ಆ್ಯಪ್ನಗರ

ಇಂಡಿಯಾ ಗ್ರೀನ್‌ ತಂಡಕ್ಕೆ ವೇದಾ ಕೃಷ್ಣಮೂರ್ತಿ ನಾಯಕಿ

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ), ಆಲೂರಿನಲ್ಲಿ ಇದೇ 14ರಿಂದ 21ರವರೆಗೆ ನಡೆಯಲಿರುವ ಮಹಿಳಾ ಟಿ20 ಚಾಲೆಂಜರ್‌ ಟ್ರೋಫಿಗೆ ಮೂರು ರಾಷ್ಟ್ರೀಯ ತಂಡಗಳನ್ನು ಬುಧವಾರ ಪ್ರಕಟಿಸಿದೆ.

Vijaya Karnataka 3 Aug 2018, 10:47 am
ಮುಂಬಯಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ), ಆಲೂರಿನಲ್ಲಿ ಇದೇ 14ರಿಂದ 21ರವರೆಗೆ ನಡೆಯಲಿರುವ ಮಹಿಳಾ ಟಿ20 ಚಾಲೆಂಜರ್‌ ಟ್ರೋಫಿಗೆ ಮೂರು ರಾಷ್ಟ್ರೀಯ ತಂಡಗಳನ್ನು ಬುಧವಾರ ಪ್ರಕಟಿಸಿದೆ.
Vijaya Karnataka Web veda krishnamurthy


ಕರ್ನಾಟಕದ ವೇದಾ ಕೃಷ್ಣಮೂರ್ತಿ ಭಾರತ ಗ್ರೀನ್‌ ತಂಡದ ಸಾರಥ್ಯವಹಿಸಿದರೆ, ಭಾರತ ತಂಡದ ಎಂದಿನ ನಾಯಕಿ ಮಿಥಾಲಿ ರಾಜ್‌ ಇಂಡಿಯಾ ಬ್ಲೂ ತಂಡವನ್ನು ಮುನ್ನಡೆಸಲಿದ್ದಾರೆ. ಇವರಲ್ಲದೆ ದೀಪ್ತಿ ಶರ್ಮಾ, ಭಾರತ ರೆಡ್‌ ತಂಡದ ನಾಯಕತ್ವ ವಹಿಸಿದ್ದಾರೆ.

ತಂಡಗಳು ಇಂತಿವೆ:

ಇಂಡಿಯಾ ಬ್ಲೂ: ಮಿಥಾಲಿ ರಾಜ್‌(ನಾಯಕಿ), ವನಿತಾ ವಿ.ಆರ್‌., ಡಿ. ಹೇಮಲತಾ, ನೇಹಾ ತನ್ವರ್‌, ಅನುಜಾ ಪಾಟಿಲ್‌, ಸೈಮಾ ಠಾಕೊರ್‌, ತಾನ್ಯಾ ಭಾಟಿಯಾ(ವಿಕೆಟ್‌ ಕೀಪರ್‌), ರಾಧಾ ಯಾದವ್‌, ಪ್ರೀತಿ ಬೋಸ್‌, ಪೂನಮ್‌ ಯಾದವ್‌, ಕೀರ್ತಿ ಜೇಮ್ಸ್‌, ಮಾನ್ಸಿ ಜೋಶಿ, ಸುಮನ್‌ ಗುಲಿಯಾ.

ಇಂಡಿಯಾ ರೆಡ್‌: ದೀಪ್ತಿ ಶರ್ಮಾ(ನಾಯಕಿ), ಪೂನಮ್‌ ರಾವುತ್‌, ದಿಶಾ ಕಸತ್‌, ಮೋನಾ ಮೇಶ್ರಮ್‌, ಹರ್ಲೆನೆ ಡಿಯೊಲ್‌, ತನುಶ್ರೀ ಸರ್ಕಾರ್‌, ಏಕ್ತಾ ಬಿಶ್ತ್‌, ತನುಜಾ ಕನ್ವರ್‌, ಶಿಖಾ ಪಾಂಡೆ, ಶಾಂತಿ ಕುಮಾರಿ, ರೀಮಾ ಲಕ್ಷ್ಮೀ ಎಕ್ಕಾ, ನುಝ್ಹಾತ್‌ ಪವೀರ್‍ನ್‌(ವಿಕೆಟ್‌ಕೀಪರ್‌) ಅದಿತಿ ಶರ್ಮಾ.

ಇಂಡಿಯಾ ಗ್ರೀನ್‌: ವೇದಾ ಕೃಷ್ಣಮೂರ್ತಿ(ನಾಯಕಿ), ಜೆಮಿಮಾ ರೋಡ್ರಿಗಸ್‌, ಪ್ರಿಯಾ ಪೂನಿಯಾ, ದೇವಿಕಾ ವೈದ್ಯ, ಮೋನಿಕಾ ದಾಸ್‌, ಅರುಂದತಿ ರೆಡ್ಡಿ, ಸುಷ್ಮಾ ವರ್ಮಾ(ವಿಕೆಟ್‌ಕೀಪರ್‌), ರಾಜೇಶ್ವರಿ ಗಾಯಕ್ವಾಡ್‌, ಫಾತಿಮಾ ಜಾಫರ್‌, ಸುಶ್ರೀ ದಿವ್ಯದರ್ಶಿನಿ, ಸುಕನ್ಯಾ ಪರಿದಾ, ಜೂಲನ್‌ ಗೋಸ್ವಾಮಿ, ಸಾಜನಾ .ಎಸ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌