ಆ್ಯಪ್ನಗರ

ಐಸಿಸಿ ತಂಡದಲ್ಲಿ ಭಾರತದ ಮೂವರು

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಶಿಖರ್‌ ಧವನ್‌ ಮತ್ತು ಭುವನೇಶ್ವರ್‌ ಕುಮಾರ್‌ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿಕ ಸುದ್ದಿಲೋಕ 20 Jun 2017, 3:19 pm

ಲಂಡನ್‌: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಶಿಖರ್‌ ಧವನ್‌ ಮತ್ತು ಭುವನೇಶ್ವರ್‌ ಕುಮಾರ್‌ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Vijaya Karnataka Web team of the icc champions trophy 2017
ಐಸಿಸಿ ತಂಡದಲ್ಲಿ ಭಾರತದ ಮೂವರು


ಚಾಂಪಿಯನ್ಸ್‌ ಟ್ರೋಫಿ ವಿಜೇತ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್‌ ಖಾನ್‌ ಅವರಿಗೆ ಸಮಗ್ರ ತಂಡದ ನಾಯಕತ್ವದ ಗೌರವ ನೀಡಲಾಗಿದೆ.

ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ, ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್‌ ಅಥರ್ಟನ್‌ ಮತ್ತು ಪಾಕ್‌ನ ರಮೀಜ್‌ ರಾಜಾ ಐಸಿಸಿ ತಂಡವನ್ನು ಆಯ್ಕೆ ಮಾಡಿದ್ದಾರೆ.

ತಂಡದಲ್ಲಿ ಪಾಕ್‌ನ ನಾಲ್ವರು; ಭಾರತ, ಇಂಗ್ಲೆಂಡ್‌ನ ತಲಾ ಮೂವರು, ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್‌ನ ತಲಾ ಒಬ್ಬರಿಗೆ ಸ್ಥಾನ ನೀಡಲಾಗಿದೆ. ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ 12ನೇ ಆಟಗಾರನಾಗಿದ್ದಾರೆ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ತಂಡ: ಶಿಖರ್‌ ಧವನ್‌, ಫಖಾರ್‌ ಜಮಾನ್‌, ತಮೀಮ್‌ ಇಕ್ಬಾಲ್‌, ವಿರಾಟ್‌ ಕೊಹ್ಲಿ, ಜೋ ರೂಟ್‌, ಬೆನ್‌ ಸ್ಟೋಕ್ಸ್‌, ಸರ್ಫರಾಜ್‌ ಅಹ್ಮದ್‌(ನಾಯಕ, ವಿಕೆಟ್‌ಕೀಪರ್‌), ಆದಿಲ್‌ ರಶೀದ್‌, ಜುನೈದ್‌ ಖಾನ್‌, ಭುವನೇಶ್ವರ್‌ ಕುಮಾರ್‌, ಹಸನ್‌ ಅಲಿ, ಕೇನ್‌ ವಿಲಿಯಮ್ಸನ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌