ಆ್ಯಪ್ನಗರ

ತವರಿನಲ್ಲಿ ಹರಿಣಗಳ ವಿರುದ್ಧ ಸೋಲಿನ ರುಚಿ ಅನುಭವಿಸಿದ ಕಿವೀಸ್‌ ಪಡೆ

ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಏಕದಿನ ಸರಣಿಯನ್ನು 3-2ರ ಅಂತರದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಶಪಡಿಸಿಕೊಂಡಿದೆ. ಇದರೊಂದಿಗೆ ತವರಿನಲ್ಲಿ ಕಿವೀಸ್ ಪಡೆ ಬಲಿಷ್ಠ ಹರಿಣಗಳ ಮುಂದೆ ಸೋಲಿನ ರುಚಿ ಅನುಭವಿಸಿದೆ.

ಟೈಮ್ಸ್ ಆಫ್ ಇಂಡಿಯಾ 4 Mar 2017, 3:00 pm
ಆಕ್ಲೆಂಡ್: ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಏಕದಿನ ಸರಣಿಯನ್ನು 3-2ರ ಅಂತರದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಶಪಡಿಸಿಕೊಂಡಿದೆ. ಇದರೊಂದಿಗೆ ತವರಿನಲ್ಲಿ ಕಿವೀಸ್ ಪಡೆ ಬಲಿಷ್ಠ ಹರಿಣಗಳ ಮುಂದೆ ಸೋಲಿನ ರುಚಿ ಅನುಭವಿಸಿದೆ.
Vijaya Karnataka Web south africa crush new zealand take odi series 3 2
ತವರಿನಲ್ಲಿ ಹರಿಣಗಳ ವಿರುದ್ಧ ಸೋಲಿನ ರುಚಿ ಅನುಭವಿಸಿದ ಕಿವೀಸ್‌ ಪಡೆ


ಐದನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿದ್ದ ಕಿವೀಸ್ ಪಡೆ 41.1 ಓವರ್‌ಗಳಲ್ಲಿ ಕೇವಲ 149 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಾಲ್ಕನೇ ಏಕದಿನ ಪಂದ್ಯದಲ್ಲಿ ಅಜೇಯ 180 ರನ್ ಗಳಿಸುವ ಮೂಲಕ ತಂಡಕ್ಕೆ ಅಗತ್ಯ ಗೆಲುವು ಒದಗಿಸಿಕೊಟ್ಟಿದ್ದ ಮಾರ್ಟಿನ್ ಗುಪ್ಟಿಲ್ (4) ಅವರನ್ನು ಆರಂಭದಲ್ಲೇ ಕ್ಲೀನ್ ಬೌಲ್ಡ್ ಮಾಡುವ ಮೂಲಕ ದ.ಆಫ್ರಿಕಾ ವೇಗಿ ಕಗಿಸೊ ರಬಡ, ಸಮಕಾಲೀನ ಕ್ರಿಕೆಟ್‌ನಲ್ಲಿ ಪರಿಣಾಮಕಾರಿ ವೇಗಿ ಎಂಬುದನ್ನು ನಿರೂಪಿಸಿದರು.

ನಿಖರ ದಾಳಿ ಸಂಘಟಿಸಿದ ರಬಡ ಮೂರು ಹಾಗೂ ಇಮ್ರಾನ್ ತಾಹೀರ್ ಮತ್ತು ಪೆಹ್ಲುಕಾಯೊ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿ ಕವೀಸ್ ಪಡೆಗೆ ಆಘಾತ ನೀಡಿದರು.

ಬಳಿಕ ಸುಲಭ ಮೊತ್ತವನ್ನು ಬೆನ್ನತ್ತಿದ್ದ ದ.ಆಫ್ರಿಕಾ ಆರಂಭದಲ್ಲೇ ಡಿ ಕಾಕ್ (6) ಹಾಗೂ ಹಾಶೀಮ್ ಆಮ್ಲಾ (8) ಹಾಗೂ ಜಿಪಿ ಡ್ಯುಮಿನಿ (3) ರೂಪದಲ್ಲಿ ಆಘಾತವನ್ನು ಎದುರಿಸಿದರೂ ಫಾವ್ ಡು ಪ್ಲೆಸ್ಸಿಸ್ (51*) ಹಾಗೂ ಡೇವಿಡ್ ಮಿಲ್ಲರ್ (45*) ತಂಡವನ್ನು ಗೆಲುವಿನ ಗೆರೆ ದಾಟಿಸಿದರು. ಈ ನಡುವೆ 23 ರನ್ ಗಳಿಸಿದ ನಾಯಕ ಎಬಿ ಡಿ ವಿಲಿಯರ್ಸ್ ತಂಡದ ಗೆಲುವನ್ನು ಸುಲಭಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌