಿಗೆ ಯಾವುದೇ ನೆರವು ಸಿಗದ ಪಿಚ್‌ನಲ್ಲಿಯೂ ಮೊಹಮ್ಮದ್ ಶಮಿ ರಿವರ್ಸ್ ಸ್ವಿಂಗ್ ದಾಳಿಯ ಮೂಲಕ ಯಶಸ್ಸು ಗಳಿಸಿದ್ದಾರೆ. ಭಾರತದ ಸ್ಮರಣೀಯ ಗೆಲುವಿನಲ್ಲಿ ಶಮಿ ಪಾತ್ರ ನಿರ್ಣಾಯಕವೆನಿಸಿದೆ ಎಂದರು.

ವಿರಾಟ್ ಕೊಹ್ಲಿ ಬೌಲರ್‌ಗಳ ನಾಯಕರಾಗಿದ್ದಾರೆ. ಯಾವಾಗಲೂ ಮೊಹಮ್ಮದ್ ಶಮಿರನ್ನು ಬೆಂಬಲಿಸುತ್ತಾರೆ. ಇದು ಶಮಿ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಲು ನೆರವಾಗಿದೆ. ಶಮಿ ತಮ್ಮ ರಿವರ್ಸ್ ಸ್ವಿಂಗ್ ದಾಳಿಯಿಂದಲೇ ಎದುರಾಳಿಗಳ ಮೇಲೆ ಸವಾರಿ ಮಾಡಬಲ್ಲರು ಎಂದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಸ್ಥಿರವಾದ ಪ್ರದರ್ಶನ ನೀಡಲು ಪರಿಪೂರ್ಣ ತಂಡವನ್ನು ಹೊಂದಿರುವುದೇ ಕಾರಣ ಎಂದು ಅಖ್ತರ್ ಗೆಲುವಿನ ರಹಸ್ಯವನ್ನು ಬಿಚ್ಚಿಟ್ಟರು.

ಅದೇ ಸಂದರ್ಭದಲ್ಲಿ ಪಾಕಿಸ್ತಾನದ ಯಾವ ಬೌಲರ್ ಕೂಡಾ ತಮ್ಮ ಬಳಿ ಸಲಹೆಗಳನ್ನು ಪಡೆಯುವುದಿಲ್ಲ ಎಂದು ಅಖ್ತರ್ ಕೊರಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌