ಆ್ಯಪ್ನಗರ

ವಿಂಡೀಸ್ ವಿರುದ್ಧ ಭಾರತೀಯ ವನಿತೆಯರಿಗೆ 1 ರನ್ ಅಂತರದ ವಿರೋಚಿತ ಸೋಲು!

ನಾಯಕಿ ಸ್ಟೆಫಾನಿ ಟೇಲರ್ ಹಾಗೂ ಅನಿಸಾ ಮೊಹಮ್ಮದ್ ಭರ್ಜರಿ ಪ್ರದರ್ಶನದ ನೆರವಿನಿಂದ ವೆಸ್ಟ್‌ಇಂಡೀಸ್ ಮಹಿಳಾ ಕ್ರಿಕೆಟ್ ತಂಡವು ಭಾರತ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ 1 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

Vijaya Karnataka Web 2 Nov 2019, 12:31 pm
ಆ್ಯಂಟಿಗುವಾ: ವೆಸ್ಟ್‌ಇಂಡೀಸ್ ಪ್ರವಾಸದಲ್ಲಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆರಂಭದಲ್ಲೇ ನಿರಾಸೆ ಎದುರಾಗಿದೆ. ಆ್ಯಂಟಿಗುವಾದ ನಾರ್ತ್ ಸೌಂಡ್ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಒಂದು ರನ್ ಅಂತರದ ವಿರೋಚಿತ ಸೋಲು ಕಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೆಸ್ಟ್‌ಇಂಡೀಸ್ 1-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ.
Vijaya Karnataka Web stafanie-taylor


ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್, ನಾಯಕಿ ಸ್ಟೆಫಾನಿ ಟೇಲರ್ (94), ನತಾಶಾ ಮೆಕ್‌ಲೀನ್ (51) ಹಾಗೂ ಚೇಡೀನ್ ನೇಷನ್ (43) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 225 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಭಾರತದ ಪರ ಶಿಖಾ ಪಾಂಡೆ ಹಾಗೂ ದೀಪ್ತಿ ಶರ್ಮಾ ತಲಾ ಎರಡು ವಿಕೆಟುಗಳನ್ನು ಹಂಚಿಕೊಂಡರು.

ಮಗದೊಂದು ವಿವಾದದ ಸುಳಿಯಿಂದ ಸ್ಟೀವ್ ಸ್ಮಿತ್ ಸ್ವಲ್ಪದರಲ್ಲೇ ಪಾರು!

ಬಳಿಕ ಗುರಿ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 21 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 78 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಅಷ್ಟೇ ಯಾಕೆ 39.2 ಓವರ್‌ಗಳಲ್ಲಿ ಎರಡು ವಿಕೆಟ್ ಮಾತ್ರ ನಷ್ಟಕ್ಕೆ 170 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಅಂದರೆ ಅಂತಿಮ 64 ಎಸೆತಗಳಲ್ಲಿ ಎಂಟು ವಿಕೆಟ್ ಬಾಕಿ ಉಳಿದಿರುವಂತೆಯೇ ಗೆಲುವಿಗೆ 56 ರನ್‌ಗಳ ಅವಶ್ಯಕತೆ ಮಾತ್ರ ಇತ್ತು.

ಆದರೆ ಈ ಸಂದರ್ಭದಲ್ಲಿ ಅನಿಸಾ ಮೊಹಮ್ಮದ್ ಮಾರಕ ದಾಳಿಗೆ ತತ್ತರಿಸಿದ ಭಾರತೀಯ ವನಿತೆಯರು ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಅಂತಿಮವಾಗಿ 224 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡು ಒಂದು ರನ್ ಅಂತರದ ವಿರೋಚಿತ ಸೋಲನ್ನು ಕಂಡಿತು. ಬೌಲಿಂಗ್‌ನಲ್ಲೂ ಮಿಂಚಿದ ವಿಂಡೀಸ್ ನಾಯಕಿ ಸ್ಟೆಫಾನಿ ಟೇಲರ್ ಎರಡು ವಿಕೆಟುಗಳನ್ನು ಕಬಳಿಸಿದರು.

ಆಸೀಸ್‌ನಿಂದ ಲಂಕಾ ದಹನ; ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಡೇವಿಡ್ ವಾರ್ನರ್

ಭಾರತ ಕೊನೆಯ ಎಂಟು ವಿಕೆಟುಗಳನ್ನು 54 ರನ್ ಅಂತರದಲ್ಲಿ ಕಳೆದುಕೊಂಡಿತು. ಆರಂಭಿಕ ಆಟಗಾರ್ತಿಯರಾದ ಪ್ರಿಯಾ ಪೂನಿಯಾ (75) ಹಾಗೂ ಜೆಮಿಮಾ ರೊಡ್ರಿಗಸ್ (41) ಮಾತ್ರ ಅಲ್ಪ ಮಟ್ಟಿನ ಹೋರಾಟ ತೋರಿದರು. ಆದರೆ ನಾಯಕಿ ಮಿಥಾಲಿ ರಾಜ್ (20) ಸೇರಿದಂತೆ ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ವುವೆನ್‌ಗಳು ವೈಫಲ್ಯ ಅನುಭವಿಸಿದರು.

ಇನ್ನುಳಿದಂತೆ ಪೂನಂ ರಾವುತ್ (22), ಹರ್ಮನ್‌ಪ್ರೀತ್ ಕೌರ್ (5), ದೀಪ್ತಿ ಶರ್ಮಾ (19), ತನಿಯಾ ಭಾಟಿಯಾ (5), ಶಿಖಾ ಪಾಂಡೆ (5), ಏಕ್ತಾ ಬಿಶ್ಕ್ತ್ (0) ಹಾಗೂ ಪೂನಂ ಯಾದವ್ (0) ನಿರಾಸೆ ಮೂಡಿಸಿದರು. ಇದರಿಂದಾಗಿ ಜೂಲನ್ ಗೋಸ್ವಾಮಿ (14*) ವಿಕೆಟ್ ಇನ್ನೊಂದು ತುದಿಯಲ್ಲಿ ಏಕಾಂಗಿಯಾಗಿ ಉಳಿಯಬೇಕಾಯಿತು. ಕೊನೆಯ ಓವರ್‌ನಲ್ಲಿ ಭಾರತದ ಗೆಲುವಿಗೆ ಎಂಟು ರನ್‌ಗಳ ಅವಶ್ಯಕತೆಯಿತ್ತು. ಆದರೆ ಕೊನೆಯ ಎರಡು ವಿಕೆಟ್‌ಗಳು ನಷ್ಟವಾಗುವುದರೊಂದಿಗೆ ಸೋಲಿಗೆ ಶರಣಾಯಿತು.

ದಿಲ್ಲಿ ಟಿ20 ಪಂದ್ಯ ಆಡಲು ರೆಡಿ; ಗಂಗೂಲಿಗೆ ಭರವಸೆ ನೀಡಿದ ರೋಹಿತ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌