ಆ್ಯಪ್ನಗರ

ಡಿಸೆಂಬರ್‌ನಲ್ಲಿ ಕೋಹ್ಲಿ-ಅನುಷ್ಕಾ ವಿವಾಹ?

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದೇಶದಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ಸೆಲೆಬ್ರಿಟಿ ಪ್ರಣಯ ಜೋಡಿ ಆಗಿದ್ದಾರೆ.

Times Now 24 Oct 2017, 3:39 pm
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದೇಶದಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ಸೆಲೆಬ್ರಿಟಿ ಪ್ರಣಯ ಜೋಡಿ ಆಗಿದ್ದಾರೆ.
Vijaya Karnataka Web virat kohli anushka sharma to tie knot in december this year
ಡಿಸೆಂಬರ್‌ನಲ್ಲಿ ಕೋಹ್ಲಿ-ಅನುಷ್ಕಾ ವಿವಾಹ?


'ವಿರುಷ್ಕಾ' ಎಂದೇ ಅಭಿಮಾನಿಗಳು ಬಿಂಬಿಸಿರುವ ಈ ಜೋಡಿ ಏನೇ ಮಾಡಿದರೂ ಸುದ್ದಿಯಾಗುತ್ತದೆ. ಪ್ರತಿ ಬಾರಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೂ ಮಾಧ್ಯಮದವರ ಪಾಲಿಗೆ ಹಬ್ಬವೇ ಆಗಿತ್ತು.

ಇದಕ್ಕೊಂದು ತಾಜಾ ಸೇರ್ಪಡೆಯೆಂಬಂತೆ ಜಾಹೀರಾತಿವೊಂದರಲ್ಲಿ ಜತೆಯಾಗಿ ಮಧು-ವರನ ವೇಷದಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಿದ್ಧತೆ ನಡೆಸುತ್ತಿರುವ 28ರ ಹರೆಯದ ಕೋಹ್ಲಿ, ಮುಂಬರುವ ಡಿಸೆಂಬರ್ ತಿಂಗಳಲ್ಲಿ ಬಾಲಿವುಡ್ ಬೆಡಗಿ ಅನುಷ್ಕಾ ವಿವಾಹಿತರಾಗುವ ಬಗ್ಗೆ ಮಾಹಿತಿಗಳು ಬಂದಿದೆ.

ಬಲ್ಲ ಮೂಲಗಳ ವೈಯಕ್ತಿಕ ಕಾರಣಗಳಿಂದಾಗಿ ಡಿಸೆಂಬರ್ ತಿಂಗಳಲ್ಲಿ ತಮಗೆ ವಿಶ್ರಾಂತಿ ನೀಡುವಂತೆ ಬಿಸಿಸಿಐನಲ್ಲಿ ವಿನಂತಿಸಿರುವ ಬಗ್ಗೆ ವರದಿಯಾಗಿದೆ. ಇದಕ್ಕೂ ಮೊದಲು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಕೋಹ್ಲಿ ಅವರನ್ನು ನಾಯಕರಾಗಿ ಘೋಷಿಸಲಾಗಿತ್ತು.

ಏನೇ ಅದರೂ ಈ ಬಗ್ಗೆ ಕೋಹ್ಲಿ ಅಥವಾ ಅನುಷ್ಕಾ ಅವರಿಂದ ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಬರಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌