ಆ್ಯಪ್ನಗರ

ಬೌಂಡರಿ ಕೌಂಟ್ ನಿಯಮಕ್ಕೆ ಬ್ರೇಕ್; ಕಿವೀಸ್ ಆಟಗಾರನಿಂದಲೇ ಟ್ರೋಲ್‌ಗೆ ಗುರಿಯಾದ ಐಸಿಸಿ

ಕೊನೆಗೂ ವಿವಾದಾತ್ಮಕ ಬೌಂಡರಿ ಲೆಕ್ಕಾಚಾರದ ನಿಯಮಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬ್ರೇಕ್ ನೀಡಿದೆ. ಆದರೆ ತಡವಾಗಿ ಮಾಡಿದ ನಿಯಮದ ಬಗ್ಗೆ ನ್ಯೂಜಿಲೆಂಡ್ ಆಟಗಾರ ಟ್ರೋಲ್ ಮಾಡಿದ್ದಾರೆ.

Vijaya Karnataka Web 15 Oct 2019, 1:04 pm
ಹೊಸದಿಲ್ಲಿ: ಐಸಿಸಿ 2019 ವಿವಾದಾತ್ಮಕ ಫೈನಲ್ ಪಂದ್ಯದಲ್ಲಿ ಬೌಂಡರಿ ಲೆಕ್ಕಾಚಾರದಲ್ಲಿ ನ್ಯೂಜಿಲೆಂಡ್ ಮಣಿಸಿದ ಇಂಗ್ಲೆಂಡ್ ಚೊಚ್ಚಲ ಬಾರಿಗೆ ವಿಶ್ವಕಪ್‌ಗೆ ಮುತ್ತಿಕ್ಕಿತು.
Vijaya Karnataka Web world-cup-final


ಜುಲೈ 14ರಂದು ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಎಂಟು ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 50 ಓವರ್‌ಗಳಿಗೆ ಅಷ್ಟೇ ರನ್‌ಗಳಿಗೆ ಆಲೌಟ್ ಆಗಿತ್ತು. ಬಳಿಕ ಸೂಪರ್ ಓವರ್‌ನಲ್ಲೂ ಇತ್ತಂಡಗಳು 15 ರನ್ ಗಳಿಸಿದ ಪರಿಣಾಮ ಪಂದ್ಯ ಎರಡನೇ ಬಾರಿಗೆ ರೋಚಕ ಟೈ ಕಂಡಿತ್ತು.

ಕೆಟ್ಟಮೇಲೆ ಬುದ್ಧಿಬಂತು, ವಿಶ್ವಕಪ್‌ ನಿರ್ಧರಿಸಿದ ಬೌಂಡರಿ ಕೌಂಟ್‌ ನಿಯಮಕ್ಕೆ ಕೊನೆಗೂ ಎಳ್ಳು ನೀರು!

ಆದರೆ ಪಂದ್ಯದಲ್ಲಿ ಅತಿ ಹೆಚ್ಚು ಬೌಂಡರಿ (ಸಿಕ್ಸರ್ ಸೇರಿದಂತೆ) ಲೆಕ್ಕಾಚಾರದ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜಯಿಯೆಂದು ಘೋಷಿಸಲಾಯಿತು. ಐಸಿಸಿ ಈ ನಿಯಮವು ಸಾಕಷ್ಟು ಟೀಕೆಗೆ ಗುರಿಯಾಗಿದೆ. ಕೊನೆಗೂ ತನ್ನ ನಿಮಯವನ್ನು ಬದಲಾಯಿಸಲು ಐಸಿಸಿ ಮುಂದಾಗಿದೆ. ಹೊಸ ನಿಮಯದ ಪ್ರಕಾರ ಫಲಿತಾಂಶ ದೊರೆಯುವ ವರೆಗೂ ಸೂಪರ್ ಓಪರ್ ಆಟವನ್ನು ಮುಂದುವರಿಸಲಾಗುವುದು.

ಪಂದ್ಯ ಹಾಗೂ ಸೂಪರ್ ಓಪರ್ ಟೈ ಆದಾಗ ಈ ನಿಮಯವನ್ನು ಬಳಕೆ ಮಾಡಲಾಗಿತ್ತು. ಇದರಿಂದ ನ್ಯೂಜಿಲೆಂಡ್‌ಗೆ ಚೊಚ್ಚಲ ವಿಶ್ವಕಪ್ ಗೆಲುವು ಕೈತಪ್ಪಿತು. ಅಲ್ಲದೆ ಸತತವಾಗಿ ಎರಡನೇ ಬಾರಿಗೆ ಏಕದಿನ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಡಬೇಕಾಯಿತು.

ಗಂಗೂಲಿ ಬಿಸಿಸಿಐ ನೂತನ ಬಾಸ್; ರವಿ ಶಾಸ್ತ್ರಿಗೆ ನಡುಕ ಸೃಷ್ಟಿಯಾಗಲು ಕಾರಣ ಏನು?

ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವಿರುದ್ಧ ನ್ಯೂಜಿಲೆಂಡ್ ಆಟಗಾರ ಜೇಮ್ಸ್ ನಿಶಮ್ ತಿರುಗಿ ಬಿದ್ದಿದ್ದಾರೆ. ಅಲ್ಲದೆ ಐಸಿಸಿ ವ್ಯಂಗ್ಯ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ತೋಡಿಕೊಂಡಿದ್ದಾರೆ.

ಇದೇ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಓವರ್‌ಥ್ರೋಗಾಗಿ ಆರು ರನ್‌ಗಳನ್ನು ದಯಪಾಲಿಸಲಾಗಿತ್ತು. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಬೆನ್ ಸ್ಟೋಕ್ಸ್ ದೇಹಕ್ಕೆ ತಾಗಿದ ಚೆಂಡು ನೇರವಾಗಿ ಬೌಂಡರಿ ಗೆರೆ ದಾಟಿತ್ತು. ಬಳಿಕ ಗರಿಷ್ಠ ಐದು ರನ್‌ಗಳನ್ನಷ್ಟೇ ದಯಪಾಲಿಸಬೇಕಿತ್ತು ಎಂದು ಅಂಪೈರ್ ಕುಮಾರ ಧರ್ಮಸೇನಾ ತಪ್ಪೊಪ್ಪಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌