ಆ್ಯಪ್ನಗರ

ಕೊಹ್ಲಿ-ರೋಹಿತ್ ಭಿನ್ನಮತವನ್ನು ತಳ್ಳಿ ಹಾಕಿದ ಆಡಳಿತಾತ್ಮಕ ಸಮಿತಿ

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭಿನ್ನಮತ ವದಂತಿಗಳನ್ನು ಆಡಳಿತಾತ್ಮಕ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ತಳ್ಳಿ ಹಾಕಿದ್ದಾರೆ. ಅಲ್ಲದೆ ಇವೆಲ್ಲವೂ ನೀವು ಮಾಡಿದ ಕಟ್ಟುಕಥೆಗಳು ಎಂದು ಉತ್ತರ ನೀಡಿದ್ದಾರೆ.

TOI.in 27 Jul 2019, 3:38 pm
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವೆ ಭಿನ್ನಭಿಪ್ರಾಯ ಉಲ್ಬಣಿಸಿದೆ ಎಂಬ ವದಂತಿಗಳನ್ನು ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿರುವ ಆಡಳಿತಾತ್ಮಕ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್ ರಾಯ್ ತಳ್ಳಿ ಹಾಕಿದ್ದಾರೆ.
Vijaya Karnataka Web kohli-rohit


ಮಾಧ್ಯಮ ವರದಿಗಳಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ರಾಯ್, ಇವೆಲ್ಲ ಕಟ್ಟುಕಥೆಗಳನ್ನು ನೀವು ಸೃಷ್ಟಿ ಮಾಡಿದ್ದೀರಿ ಎಂದು ಉತ್ತರಿಸಿದ್ದಾರೆ.

ಸದ್ಯಕ್ಕೆ ವಿವಾದಕ್ಕೆ ಸಂಬಂಧಪಟ್ಟಂತೆ ಕೊಹ್ಲಿ ಅಥವಾ ರೋಹಿತ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ಮೊದಲು ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬೆನ್ನಲ್ಲೇ ಅವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವರದಿಗಳು ಬಂದಿದ್ದವು.

ಟೀಮ್ ಇಂಡಿಯಾದಲ್ಲಿ ಎರಡು ಬಣಗಳು ಉಲ್ಬಣಗೊಂಡಿದೆ ಎಂಬ ಬಗ್ಗೆಯೂ ಮಾಹಿತಿಗಳು ಹೊರಬಂದಿದ್ದವು. ಬೆನ್ನಲೇ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ವಿರಾಟ್ ಹಾಗೂ ಅನುಷ್ಕಾ ಶರ್ಮಾರನ್ನು ರೋಹಿತ್ ಶರ್ಮಾ ಅನ್‌ಫಾಲೋ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಅನುಷ್ಕಾ ಸ್ಟೇಟಸ್ ಹಾಕಿದ್ದರು. ಇವೆಲ್ಲ ಬೆಳವಣಿಗೆಯು ಕೊಹ್ಲಿ ಹಾಗೂ ರೋಹಿತ್ ನಡುವೆ ಭಿನ್ನಮತವನ್ನು ಸಾಬೀತುಪಡಿಸುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌