ಆ್ಯಪ್ನಗರ

India Squad: ಕ್ಯಾಪ್ಟನ್ ಕೊಹ್ಲಿ ಬ್ಯಾಕ್; ಮಯಾಂಕ್‌ಗೆ ಚೊಚ್ಚಲ ಬುಲಾವ್

ಕರ್ನಾಟಕದ ಮಯಾಂಕ್ ಅಗರ್ವಾಲ್‌ಗೆ ಕೊನೆಗೂ ಸಿಕ್ಕಿದ ಮನ್ನಣೆ

Vijaya Karnataka Web 29 Sep 2018, 9:59 pm
ಮುಂಬಯಿ: ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ದ ತವರು ನೆಲದಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಇದರಂತೆ ಏಷ್ಯಾ ಕಪ್ ವೇಳೆ ಹೊರಗುಳಿದಿದ್ದ ಖಾಯಂ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಸೇರಿಕೊಂಡಿದ್ದಾರೆ. ಅತ್ತ ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಅವರನ್ನು ಕೈಬಿಡಲಾಗಿದೆ. ರೋಹಿತ್ ಶರ್ಮಾ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.
Vijaya Karnataka Web mayank-agarwal-05


ಸಾಕಷ್ಟು ಚರ್ಚಗೆ ಕಾರಣವಾಗಿರುವ ಕರ್ನಾಟಕದ ಮಯಾಂಕ್ ಅಗರ್ವಾಲ್ ಕೊನೆಗೂ ಟೀಮ್ ಇಂಡಿಯಾದಿಂದ ಚೊಚ್ಚಲ ಬುಲಾವ್ ಪಡೆದಿದ್ದಾರೆ. ಇವರ ಜೊತೆಗೆ ಮೊಹಮ್ಮದ್ ಸಿರಾಜ್ ಹಾಗೂ ಕುಲ್‌ದೀಪ್ ಯಾದವ್‌ಗೂ ಅವಕಾಶ ಕಲ್ಪಿಸಲಾಗಿದೆ. ಆದರೆ ಕರುಣ್ ನಾಯರ್ ಅವರನ್ನು ಕೈಬಿಡಲಾಗಿದೆ.

ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಕಲ್ಪಿಸಲಾಗಿದೆ. ಆದರೆ ಗಾಯಾದ ಸಮಸ್ಯೆಗೆ ತುತ್ತಾಗಿರುವ ಇಶಾಂತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಫಿಟ್ನೆಸ್ ಮರಳಿ ಪಡೆದಿರುವ ಆರ್. ಅಶ್ವಿನ್ ತಂಡದಲ್ಲಿದ್ದಾರೆ.

ಇಂಗ್ಲೆಂಡ್ ಸರಣಿಯಲ್ಲಿ ಕೊನೆಯ ಎರಡು ಪಂದ್ಯಗಳಿಗಾಗಿ ತಂಡದಲ್ಲಿ ಕಾಣಿಸಿಕೊಂಡಿರುವ ಪೃಥ್ವಿ ಶಾ ಹಾಗೂ ಹನುಮ ವಿಹಾರಿ ಅವರನ್ನು ಉಳಿಸಿಕೊಳ್ಳಲಾಗಿದೆ.

ಇನ್ನುಳಿದಂತೆ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್ ಮತ್ತು ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಶಾರ್ದೂಲ್ ಠಾಕೂರ್ ತಂಡದಲ್ಲಿದ್ದಾರೆ. ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ರಿಷಭ್ ಪಂತ್ ವಹಿಸಲಿದ್ದಾರೆ.

ಭಾರತ ತಂಡ ಇಂತಿದೆ:

ವಿರಾಟ್ ಕೊಹ್ಲಿ(ನಾಯಕ),
ಕೆಎಲ್ ರಾಹುಲ್,
ಪೃಥ್ವಿ ಶಾ,
ಮಯಾಂಕ್ ಅಗರ್ವಾಲ್,
ಚೇತೇಶ್ವರ ಪೂಜಾರ,
ಅಜಿಂಕ್ಯ ರಹಾನೆ (ಉಪನಾಯಕ),
ಹನುಮ ವಿಹಾರಿ,
ರಿಷಭ್ ಪಂತ್ (ವಿಕೆಟ್ ಕೀಪರ್),
ರವೀಂದ್ರ ಜಡೇಜಾ,
ಕುಲ್‌ದೀಪ್ ಯಾದವ್,
ಮೊಹಮ್ಮದ್ ಶಮಿ,
ಉಮೇಶ್ ಯಾದವ್,
ಮೊಹಮ್ಮದ್ ಸಿರಾಜ್,
ಶಾರ್ದೂಲ್ ಠಾಕೂರ್

ತಂಡಕ್ಕೆ ಸೇರಿದವರು: ಮಯಾಂಕ್ ಅಗರ್ವಾಲ್, ಮೊಹಮ್ಮದ್ ಸಿರಾಜ್ ಮತ್ತು ಕುಲ್‌ದೀಪ್ ಯಾದವ್
ಕೈಬಿಟ್ಟ ಆಟಗಾರರು: ಶಿಖರ್ ಧವನ್, ಕರುಣ್ ನಾಯರ್ ಮತ್ತು ದಿನೇಶ್ ಕಾರ್ತಿಕ್
ವಿಶ್ರಾಂತಿ: ಜಸ್ಪ್ರೀತ್ ಬುಮ್ರಾ
ಗಾಯಾಳು: ಇಶಾಂತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ

ಟೆಸ್ಟ್ ಸರಣಿ ವೇಳಾಪಟ್ಟಿ:

ಮೊದಲ ಟೆಸ್ಟ್: ಅಕ್ಟೋಬರ್ 4ರಿಂದ 8ರ ವರೆಗೆ, ರಾಜ್‌ಕೋಟ್
ದ್ವಿತೀಯ ಟೆಸ್ಟ್: ಅಕ್ಟೋಬರ್ 12ರಿಂದ 16ರ ವರೆಗೆ, ಹೈದರಾಬಾದ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌