ಆ್ಯಪ್ನಗರ

India vs Australia: ಸದ್ದು ಮಾಡದ ರಾಹುಲ್ ಬ್ಯಾಟ್; ಅಭಿಮಾನಿಗಳಿಗೆ ನಿರಾಸೆ

ಟೆಸ್ಟ್ ಕ್ರಿಕೆಟ್‌ನಲ್ಲೂ ಕಳಪೆ ಫಾರ್ಮ್ ಮುಂದುವರಿಸಿರುವ ಕರ್ನಾಟಕ ಕೆಎಲ್ ರಾಹುಲ್, ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲೂ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

Vijaya Karnataka Web 6 Dec 2018, 5:57 am
ಆಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದ ಆರಂಭದಲ್ಲೇ ಟೀಮ್ ಇಂಡಿಯಾ ಬಲಗೈ ಓಪನರ್ ಕೆಎಲ್ ರಾಹುಲ್ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ.
Vijaya Karnataka Web kl-rahul-out


ಧನಾತ್ಮಕ ಚಿಂತನೆಯೊಂದಿಗೆ ಕಣಕ್ಕಿಳಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿದ್ದರು.

ಆದರೆ ಟೀಮ್ ಇಂಡಿಯಾಕ್ಕೆ ಬೇಕಾಗಿರುವ ಉತ್ತಮ ಆರಂಭವನ್ನು ಒದಗಿಸಲು 26ರ ಹರೆಯದ ರಾಹುಲ್‌ಗೆ ಸಾಧ್ಯವಾಗಲಿಲ್ಲ.

ಉದಯೋನ್ಮುಖ ಪೃಥ್ವಿ ಶಾ ಗಾಯಗೊಂಡಿರುವ ಹಿನ್ನಲೆಯಲ್ಲಿ ಮುರಳಿ ವಿಜಯ್ ಜತೆ ರಾಹುಲ್ ಓಪನರ್ ಆಗಿ ಕ್ರೀಸಿಗಿಳಿಸಿದ್ದರು.

ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ರಾಹುಲ್ ಕಳಪೆ ಫಾರ್ಮ್ ಮುಂದುವರಿದಿದೆ. ಎಂಟು ಎಸೆತಗಳನ್ನು ಎದುರಿಸಿದ ರಾಹುಲ್ 2 ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆಯಿಂದಲೇ ಪೆವಿಲಿಯನ್‌ಗೆ ಹಿಂತಿರುಗಿದರು.

ಇದು ಕರ್ನಾಟಕದ ರಾಹುಲ್ ಅಭಿಮಾನಿಗಳಲ್ಲೂ ಬೇಸರಕ್ಕೆ ಕಾರಣವಾಗಿದೆ. ಎಲ್ಲ ಪ್ರಕಾರದ ಕ್ರಿಕೆಟ್‌ನಲ್ಲೂ ತಮ್ಮ ಸಾಮರ್ಥ್ಯನ್ನು ನಿರೂಪಿಸಿರುವ ರಾಹುಲ್‌ಗೆ ಸ್ಥಿರ ಫಾರ್ಮ್ ಕಾಪಾಡಲು ಸಾಧ್ಯವಾಗುತ್ತಿಲ್ಲ.

ಒಟ್ಟಿನಲ್ಲಿ ಅತೀವ ಒತ್ತಡದಲ್ಲಿರುವ ರಾಹುಲ್ ಸ್ಥಾನ ತೂಗುಗತ್ತಿಯಲ್ಲಿ ನೇತಾಡುಂವತಾಗಿದೆ. ಅಂದ ಹಾಗೆ ಇದುವರೆಗೆ 32 ಟೆಸ್ಟ್ ಪಂದ್ಯಗಳನ್ನು ಆಡಿರುವ ರಾಹುಲ್ 37ರ ಸರಾಸರಿಯಲ್ಲಿ 1850 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಐದು ಶತಕ ಹಾಗೂ 11 ಅರ್ಧಶತಕಗಳು ಸೇರಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌