ಆ್ಯಪ್ನಗರ

ವಿರಾಟ್ ನೇತೃತ್ವದಲ್ಲಿ ಯಶಸ್ಸು: ಗಂಗೂಲಿ

ದಕ್ಷಿಣ ಆಫ್ರಿಕಾ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಅಂತರದಲ್ಲಿ ಸೋಲು ಅನುಭವಿಸಿರಬಹುದು. ಆದರೆ ಬಳಿಕ ನಡೆದ ಏಕದಿನ ಹಾಗೂ ಟ್ವೆಂಟಿ-20 ಸರಣಿಗಳಲ್ಲಿ ಅವರದ್ದೇ ನೆಲದಲ್ಲಿ ಬಗ್ಗುಬಡಿದಿರುವ ಟೀಮ್ ಇಂಡಿಯಾ ಎರಡು ಸರಣಿಗಳನ್ನು ಗೆದ್ದ ಸಾಧನೆ ಮಾಡಿದೆ.

TIMESOFINDIA.COM 1 Mar 2018, 4:22 pm
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಅಂತರದಲ್ಲಿ ಸೋಲು ಅನುಭವಿಸಿರಬಹುದು. ಆದರೆ ಬಳಿಕ ನಡೆದ ಏಕದಿನ ಹಾಗೂ ಟ್ವೆಂಟಿ-20 ಸರಣಿಗಳಲ್ಲಿ ಅವರದ್ದೇ ನೆಲದಲ್ಲಿ ಬಗ್ಗುಬಡಿದಿರುವ ಟೀಮ್ ಇಂಡಿಯಾ ಎರಡು ಸರಣಿಗಳನ್ನು ಗೆದ್ದ ಸಾಧನೆ ಮಾಡಿದೆ.
Vijaya Karnataka Web under kohli india can succeed in england and australia sourav ganguly
ವಿರಾಟ್ ನೇತೃತ್ವದಲ್ಲಿ ಯಶಸ್ಸು: ಗಂಗೂಲಿ


ಟೀಮ್ ಇಂಡಿಯಾ ಯಶಸ್ಸಿನಲ್ಲಿ ಮುಂದೆ ನಿಂತು ಮುನ್ನಡೆಸಿದ ವಿರಾಟ್ ಕೊಹ್ಲಿ ಪಾತ್ರ ಮಹತ್ವದ್ದು. ಇದನ್ನೇ ಉಲ್ಲೇಖಿಸಿರುವ ಸೌರವ್ ಗಂಗೂಲಿ, ಮುಂಬರುವ ದಿನಗಳಲ್ಲಿ ವಿರಾಟ್ ನೇತೃತ್ವದಲ್ಲಿ ಭಾರತ ತಂಡವು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧವೂ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊಹ್ಲಿ ಬ್ಯಾಟಿಂಗನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧವೂ ಸರಣಿ ಗೆಲ್ಲುವ ಸಾಮರ್ಥ್ಯವಿದೆ. ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾ ಭವಿಷ್ಯದ ತಾರೆಗಳಾಗಿ ಹೊರಹೊಮ್ಮಿದ್ದಾರೆ ಎಂದರು.

ಟೆಸ್ಟ್ ಸರಣಿ ಸೋಲಿನ ಬಳಿಕ ಟೀಮ್ ಇಂಡಿಯಾ ತಿರುಗೇಟು ನೀಡಿರುವ ಬಗ್ಗೆಯೂ 2013 ವಿಶ್ವಕಪ್ ರನ್ನರ್ ಅಪ್ ಭಾರತದ ತಂಡದ ನಾಯಕರೂ ಆಗಿರುವ ಗಂಗೂಲಿ ಪ್ರಶಂಸಿಸಿದ್ದಾರೆ.

ಕಠಿಣ ಆರಂಭದ ಬಳಿಕ ಟೀಮ್ ಇಂಡಿಯಾ ನೀಡಿರುವ ಪ್ರದರ್ಶನದಿಂದಾಗಿ ತಲೆಯೆತ್ತಿ ತವರಿಗೆ ಮರಳುವಂತಾಗಿದೆ. ನಾಯಕನಾಗಿ ಕೊಹ್ಲಿ ಮುನ್ನಡೆಸಿದ ರೀತಿ ಅದ್ಭುತ. ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತದ ಮನೋಭಾವಕ್ಕೆ ಶ್ರೇಯಸ್ಸು ಸಲ್ಲಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌