ಆ್ಯಪ್ನಗರ

ಆಂಗ್ಲರ ನಾಡಿನಲ್ಲಿ ಟೀಮ್ ಇಂಡಿಯಾ ರಿಪೋರ್ಟ್ ಕಾರ್ಡ್

ಇಂಗ್ಲೆಂಡ್ ವಿರುದ್ಧ ಆಗಸ್ಟ್ 01 ಬುಧವಾರದಿಂದ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಇಷ್ಟೊಂದು ಮಹತ್ವ ಸಿಗಲು ಕಾರಣವಿದೆ. ಅದುವೇ ಆಂಗ್ಲರ ನಾಡಿನಲ್ಲಿ ಭಾರತದ ಅತಿ ಕೆಟ್ಟ ರಿಪೋರ್ಟ್ ಕಾರ್ಡ್.

TOI.in 31 Jul 2018, 4:04 pm
ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧ ಆಗಸ್ಟ್ 01 ಬುಧವಾರದಿಂದ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಇಷ್ಟೊಂದು ಮಹತ್ವ ಸಿಗಲು ಕಾರಣವಿದೆ. ಅದುವೇ ಆಂಗ್ಲರ ನಾಡಿನಲ್ಲಿ ಭಾರತದ ಅತಿ ಕೆಟ್ಟ ರಿಪೋರ್ಟ್ ಕಾರ್ಡ್.
Vijaya Karnataka Web virat-kohli-drive


ಕ್ರಿಕೆಟ್ ಇತಿಹಾಸದ ಪುಟವನ್ನು ತರೆದು ನೋಡಿದಾಗ ಕೇವಲ ನಾಲ್ವರು ಭಾರತೀಯ ನಾಯಕರು ಮಾತ್ರ ಆಂಗ್ಲರ ನಾಡಿಯಲ್ಲಿ ಯಶ ಕಂಡಿದ್ದಾರೆ. ಅವರೇ ಮಾಜಿ ನಾಯಕರುಗಳಾದ ಅಜಿತ್ ವಾಡೇಕರ್, ಕಪಿಲ್ ದೇವ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್. ಈ ಪೈಕಿ ವಾಡೇಕರ್ (1971), ಕಪಿಲ್ (1986) ಹಾಗೂ ದ್ರಾವಿಡ್ (2007) ಮುಂದಾಳತ್ವದಲ್ಲಿ ಮಾತ್ರ ಭಾರತ ಸರಣಿ ಗೆಲುವುಗಳನ್ನು ದಾಖಲಿಸಿತ್ತು. ಅಂದರೆ ದಾದಾ ನಾಯಕತ್ವದಲ್ಲಿ ಸಮಬಲ ಫಲಿತಾಂಶವನ್ನಷ್ಟೇ ಕಂಡಿತ್ತು.

ಭಾರತ ಕೊನೆಯ ಬಾರಿಗೆ 2007ರಲ್ಲಿ ದ್ರಾವಿಡ್ ನೇತೃತ್ವದಲ್ಲಿ 1-0 ಅಂತರದ ಸರಣಿ ಗೆಲುವು ದಾಖಲಿಸಿತ್ತು. ಇದೀಗ ವಿರಾಟ್ ಕೊಹ್ಲಿ ನಾಯತಕ್ವದಲ್ಲೂ ಸರಣಿ ಗೆಲುವು ನಿರೀಕ್ಷಿಸಲಾಗುತ್ತಿದೆ.

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತದ 2011 ಹಾಗೂ 2014ನೇ ಇಸವಿಯಲ್ಲಿ ಪ್ರವಾಸ ಕೈಗೊಂಡಿದ್ದರೂ ಅನುಕ್ರಮವಾಗಿ 0-4 ಹಾಗೂ 1-3ರ ಅಂತರದ ಹೀನಾಯ ಸೋಲಿಗೆ ಗುರಿಯಾಗಿತ್ತು.

ಅಂದರೆ ಒಟ್ಟಾರೆಯಾಗಿ ಆಂಗ್ಲರ ನಾಡಿನಲ್ಲಿ 57 ಟೆಸ್ಟ್ ಪಂದ್ಯಗಳನ್ನು ಆಡಿರುವ ಭಾರತ ಆರು ಪಂದ್ಯಗಳಲ್ಲಷ್ಟೇ ಗೆಲುವು ದಾಖಲಿಸಿದೆ. ಇದರಿಂದಲೇ ಇಂಗ್ಲೆಂಡ್ ತಂಡವನ್ನು ಅವರದ್ದೇ ನೆಲದಲ್ಲಿ ಮಣಿಸುವುದು ಅಷ್ಟೊಂದು ಸುಲಭವಲ್ಲ ಎಂಬುದು ತಿಳಿದು ಬರುತ್ತದೆ.

ಅತ್ತ ಭಾರತ ವಿರುದ್ಧ ಮೊದಲ ಟೆಸ್ಟ್ ಪಂದ್ಯವು ಇಂಗ್ಲೆಂಡ್ ಪಾಲಿಗೆ ಐತಿಹಾಸಿಕ 1000ನೇ ಪಂದ್ಯವಾಗಿರಲಿದೆ. ಒಟ್ಟಿನಲ್ಲಿ ಸಮಕಾಲೀನ ಕ್ರಿಕೆಟ್‌ನಲ್ಲಿ ಇತ್ತಂಡಗಳಿಂದಲೂ ರೋಚಕ ಮುಖಾಮುಖಿಯನ್ನು ಎದುರು ನೋಡಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌