ಆ್ಯಪ್ನಗರ

ವಿರಾಟ್ ಕೊಹ್ಲಿ ಆಧುನಿಕ ಕಾಲದ ಬ್ರಾಡ್ಮನ್: ಅಖ್ತರ್

ವಿರಾಟ್ ಆಧುನಿಕ ಕಾಲದ ಬ್ರಾಡ್ಮನ್ ಎಂಬುದನ್ನು ಒಪ್ಪಿಕೊಂಡ ಪಾಕ್ ಲೆಜೆಂಡ್ ಅಖ್ತರ್

Times Now 3 Nov 2018, 12:43 pm
ಹೊಸದಿಲ್ಲಿ: ಬರೋಬ್ಬರಿ 100ರಷ್ಟು ಸರಾಸರಿಯನ್ನು ಹೊಂದಿರುವ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಸರ್ ಡಾನ್ ಬ್ರಾಡ್ಮನ್ ಅವರಿಗೆ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಎಂಬ ಬಿರುದು ನೀಡಲಾಗಿದೆ.
Vijaya Karnataka Web virat-kohli-30


ದಶಕಗಳಿಂದಲೂ ಕ್ರಿಕೆಟಿಗರನ್ನು ತಮ್ಮ ಹಿಂದಿನ ಪೀಳಿಗೆಯ ಶ್ರೇಷ್ಠರೊಂದಿಗೆ ಹೋಲಿಸಲಾಗತ್ತು. ಬ್ರಾಡ್ಮನ್ ಜೊತೆಗೆ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರನ್ನು ಹೋಲಿಸಲಾಗುತ್ತಿತ್ತು. ಇದೀಗ ಸಚಿನ್ ಜೊತೆಗೆ ವಿರಾಟ್ ಕೊಹ್ಲಿ ಅವರನ್ನು ಹೋಲಿಕೆ ಮಾಡಲಾಗುತ್ತಿದೆ.

ಈ ನಡುವೆ ರಾವಿಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಪಾಕಿಸ್ತಾನದ ಮಾಗಿ ವೇಗಿ ಶೋಯಿಬ್ ಅಖ್ತರ್, ವಿರಾಟ್ ಕೊಹ್ಲಿ ಅವರನ್ನು ಆಧುನಿಕ ಬ್ರಾಡ್ಮನ್ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಕ್ರಿಕೆಟ್ ಪ್ರೇಮಿಗೆ ಉತ್ತರವಾಗಿ ಅಖ್ತರ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್‌ನ ಬ್ರಾಡ್ಮನ್ ಎಂಬ ಅನಿಸಿಕೆಗೆ ನಿಸ್ಸಂಶವಾಗಿಯೂ ಅದರಲ್ಲಿ ಯಾವುದೇ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ವಿಂಡೀಸ್ ಸರಣಿಯ ವೇಳೆಯಷ್ಟೇ ಮಾಜಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಮೀರಿ ನಿಂತಿರುವ ವಿರಾಟ್ ಕೊಹ್ಲಿ ಅತಿ ವೇಗದಲ್ಲಿ 10000 ರನ್ ತಲುಪಿದ್ದರು. ಅಲ್ಲದೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಹ್ಯಾಟ್ರಿಕ್ ಶತಕ ಸೇರಿದಂತೆ ಬರೋಬ್ಬರಿ 151ರ ಸರಾಸರಿಯಲ್ಲಿ 453 ರನ್ ಕಲೆ ಹಾಕಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌