ಆ್ಯಪ್ನಗರ

ವಿಜಯ್‌ ಶಂಕರ್‌ಗೂ ಗಾಯ?

ಪಾಕಿಸ್ತಾನ ವಿರುದ್ಧದ ಪಂದ್ಯದ ಪ್ರಮುಖ ಘಟ್ಟದಲ್ಲಿ ನಾಯಕ ಸರ್ಫರಾಜ್‌ ಸೇರಿದಂತೆ ಎರಡು ವಿಕೆಟ್‌ಗಳನ್ನು ಕಿತ್ತು, ಟೀಮ್‌ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಭರವಸೆ ಮೂಡಿಸಿದ್ದ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಗಾಯಗೊಂಡಿದ್ದು, ತಂಡಕ್ಕೆ ಮತ್ತೊಂದು ಗಾಯದ ಬರೆ ಬಿದ್ದಿದೆ.

Vijaya Karnataka 21 Jun 2019, 5:00 am
ಸೌತಾಂಪ್ಟನ್‌: ಪಾಕಿಸ್ತಾನ ವಿರುದ್ಧದ ಪಂದ್ಯದ ಪ್ರಮುಖ ಘಟ್ಟದಲ್ಲಿ ನಾಯಕ ಸರ್ಫರಾಜ್‌ ಸೇರಿದಂತೆ ಎರಡು ವಿಕೆಟ್‌ಗಳನ್ನು ಕಿತ್ತು, ಟೀಮ್‌ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಭರವಸೆ ಮೂಡಿಸಿದ್ದ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಗಾಯಗೊಂಡಿದ್ದು, ತಂಡಕ್ಕೆ ಮತ್ತೊಂದು ಗಾಯದ ಬರೆ ಬಿದ್ದಿದೆ.
Vijaya Karnataka Web VIJAY SHANKAR


ಬುಧವಾರ ಬೆಳಗ್ಗೆ ನೆಟ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಜಸ್‌ಪ್ರಿತ್‌ ಬುಮ್ರಾ ಎಸೆದ ಎಸೆತವೊಂದು ವಿಜಯ್‌ ಶಂಕರ್‌ ಅವರ ಕಾಲಿನ ಹೆಬ್ಬೆರಳಿಗೆ ಬಡಿದಿತ್ತು. ನೋವು ಸಹಿಸಲಾಗದೆ ವಿಜಯ್‌ ಶಂಕರ್‌ ತಕ್ಷಣವೇ ಅಭ್ಯಾಸ ಸ್ಥಗಿತಗೊಳಿಸಿದ್ದರು.

ಏತನ್ಮಧ್ಯೆ, ''ಬುಧವಾರ ಅಭ್ಯಾಸ ನಡೆಸುತ್ತಿದ್ದಾಗ ವಿಜಯ್‌ ಶಂಕರ್‌ ಪಾದಕ್ಕೆ ಚೆಂಡು ಬಡಿದ ಕಾರಣ ಅವರು ನೆಟ್‌ನಿಂದ ಹೊರಹೋಗಿದ್ದಾರೆ. ಆದರೆ, ಸಂಜೆ ವೇಳೆಗೆ ಸುಧಾರಿಸಿಕೊಂಡಿದ್ದಾರೆ. ಆತಂಕಪಡುವ ಅಗತ್ಯವಿಲ್ಲ,'' ಎಂದು ಟೀಮ್‌ ಇಂಡಿಯಾದ ಮೂಲಗಳು ತಿಳಿಸಿವೆ.

ಗುರುವಾರ ಬೆಳಗ್ಗೆ ವಿಜಯ್‌ ಶಂಕರ್‌ ಅಭ್ಯಾಸದಲ್ಲಿ ಪಾಲ್ಗೊಂಡಿರುವುದಾಗಿ ತಂಡದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಗಾಯದ ಭಯ: ಎಡಗೈ ಹೆಬ್ಬೆರಳು ಮೂಳೆ ಮುರಿದ ಪರಿಣಾಮ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ವಿಶ್ವಕಪ್‌ನಿಂದಲೇ ಹೊರಬಿದ್ದಿದ್ದಾರೆ. ವೇಗಿ ಭುವನೇಶ್ವರ್‌ ಕುಮಾರ್‌ ಕೂಡ ಮಂಡಿರಜ್ಜು ನೋವಿನಿಂದಾಗಿ ಟೀಮ್‌ ಇಂಡಿಯಾ ಆಡುವ ಎರಡು ಪಂದ್ಯಗಳ ವೇಳೆ ಬೆಂಚ್‌ ಕಾಯಿಸುವಂತಾಗಿದೆ. ಇದೀಗ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಗಾಯದ ಸಮಸ್ಯೆ ತಂಡದ ಆಡಳಿತ ಮಂಡಳಿಗೆ ಆತಂಕ ತಂದಿದೆ. ಖಲೀಲ್‌ ಅಹಮದ್‌ ಟೀಮ್‌ ಇಂಡಿಯಾದ ಮೀಸಲು ವೇಗದ ಬೌಲರ್‌ ಆಗಿ ಆಯ್ಕೆಯಾಗಿದ್ದು, ಭುವನೇಶ್ವರ್‌ ವಾಪಸಾಗದಿದ್ದರೆ ಬಹುಶಃ ಅವರಿಗೆ ಕರೆ ಬರಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌