ಆ್ಯಪ್ನಗರ

ದ್ವಿತೀಯ ಕದನ; ನಾಗ್ಪುರ ಬಂದಿಳಿದ ಭಾರತ , ಆಸೀಸ್

ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ನಡುವಣ ದ್ವಿತೀಯ ಪಂದ್ಯವು ಮಾರ್ಚ್ 05ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರಂತೆ ಇತ್ತಂಡಗಳ ಆಟಗಾರರು ನಗರಕ್ಕೆ ಬಂದಿಳಿದಿದ್ದಾರೆ.

Vijaya Karnataka Web 3 Mar 2019, 4:45 pm
ನಾಗ್ಪುರ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರು ದ್ವಿತೀಯ ಏಕದಿನ ಪಂದ್ಯಕ್ಕೆ ನಾಗ್ಪುರದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂ ಆತಿಥ್ಯ ವಹಿಸುತ್ತಿದೆ. ಈ ಪಂದ್ಯವು ಮಾರ್ಚ್ 05 ಮಂಗಳವಾರದಂದು ನಡೆಯಲಿದೆ.
Vijaya Karnataka Web team-india-odi


ಇದರಂತೆ ಟೀಮ್ ಇಂಡಿಯಾ ಆಟಗಾರರು ನಾಗ್ಪುರಕ್ಕೆ ಆಗಮಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದೆಲ್ಲ ಆಟಗಾರರು ಶನಿವಾರದಂದು ನಾಗ್ಪುರ ಬಂದಿಳಿದರು.

ಹೈದರಾಬಾದ್‌ನಲ್ಲಿ ಶನಿವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆರು ವಿಕೆಟುಗಳ ಅಂತರದ ಗೆಲುವು ದಾಖಲಿಸಿತ್ತು. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿತ್ತು.

ನಾಗ್ಪುರದ ಬಳಿಕ ಮೂರು, ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಿಗೆ ಅನುಕ್ರಮವಾಗಿ ರಾಂಚಿ, ಮೊಹಾಲಿ ಹಾಗೂ ದಿಲ್ಲಿ ನಗರಗಳು ಆತಿಥ್ಯ ವಹಿಸಲಿದೆ. ಈ ಪಂದ್ಯಗಳು ಮಾರ್ಚ್ 08 (ಶುಕ್ರವಾರ), 10 (ಭಾನುವಾರ) ಹಾಗೂ 13ನೇ (ಬುಧವಾರ) ದಿನಾಂಕಗಳಲ್ಲಿ ನಡೆಯಲಿದೆ.

ಏಕದಿನ ಸರಣಿಗೂ ಮುನ್ನ ನಡೆದ ಎರಡು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಟೀಮ್ ಇಂಡಿಯಾ 0-2ರ ಅಂತರದ ವೈಟ್‌ವಾಶ್ ಮುಖಭಂಗಕ್ಕೊಳಗಾಗಿತ್ತು.

ಅತ್ತ ಆಸ್ಟ್ರೇಲಿಯಾ ಕ್ರಿಕೆಟಿಗರು ಸಹ ಭಾನುವಾರದಂದೇ ನಾಗ್ಪುರಕ್ಕೆ ಬಂದಿಳಿದಿದೆ. ಇದೀಗ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌