ಆ್ಯಪ್ನಗರ

ತವರು ನೆಲದಲ್ಲಿ ಸತತ 6ನೇ ಏಕದಿನ ಸರಣಿ ಗೆಲುವು

ವೆಸ್ಟ್‌ಇಂಡೀಸ್ ವಿರುದ್ಧ ಭಾರತಕ್ಕೆ 3-1 ಅಂತರದ ಸರಣಿ ಗೆಲುವು

Vijaya Karnataka Web 1 Nov 2018, 6:07 pm
ತಿರುವನಂತಪುರ: ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ದ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಒಂಬತ್ತು ಏಕದಿನ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಐದು ಪಂದ್ಯಗಳ ಏಕದಿನ ಸರಣಿಯನ್ನು 3-1ರ ಅಂತರದಲ್ಲಿ ವಶಪಡಿಸಿಕೊಂಡಿದೆ.
Vijaya Karnataka Web virat-kohli-t20


ಈ ಮೂಲಕ ಟೀಮ್ ಇಂಡಿಯಾ ತವರು ನೆಲದಲ್ಲಿ ಸತತ ಆರನೇ ಏಕದಿನ ಸರಣಿ ಗೆಲುವನ್ನು ದಾಖಲಿಸಿದೆ.

ಭಾರತದ ಸಾಂಘಿಕ ದಾಳಿಗೆ ಕುಸಿತ ಕಂಡಿದ್ದ ವಿಂಡೀಸ್ 31.5 ಓವರ್‌ಗಳಲ್ಲೇ 104 ರನ್‌ಗಳಿಗೆ ಸರ್ವಪತನವನ್ನು ಕಂಡಿತ್ತು. ಬಳಿಕ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 14.5 ಓವರ್‌ಗಳಲ್ಲೇ ಗುರಿ ತಲುಪಿತ್ತು.

ಅಂತೆಯೇ ವಿಂಡೀಸ್ ವಿರುದ್ದ ಎಂಟನೇ ಬಾರಿಗೆ ಸರಣಿ ಗೆಲುವು ದಾಖಲಿಸಿದೆ.

ಭಾರತದ ಅತಿ ದೊಡ್ಡ ಗೆಲುವುಗಳು (ಉಳಿದಿರುವ ಚೆಂಡುಗಳು):
231: ಕೀನ್ಯಾ ವಿರುದ್ಧ, 2001
211: ವೆಸ್ಟ್‌ಇಂಡೀಸ್ ವಿರುದ್ಧ, 2018
187: ಯುಎಇ ವಿರುದ್ಧ, ಪರ್ತ್, 2015

ಉಭಯ ಸರಣಿಗಳಲ್ಲಿ ಅತಿ ಹೆಚ್ಚು ಸರಣಿ ಗೆಲುವುಗಳು:
8: ಶ್ರೀಲಂಕಾ ವಿರುದ್ಧ, 2007ರಿಂದ 2018,
8: ವೆಸ್ಟ್‌ಇಂಡೀಸ್ ವಿರುದ್ಧ, 2007ರಿಂದ 2018,
6: ಜಿಂಬಾಬ್ವೆ ವಿರುದ್ಧ, 1998ರಿಂದ 2018,
4: ಇಂಗ್ಲೆಂಡ್ ವಿರುದ್ಧ, 2011ರಿಂದ 2017

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌