ಆ್ಯಪ್ನಗರ

ಅತಿ ದೊಡ್ಡ ಕರ್ತವ್ಯ ನಿಭಾಯಿಸಿದ ವಿರಾಟ್ ಕೊಹ್ಲಿ

ಲೋಕಸಭಾ ಚುನಾವಣೆ 2019ರಲ್ಲಿ ಆರನೇ ಹಂತದ ಚುನಾವಣೆಯ ಅಂಗವಾಗಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತದಾನ ಹಕ್ಕು ಚಲಾಯಿಸುವ ಮೂಲಕ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ.

Vijaya Karnataka Web 12 May 2019, 4:28 pm
ಹೊಸದಿಲ್ಲಿ: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ 18 ವರ್ಷ ದಾಟಿದ ಪ್ರತಿಯೊಬ್ಬರು ಮತದಾನ ಹಕ್ಕು ಚಲಾಯಿಸುವುದು ಬಹುದೊಡ್ಡ ಕರ್ತವ್ಯವಾಗಿದೆ.
Vijaya Karnataka Web virat-kohli-voting


ಇದೀಗ ಜೀವನದ ಅತಿ ದೊಡ್ಡ ಕರ್ತವ್ಯವಾದ ಮತದಾನ ಹಕ್ಕು ನಿರ್ವಹಿಸುವ ಮೂಲಕ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಲೋಕಸಭಾ ಚುನಾವಣೆ 2019ರ ಅಂಗವಾಗಿ ನಡೆದ ಆರನೇ ಹಂತದ ಚುನಾವಣೆಯಲ್ಲಿ ಹೊಸದಿಲ್ಲಿಯಿಂದ ವಿರಾಟ್ ಕೊಹ್ಲಿ ಮತದಾನ ಮಾಡಿದ್ದಾರೆ.

ಬೆಳಗ್ಗೆಯೇ ಗುರ್ಗಾಂತ್ ಮತಗಟ್ಟೆಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ವಿರಾಟ್ ಕೊಹ್ಲಿ ಮತದಾನ ಮಾಡಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.

ವಿರಾಟ್ ತಮ್ಮ ಸಂದೇಶದಲ್ಲಿ ಉತ್ತಮ ರಾಷ್ಟ್ರದ ನಿರ್ಮಾಣಕ್ಕಾಗಿ ಮತದಾನ ಮಾಡುವುದು ಪ್ರತಿಯೊಬ್ಬನ ಹಕ್ಕು ಹಾಗೂ ಜವಾಬ್ದಾರಿಯಾಗಿದೆ ಎಂದಿದ್ದಾರೆ.

ಮತದಾನ ಮಾಡಿದಾಗಲೂ ಅಭಿಮಾನಿಗಳ ಕಾಟ ವಿರಾಟ್‌ಗೆ ತಪ್ಪಿದ್ದಲ್ಲ. ಅಂತಿಮವಾಗಿ ಆಟೋಗ್ರಾಫ್ ನೀಡುವ ಮೂಲಕ ಗಮನ ಸೆಳೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌