ಆ್ಯಪ್ನಗರ

ಐಪಿಎಲ್‌ ಬದಿಗೆ ಸರಿಸಿದ ಮ್ಯಾಕ್ಸ್‌ವೆಲ್

ಐಪಿಎಲ್ ಹರಾಜಿನಿಂದ ಹೊರಗುಳಿದಿರುವ ಮ್ಯಾಕ್ಸ್‌ವೆಲ್ ಇದೀಗ ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ಪುನರಾಗಮವನ್ನು ಎದುರು ನೋಡುತ್ತಿದ್ದಾರೆ. ತಾನು ಟೆಸ್ಟ್ ಕ್ರಿಕೆಟ್ ಆಡಲು ಬಯಸುತ್ತಿರುವುದಾಗಿ ಮ್ಯಾಕ್ಸ್‌ವೆಲ್ ತಿಳಿಸಿದ್ದಾರೆ.

TOI.in 12 Dec 2018, 12:36 pm
ಮೆಲ್ಬೋರ್ನ್: ಇಂಡಿಯನ್ ಪ್ರೀಮಿಯರ್ ಲೀಗ್ ಜನಪ್ರಿಯ ಆಟಗಾರರಲ್ಲಿ ಓರ್ವನಾಗಿರುವ ಆಸ್ಟ್ರೇಲಿಯಾದ ಹೊಡೆಬಡಿಯ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್ ಈಗ ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗನ್ನು ಬದಿಗೆ ಸರಿಸಲು ನಿರ್ಧರಿಸಿದ್ದಾರೆ.
Vijaya Karnataka Web glenn-maxwell-02


ಇದರ ಹಿಂದಿರುವ ಪ್ರಮುಖ ಕಾರಣ ಇಷ್ಟೇ. ಆಸ್ಟ್ರೇಲಿಯಾ ಪ ಮಗದೊಮ್ಮೆ ಟೆಸ್ಟ್ ಕ್ರಿಕೆಟ್ ಆಡುವ ಅತೀವ ಇಂಗಿತ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಇಂಗ್ಲೆಂಡ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಹಾಗೂ ಬಿಡುವಿಲ್ಲದ ವೇಳಾಪಟ್ಟಿಯ ಹಿನ್ನಲೆಯಲ್ಲಿ ಐಪಿಎಲ್ ಹರಾಜಿನಿಂದ ಮ್ಯಾಕ್ಸ್‌ವೆಲ್ ಹಿಂದೆ ಸರಿದಿದ್ದರು.

ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಡೇರ್‌ಡೆವಿಲ್ಸ್ ತಂಡಗಳನ್ನು ಮ್ಯಾಕ್ಸ್‌ವೆಲ್ ಪ್ರತಿನಿಧಿಸಿದ್ದಾರೆ. ಇದೀಗ ಐಪಿಎಲ್‌ನಿಂದ ಹಿಂದೆ ಸರಿಯುವ ನಿರ್ಧಾರ ಅತ್ಯಂತ ಕಠಿಣವಾಗಿತ್ತು. ಇದೊಂದು ದೊಡ್ಡ ನಿರ್ಧಾರ ಎಂದಿದ್ದಾರೆ.

ಮತ್ತೆ ಟೆಸ್ಟ್ ಕ್ರಿಕೆಟ್ ಆಡಬೇಕೆಂಬ ಆಸೆ ಆಳವಾಗಿದೆ. ಟೆಸ್ಟ್ ಕ್ರಿಕೆಟ್ ಕಿಚ್ಚು ಹೊತ್ತಿದೆ. ನನ್ನಲ್ಲಿ ಬೇಕಾದಷ್ಟು ಕ್ರಿಕೆಟ್ ಬಾಕಿ ಉಳಿದಿದ್ದು, ಮಗದೊಮ್ಮೆ ಟೆಸ್ಟ್ ಕ್ರಿಕೆಟ್ ಆಡಲು ಬಯಸುತ್ತೇನೆ ಎಂದು ನುಡಿದಿದ್ದಾರೆ.

30ರ ಹರೆಯದ ಮ್ಯಾಕ್ಸ್‌ವೆಲ್ 2007ರಲ್ಲಿ ಕೊನೆಯದಾಗಿ ಟೆಸ್ಟ್ ಪಂದ್ಯ ಆಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌