ಆ್ಯಪ್ನಗರ

ಗಂಗೆಯಲ್ಲಿ ಸ್ನೇಹಿತನ ಅಸ್ಥಿ ವಿಸರ್ಜಿಸಿದ ಸ್ಟೀವ್ ವಾ

ಸಿಡ್ನಿ ಮೂಲದ ಶೂ ಶೈನರ್ ಸ್ನೇಹಿತರೊಬ್ಬರ ಅಸ್ಥಿಯನ್ನು ಗಂಗೆಯಲ್ಲಿ ವಿಸರ್ಜಿಸಿದ್ದಾರೆ.

ಏಜೆನ್ಸೀಸ್ 9 Mar 2017, 1:58 pm
ವಾರಾಣಸಿ: ಕ್ರಿಕೆಟ್‌ ಪಿಚ್‌ನಲ್ಲಿ ಭಾರತ-ಆಸ್ಟ್ರೇಲಿಯಾ ಸಮರ ನಿನ್ನೆ ಮೊನ್ನೆಯದಲ್ಲ. ಅದು ಬೆಂಗಳೂರು ಟೆಸ್ಟ್ ವೇಳೆಯೂ ಮುಂದುವರಿದಿದೆ ಅಷ್ಟೆ. ಇದೇನೇ ಇರಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ವೀವ್ ವಾಗೂ ಭಾರತಕ್ಕೂ ಅವಿನಾಭಾವ ಸಂಬಂಧವಿದೆ. ಕೋಲ್ಕತ್ತಾದಲ್ಲಿ ಕೈಗೆತ್ತಿಗೊಂಡ ಅನೇಕ ಧಾರ್ಮಿಕ ಕಾರ್ಯಗಳಿಗೆ ಅವರು ಭೇಟಿ ನೀಡುತ್ತಲೇ ಇರುತ್ತಾರೆ.
Vijaya Karnataka Web steve waugh in varanasi to scatter ashes of sydney based shoe shiner
ಗಂಗೆಯಲ್ಲಿ ಸ್ನೇಹಿತನ ಅಸ್ಥಿ ವಿಸರ್ಜಿಸಿದ ಸ್ಟೀವ್ ವಾ


ಇದೀಗ ಭಾರತದೊಂದಿಗಿನ ನಂಟನ್ನು ವಾ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸಿಡ್ನಿ ಮೂಲದ ಶೂ ಶೈನರ್ ಸ್ನೇಹಿತರೊಬ್ಬರ ಅಸ್ಥಿಯನ್ನು ಗಂಗೆಯಲ್ಲಿ ವಿಸರ್ಜಿಸಿದ್ದಾರೆ. ಅನಾಥರಾಗಿದ್ದ ಆ ಸ್ನೇಹಿತನಿಗೆ ಮುಕ್ತಿ ತೋರಲು ವಾ ಇಂಥದ್ದೊಂದು ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ.

'ಜೀವನದ ಅತ್ಯದ್ಭುತ ಕ್ಷಣವಿದು. ಅತೀವ ಆಧ್ಯಾತ್ಮಿಕ ಭಾವನೆ ಮೂಡಿಸುವ ಈ ನಗರಕ್ಕೊಮ್ಮೆ ಭೇಟಿ ನೀಡಲು ಬಯಸಿದ್ದೆ. ಸ್ನೇಹಿತನ ಅಸ್ಥಿಯನ್ನು ಗಂಗೆಯಲ್ಲಿ ವಿಸರ್ಜಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಕುಟುಂಬವಿಲ್ಲದೇ ನ್ನನ ಸ್ನೇಹಿತ ಕಷ್ಟದ ದಿನಗಳನ್ನು ನೋಡಿದ್ದ. ಗಂಗೆಯಲ್ಲಿ ಅಸ್ಥಿ ವಿಸರ್ಜಿಸಬೇಕೆಂಬುವುದು ಆತನ ಅಂತಿಮ ಇಚ್ಛೆಯಾಗಿತ್ತು. ಅವನಿಗಾಗಿ ನಾನು ಈ ಸಣ್ಣ ಕಾರ್ಯವನ್ನು ಮಾಡಿರುವುದು ತೃಪ್ತಿ ತಂದಿದೆ. ಆತನ ಜೀವನದ ಸಂಭ್ರಮದ ಕ್ಷಣವಿದು,' ಎನ್ನುತ್ತಾರೆ ವಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌