ಆ್ಯಪ್ನಗರ

ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಿಂಕ್‌ ಬಾಲ್‌ ಟೆಸ್ಟ್ ಆಡಲಿರುವ ಟೀಮ್‌ ಇಂಡಿಯಾ!

ಡೇ ನೈಟ್‌ ಟೆಸ್ಟ್‌ ಆಡುವಂತೆ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್‌ ಪೇಯ್ನ್‌ ಎಸಗಿದ್ದ ಸವಾಲಿಗೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ದಿಟ್ಟ ಉತ್ತರ ನೀಡಿದ್ದರು. ಇದೀಗ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಪಿಂಕ್‌ ಬಾಲ್‌ ಟೆಸ್ಟ್‌ ಆಡುವುದು ಬಹುತೇಕ ಖಾತ್ರಿಯಾಗಿದೆ.

Vijaya Karnataka Web 16 Feb 2020, 4:55 pm
ಹೊಸದಿಲ್ಲಿ: ಭಾರತ ತಂಡ ಇದೇ ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಆ ವೇಳೆ ಆಸೀಸ್‌ ನೆಲದಲ್ಲಿ ಚೊಚ್ಚಲ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯವನ್ನು ಆಡಲಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಮೂಲಗಳು ಹೇಳಿವೆ.
Vijaya Karnataka Web India vs Australia test virat kohli 2020


"ಮುಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ ಕಾಂಗರೂ ಪಡೆಯ ಎದುರು ಡೇ-ನೈಟ್‌ ಟೆಸ್ಟ್‌ ಪಂದ್ಯವನ್ನು ಆಡುವ ಎಲ್ಲಾ ಸಾಧ್ಯತೆಗಳಿವೆ," ಎಂದು ಬಿಸಿಸಿಐ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿರುವುದಾಗಿ ವರದಿಯಾಗಿದೆ.

ಟೀಮ್‌ ಇಂಡಿಯಾ 2018/2019ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಅಡಿಲೇಡ್‌ನಲ್ಲಿ ಡೇ-ನೈಟ್‌ ಟೆಸ್ಟ್‌ ಆಡಲು ನಿರಾಕರಿಸಿತ್ತು.

ಟೆಸ್ಟ್‌ ಸರಣಿಗೆ ಸಂಪೂರ್ಣ ಸಜ್ಜು ಎಂದ ಬರ್ತ್‌ಡೇ ಬಾಯ್‌ ಮಯಾಂಕ್‌ ಅಗರ್ವಾಲ್‌

ಇದಾದ ಬಳಿಕ ಭಾರತ ತಂಡ ತಾಯ್ನಾಡಿನಲ್ಲಿ ತನ್ನ ಚೊಚ್ಚಲ ಡೇ ನೈಟ್‌ ಟೆಸ್ಟ್‌ ಪಂದ್ಯವನ್ನಾಡಿತು. ಮಾಜಿ ನಾಯಕ ಸೌರವ್‌ ಗಂಗೂಲಿ ಬಿಸಿಸಿಐನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನವೆಂಬರ್‌ನಲ್ಲಿ ಭಾರತದ ಚೊಚ್ಚಲ ಪಿಂಕ್‌ ಬಾಲ್‌ ಟೆಸ್ಟ್‌ ನಡೆಸಲಾಯಿತು. ಟೀಮ್‌ ಇಂಡಿಯಾ ಈ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 46 ರನ್‌ಗಳ ಗೆಲುವು ದಾಖಲಿಸಿತ್ತು.

ಇದಾದ ಬಳಿಕ ಆಸ್ಟ್ರೇಲಿಯಾ ಟೆಸ್ಟ್‌ ತಂಡದ ನಾಯಕ ಟಿಮ್‌ ಪೇಯ್ನ್‌, ಡೇ ನೈಟ್‌ ಟೆಸ್ಟ್‌ ಆಡುವಂತೆ ಸವಾಲೆಸಗಿದ್ದರು. ಇದಕ್ಕೆ ಉತ್ತರವಾಗಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಭಾರತ ತಂಡ ಎಲ್ಲಿಯಾದರೂ ಯಾರ ಎದುರಾದರೂ ಡೇ ನೈಟ್‌ ಟೆಸ್ಟ್‌ ಆಡಲು ಸಿದ್ದವಿದೆ ಎಂದು ಸಂದೇಶ ಸಾರಿದ್ದರು.

'ಎದುರಾಳಿ ತಂಡವೊಂದು ಕಿಡ್ನಾಪ್‌ ಮಾಡಿ ಕೈಬೆರಳು ಕತ್ತರಿಸುವ ಬೆದರಿಕೆ ಹಾಕಿತ್ತು' ಎಂದ ಆರ್‌ ಅಶ್ವಿನ್‌

"ನಾವು ಯಾವುದೇ ಸವಾಲಿಗೆ ಸಜ್ಜಾಗಿದ್ದೇವೆ. ಅದು ಗಬ್ಬಾ ಆಗಿರಲಿ ಅಥವಾ ಪರ್ತ್‌ ಆಗಿರಲಿ. ಅದ್ಯಾವುದೂ ನಮ್ಮ ಲೆಕ್ಕಕ್ಕೆ ಬರುವುದಿಲ್ಲ. ಟೆಸ್ಟ್‌ ಸರಣಿಗೆ ಇದು ಹೆಚ್ಚಿನ ಮಹತ್ವ ತಂದುಕೊಡಲಿದೆ. ನಾವು ಡೇ ನೈಟ್‌ ಟೆಸ್ಟ್‌ ಆಡಲು ರೆಡಿ," ಎಂದು ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧ ನಡೆದ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿ ನಂತರ ಕೊಹ್ಲಿ ಹೇಳಿಕೆ ನೀಡಿದ್ದರು.

ಭಾರತ ತಂಡ ಸದ್ಯ ನ್ಯೂಜಿಲೆಂಡ್‌ ಪ್ರವಾಸದಲ್ಲಿದ್ದು, ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಂಗವಾಗಿ ಆತಿಥೇಯ ಕಿವೀಸ್‌ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಮೊದಲ ಟೆಸ್ಟ್ ವೆಲ್ಲಿಂಗ್ಟನ್‌ನಲ್ಲಿ ಫೆ.21ರಂದು ಶುರುವಾಗಲಿದೆ.

ಐಪಿಎಲ್‌ 2020 ಟೂರ್ನಿ ಆರಂಭಕ್ಕೂ ಮೊದಲೇ ನಡೆಯಲಿದೆ ಆಲ್‌ಸ್ಟಾರ್ಸ್‌ ಪಂದ್ಯ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌