ಆ್ಯಪ್ನಗರ

ಟೀಮ್ ಇಂಡಿಯಾ ಕೋಚ್ ರೇಸ್‌ನಲ್ಲಿ ವೀರು?

ರವಿಶಾಸ್ತ್ರಿ ಅವರಿಂದ ತೆರವಾಗಲಿರುವ ಟೀಮ್ ಇಂಡಿಯಾದ ಪ್ರಧಾನ ಕೋಚ್ ಹುದ್ದೆಗೆ ವೀರೇಂದ್ರ ಸೆಹ್ವಾಗ್, ಮಹೇಲಾ ಜಯವರ್ಧನೆ, ಗ್ಯಾರಿ ಕರ್ಸ್ಟನ್ ಹಾಗೂ ಟಾಮ್ ಮೂಡಿ ಅವರಿಂದ ಪೈಪೋಟಿ ಮೂಡಿ ಬಂದಿದೆ ಎಂಬುದು ತಿಳಿದು ಬಂದಿದೆ.

Times Now 23 Jul 2019, 3:26 pm
ಮುಂಬಯಿ: ನಿಮಗೆಲ್ಲರಿಗೂ ತಿಳಿದಿರುವಂತೆಯೇ ಟೀಮ್ ಇಂಡಿಯಾ ಹೊಸ ಕೋಚ್ ಹುಡುಕಾಟದಲ್ಲಿದೆ. ಇದರಂತೆ ನೂತನ ಕೋಚ್ ಆಯ್ಕೆಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
Vijaya Karnataka Web team-india-02


ಏಕದಿನ ವಿಶ್ವಕಪ್ ಬಳಿಕ 45 ದಿನಗಳ ವರೆಗೆ ರವಿಶಾಸ್ತ್ರಿ ಕೋಚ್ ಅವಧಿಯನ್ನು ಮುಂದುವರಿಸಲಾಗಿದೆ. ಈ ವೇಳೆಯಲ್ಲಿ ಹೊಸ ಕೋಚ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಕೋಚ್ ರವಿಶಾಸ್ತ್ರಿ ಜತೆಗೆ ಸಹಾಯಕ ಕೋಚ್‌ಗಳಾದ ಸಂಜಯ್ ಬಂಗಾರ್, ಭರತ್ ಅರುಣ್ ಹಾಗೂ ಆರ್‌ ಶ್ರೀಧರ್ ಅವರನ್ನು ಸಹ ಹೊಸ ಕೋಚ್ ಆಯ್ಕೆಯಲ್ಲಿ ಮಗದೊಮ್ಮೆ ಪರಿಗಣಿಸಲಾಗುವುದು. ಇವರ ಮುಂದಾಳತ್ವದಲ್ಲಿ ಭಾರತ ವಿಶ್ವಕಪ್‌ನಲ್ಲಿ ಮಿಂಚದಿದ್ದರೂ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವನ್ನು ದಾಖಲಿಸಿದೆ.

ರವಿಶಾಸ್ತ್ರಿ ಹೊರತಾಗಿಯೂ 2011ರ ವಿಶ್ವಕಪ್ ವಿಜೇತ ತರಬೇತುದಾರ ಗ್ಯಾರಿ ಕರ್ಸ್ಟನ್, ಟಾಮ್ ಮೂಡಿ, ವೀರೇಂದ್ರ ಸೆಹ್ವಾಗ್ ಹಾಗೂ ಮಹೇಲಾ ಜಯವರ್ಧನೆ ಸಹ ಕೋಚ್ ರೇಸ್‌ನಲ್ಲಿದ್ದಾರೆ ಎಂಬುದು ತಿಳಿದು ಬಂದಿದೆ.

ಟಾಮ್ ಮೂಡಿ ಸಹ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಮೆರೆದಿದ್ದಾರೆ. ಅವರ ಮಾರ್ಗದರ್ಶನದಲ್ಲಿ 2007ರಲ್ಲಿ ಶ್ರೀಲಂಕಾ ತಂಡವು ಏಕದಿನ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿತ್ತು.

ಮಹೇಲಾ ಜಯವರ್ಧನೆ ಸಹ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಕೋಚ್ ವೃತ್ತಿ ಬಹಳಷ್ಟು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅಲ್ಲದೆ ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಐಪಿಎಲ್ ಕಿರೀಟ ಗೆಲ್ಲುವಲ್ಲಿ ನೆರವಾಗಿದ್ದಾರೆ.

ಎರಡು ವರ್ಷಗಳ ಹಿಂದೆ ಅನಿಲ್ ಕುಂಬ್ಳೆ ಅವರಿಂದ ತೆರವಾಗಿರುವ ಕೋಚ್ ಸ್ಥಾನಕ್ಕೆ ವೀರೇಂದ್ರ ಸೆಹ್ವಾಗ್ ಉತ್ಸುಕತೆಯನ್ನು ತೋರಿದ್ದರು. ಆದರೆ ಕೊಹ್ಲಿ ಒಲವಿನ ಬೆನ್ನಲ್ಲಿ ರವಿಶಾಸ್ತ್ರಿ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಇದೀಗ ಮಗದೊಮ್ಮೆ ಸೆಹ್ವಾಗ್ ಅಗ್ನಿ ಪರೀಕ್ಷೆಗಿಳಿಯಲಿದ್ದಾರೆ ಎಂಬುದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌