ಆ್ಯಪ್ನಗರ

ಕರ್ನಾಟಕದ ಮಾಜಿ ಸ್ಪೀಡ್ ಸ್ಟಾರ್ ವೆಂಕಟೇಶ್ ಪ್ರಸಾದ್‌ಗೆ ಒಲಿಯಲಿದೆಯೇ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನ?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಕರ್ನಾಟಕದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಮತ್ತು ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ ಎಂಬುದು ತಿಳಿದು ಬಂದಿದೆ.

Vijaya Karnataka Web 25 Jan 2020, 9:59 am
ಮುಂಬಯಿ: ಭಾರತದ ಮಾಜಿ ಕ್ರಿಕೆಟಿಗ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಅವರ 40 ತಿಂಗಳ ಅಧಿಕಾರವಧಿ ಜನವರಿ 24 ಶುಕ್ರವಾರದಂದು ಕೊನೆಗೊಂಡಿದೆ. ಎಂಎಸ್‌ಕೆ ಪ್ರಸಾದ್ ಜೊತೆಗೆ ಕೇಂದ್ರ ವಲಯದ ಆಯ್ಕೆಗಾರ ಗಗನ್ ಖೋಡಾ ಅಧಿಕಾರವಧಿಯು ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇಮಕ ಮಾಡಲಿರುವ ನೂತನ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಹೊಸ ಆಯ್ಕೆದಾರರನ್ನು ನೇಮಕಗೊಳಿಸಲಿದೆ.
Vijaya Karnataka Web ವೆಂಕಟೇಶ್ ಪ್ರವಾಸ್, ಲಕ್ಷ್ಮಣ್ ಶಿವರಾಮಕೃಷ್ಣನ್


ಬಲ್ಲ ಮೂಲಗಳ ಪ್ರಕಾರ ಕರ್ನಾಟಕದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರವಾಸ್ ಹಾಗೂ ಲಕ್ಷ್ಮಣ್ ಶಿವರಾಮಕೃಷ್ಣನ್ ನಡುವೆ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕಾಗಿ ನಿಕಟ ಪೈಪೋಟಿ ಏರ್ಪಟ್ಟಿದೆ. ಅದೇ ರೀತಿ ಗಗನ್ ಖೋಡಾ ಸ್ಥಾನಕ್ಕಾಗಿ ಮಧ್ಯಪ್ರದೇಶದ ರಾಜೇಶ್ ಚೌಹಾನ್ ಹಾಗೂ ಅಮೇ ಖುರೇಶಿಯಾ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ವೇಗದ ಬೌಲರ್‌ಗಳಲ್ಲಿ ಓರ್ವರಾಗಿರುವ ವೆಂಕಟೇಶ್ ಪ್ರವಾದ್, 33 ಟೆಸ್ಟ್ ಪಂದ್ಯಗಳಲ್ಲಿ 96 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ ತಮ್ಮ ಆಡುವ ಕಾಲಘಟ್ಟದಲ್ಲಿ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಜೊತೆಗೆ ಹೆಚ್ಚಿನ ಹೆಸರು ಮಾಡಿದ್ದರು.

ಟೀಮ್‌ ಇಂಡಿಯಾ ಸೆಲೆಕ್ಟರ್ಸ್‌ ರೇಸ್‌ನಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?

ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್‌ಕರ್ ಕೂಡಾ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿದ್ದಾರೆ.

ಹಾಗೊಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಆಯ್ಕೆಯಾದರೆ ವೆಂಕಟೇಶ್ ಪ್ರಸಾದ್‌ಗೆ ಒಂದು ವರೆ ವರ್ಷ ಮಾತ್ರ ಸೇವೆ ಸಲ್ಲಿಸುವ ಅವಕಾಶವಿರುತ್ತದೆ. ಇನ್ನೊಂದೆಡೆ ಲಕ್ಷ್ಮಣ್ ಶಿವರಾಮಕೃಷ್ಣನ್ ಆಯ್ಕೆಯಾದರೆ ಸಂಪೂರ್ಣ ಮೂರು ವರ್ಷ ಅಧಿಕಾರದಲ್ಲಿರಲು ಅವಕಾಶವಿರುತ್ತದೆ.

ಬಿಸಿಸಿಐ ಸಂವಿಧಾನಿಕ ನಿಯಮಗಳ ಪ್ರಕಾರ ಯಾವುದೇ ವ್ಯಕ್ತಿಯು ಐದು ವರ್ಷಗಳಿಗಿಂತ ಹೆಚ್ಚು ಕಾಲ ನಿರ್ದಿಷ್ಟ ಸಮಿತಿ ಹುದ್ದೆಯಲ್ಲಿರುವಂತಿಲ್ಲ. ಪ್ರಸಾದ್ ಈಗಾಗಲೇ 2015ರಿಂದ 2018ರ ಅವಧಿಯಲ್ಲಿ ಜೂನಿಯರ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದಾರೆ.

ನಮ್ಮ ಗಾತ್ರಕ್ಕಿಂತ ಏಳು ಪಟ್ಟು ಹೆಚ್ಚಿರುವ ಭಾರತವನ್ನೇ ಸದೆಬಡಿಯುತ್ತಿದ್ದೆವು: ಇಮ್ರಾನ್ ಖಾನ್

ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಸಹ ಪ್ರಸಾದ್‌ಗೆ ಹುದ್ದೆ ವಹಿಸಿಕೊಡಲು ಮನಸ್ಸು ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಸದ್ಯ ಆಯ್ಕೆ ಸಮಿತಿಯಲ್ಲಿರುವ ಉಳಿದ ಮೂರು ಸದಸ್ಯರುಗಳಾದ ಜತಿನ್ ಪರಂಜಪೆ (ಪಶ್ಚಿಮ), ದೇವಾಂಗ್ ಗಾಂಧಿ (ಪೂರ್ವ ವಲಯ) ಮತ್ತು ಸರಣ್‌ದೀಪ್ ಸಿಂಗ್ (ಉತ್ತರ ವಲಯ) ಅಧಿಕಾರವಧಿಯು ಇನ್ನು ಒಂದು ವರ್ಷ ಮುಂದುವರಿಯಲಿದೆ. ಹಾಗೊಂದು ವೇಳೆ ಪ್ರಸಾದ್‌ಗೂ ಒಂದು ವರ್ಷದ ಅವಧಿ ನೀಡಿದರೆ ಮುಂದಿನ ಸಾಲಿನಲ್ಲಿ ನೂತನ ಆಯ್ಕೆದಾರರ ಗುಂಪನ್ನು ಪರಿಚಯಿಸಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌