ಆ್ಯಪ್ನಗರ

ಮ್ಯಾಥ್ಯೂಸ್‌ಗೆ ಮತ್ತೆ ಲಂಕಾ ಕಪ್ತಾನಗಿರಿ

ಶ್ರೀಲಂಕಾದ ಅನುಭವಿ ಆಲ್‌ರೌಂಡರ್ ಆಟಗಾರ ಆ್ಯಂಗಲೋ ಮ್ಯಾಥ್ಯೂಸ್ ಅವರಿಗೆ ಮತ್ತೆ ಏಕದಿನ ತಂಡದ ಕಪ್ತಾನಗಿರಿಯನ್ನು ವಹಿಸಿಕೊಡಲಾಗಿದೆ.

TIMESOFINDIA.COM 9 Jan 2018, 10:40 pm
ಕೊಲಂಬೊ: ಶ್ರೀಲಂಕಾದ ಅನುಭವಿ ಆಲ್‌ರೌಂಡರ್ ಆಟಗಾರ ಆ್ಯಂಗಲೋ ಮ್ಯಾಥ್ಯೂಸ್ ಅವರಿಗೆ ಮತ್ತೆ ಏಕದಿನ ತಂಡದ ಕಪ್ತಾನಗಿರಿಯನ್ನು ವಹಿಸಿಕೊಡಲಾಗಿದೆ.
Vijaya Karnataka Web sri lanka bring back mathews as limited overs captain
ಮ್ಯಾಥ್ಯೂಸ್‌ಗೆ ಮತ್ತೆ ಲಂಕಾ ಕಪ್ತಾನಗಿರಿ


ಕಳೆದ ಕೆಲವು ಸರಣಿಗಳಲ್ಲಿ ಅನೇಕ ಬಾರಿ ನಾಯಕತ್ವ ಬದಲಾವಣೆಗಳ ಬಳಿಕ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಮತ್ತೆ ಮ್ಯಾಥ್ಯೂಸ್ ಮೊರೆ ಹೋಗಲು ನಿರ್ಧರಿಸಿದೆ.

ಕಳೆದ ವರ್ಷ ಜಿಂಬಾಬ್ವೆ ವಿರುದ್ಧ ಎದುರಾದ ಆಘಾತಕಾರಿ ಸೋಲಿನ ಬಳಿಕ ಮ್ಯಾಥ್ಯೂಸ್ ನಾಯಕತ್ವ ಸ್ಥಾನವನ್ನು ಬಿಟ್ಟು ಕೊಟ್ಟಿದ್ದರು. ಅಲ್ಲಿಂದ ಬಳಿಕ ಟೆಸ್ಟ್ ನಾಯಕನಾಗಿ ದಿನೇಶ್ ಚಾಂದಿಮಾಲ್ ಹಾಗೂ ಏಕದಿನ ತಂಡಕ್ಕೆ ಕಪ್ತಾನರಾಗಿ ಉಪುಲ್ ತರಂಗ ಅವರನ್ನು ನೇಮಕಗೊಳಿಸಲಾಗಿತ್ತು.

ಕೊನೆಗೆ ಉಪುಲ್ ತರಂಗ ಸ್ಥಾನಕ್ಕೆ ತಿಸರಾ ಪರೇರಾ ಅವರನ್ನು ನಾಯಕನಾಗಿ ನೇಮಕಗೊಳಿಸಲಾಗಿತ್ತು. ಆದರೆ ತಂಡವು ವೈಫಲ್ಯ ಅನುಭವಿಸಿತ್ತು. ಇದೀಗ ಮತ್ತೆ ಮ್ಯಾಥ್ಯೂಸ್ ಮೊರೆ ಹೋಗಲಾಗಿದೆ.

ನಾನು ನಾಯಕತ್ವ ಸ್ಥಾನ ಬಿಟ್ಟುಕೊಡುವಾಗ ಮತ್ತೆ ಕಪ್ತಾನಗಿರಿ ವಹಿಸಲಿದ್ದೇನೆಂದು ಅಂದುಕೊಂಡಿರಲಿಲ್ಲ ಎಂದು ಮ್ಯಾಥ್ಯೂಸ್ ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ಇಂಗ್ಲೆಂಡ್‌ನಲ್ಲಿ 2019ರಲ್ಲಿ ಸಾಗಲಿರುವ ಏಕದಿನ ವಿಶ್ವಕಪ್ ವರೆಗೂ ಮ್ಯಾಥ್ಯೂಸ್ ನಾಯಕರಾಗಿ ಮುಂದುವರಿಯುವ ಸಾಧ್ಯತೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌