ಆ್ಯಪ್ನಗರ

ವಿರಾಟ್ ಗೇಲಿ ಮಾಡಿದ ಆಸೀಸ್

ಆಸೀಸ್ ನೆಲದಲ್ಲಿ ವಿರಾಟ್‌ಗೆ ಕಹಿ ಅನುಭವ ಎದುರಾಗಿದೆ. ಬ್ಯಾಟಿಂಗ್ ಮಾಡಲು ಕ್ರೀಸಿಗಿಳಿದಾಗ ಆಸೀಸ್ ಅಭಿಮಾನಿಗಳು ಗೇಲಿ ಮಾಡಿದ್ದರು. ಇದೀಗ ಇವೆಲ್ಲದಕ್ಕೂ ವಿರಾಟ್ ಮುಂದಿನ ಪಂದ್ಯದಲ್ಲಿ ತಮ್ಮ ಬ್ಯಾಟ್ ಮೂಲಕವೇ ಉತ್ತರಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Vijaya Karnataka Web 9 Dec 2018, 5:57 am
ಆಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರು ಮೊದಲ ಟೆಸ್ಟ್ ಪಂದ್ಯ ರೋಚಕ ಹಂತವನ್ನು ತಲುಪಿರುಂತೆಯೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಗೇಲಿ ಮಾಡಿರುವ ಘಟನೆ ನಡೆದಿದೆ.
Vijaya Karnataka Web virat-kohli-out-01


ಆಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡಲು ವಿರಾಟ್ ಕೊಹ್ಲಿ ಕ್ರೀಸಿಗಿಳಿದ ಸಂದರ್ಭದಲ್ಲಿ, ಆಸೀಸ್ ಅಭಿಮಾನಿಗಳು ಜೋರಾಗಿ ಕಿರುಚಾಡುತ್ತಾ ಕೊಹ್ಲಿರನ್ನು ಅಪಹಾಸ್ಯಕ್ಕೊಳಪಡಿಸಿದರು.

ವಿರಾಟ್ ಮನೋಬಲವನ್ನು ಕುಗ್ಗಿಸುವುದರ ಜತೆಗೆ ಅವರ ಏಕಾಗ್ರತೆಗೆ ಭಂಗವನ್ನುಂಟು ಮಾಡುವುದು ಆಸೀಸ್‌ಗರ ಇರಾದೆಯಾಗಿತ್ತು. ಆದರೆ ಉತ್ತಮ ಇನ್ನಿಂಗ್ಸ್ ಕಟ್ಟಿದ ವಿರಾಟ್ 34 ರನ್ ಗಳಿಸಿದ್ದರಲ್ಲದೆ ಆಸೀಸ್ ನೆಲದಲ್ಲಿ 1000 ರನ್ ಗಳಿಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಪಾತ್ರವಾಗಿದ್ದರು.

ಆಕ್ರಮಣಕಾರಿ ಶೈಲಿ ಮೈಗೂಡಿಸಿಕೊಂಡು ಬಂದಿರುವ ವಿರಾಟ್‌ಗೆ ಇದು ಮೊದಲ ಬಾರಿಯೇನಲ್ಲ ಇಂತಹ ಕಹಿ ಅನುಭವ ಎದುರಾಗುತ್ತಿರುವುದು. 2011/12ರಲ್ಲಿ ತಮ್ಮ ಚೊಚ್ಚಲ ಆಸೀಸ್ ಪ್ರವಾಸದಲ್ಲಿ ಗ್ಯಾಲರಿ ವರ್ತನೆಯಿಂದ ಸಿಟ್ಟಿಗೆದ್ದಿದ್ದ ವಿರಾಟ್, ತಮ್ಮ ಮಧ್ಯ ಬೆರಳನ್ನು ತೋರಿಸಿ ಪಂದ್ಯ ಶುಲ್ಕದ ಶೇಕಡಾ 50ರಷ್ಟು ದಂಡನೆಗೊಳಗಾಗಿದ್ದರು.

2014ರಲ್ಲಿ ಪ್ರವಾಸ ಕೈಗೊಂಡಲೂ ವಿರಾಟ್‌ಗೆ ಇದಕ್ಕೆ ಸಮಾನವಾದ ಅನುಭವ ಎದುರಾಗಿತ್ತು. ಅಲ್ಲದೆ ಇವೆಲ್ಲಕ್ಕೂ ತಮ್ಮ ಬ್ಯಾಟ್ ಮೂಲಕವೇ ಉತ್ತರಿಸಿದ್ದರು.

ಬಳಿಕ ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಕೇಳಿದಾಗ, ಇಂತಹ ಸನ್ನಿವೇಶಗಳನ್ನು ಟೀಮ್ ಇಂಡಿಯಾ ಕಡೆಗಣಿಸಲಿದೆ ಎಂದರು.

ಇಂತಹ ವಿಷಯಗಳು ಮುಖ್ಯವೆಂದು ನನಗನಿಸುತ್ತಿಲ್ಲ. ಮೈದಾನದಲ್ಲಿ ಏನು ನಡೆಯುತ್ತಿದೆ ಎಂಬುದು ಮುಖ್ಯ. ಇವೆಲ್ಲದರ ಹೊರತಾಗಿ ನಮ್ಮ ಹತೋಟಿಯಲ್ಲಿಡಲು ಸಾಧ್ಯವಿಲ್ಲ. ಅವರಿಗೆ ಏನು ಅನಿಸಿತೋ ಅದನ್ನು ಮಾಡಬಹುದು. ಎಲ್ಲಿಯ ವರೆಗೂ ನಾವು ಉತ್ತಮವಾಗಿ ಆಡುತ್ತಿದ್ದೆವೋ ನಾವು ಸಂತುಷ್ಟರಾಗಿದ್ದೇವೆ ಎಂದರು.

ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಕೂಡಾ ವಿರಾಟ್ ಬೆಂಬಲಿಸಿದರು. ವಿರಾಟ್ ಅತ್ಯುತ್ತಮ ಆಟಗಾರನಾಗಿದ್ದು, ಕಿರುಚಾಡುವ ಅಗತ್ಯವಿರಲಿಲ್ಲ. ಆದರೆ ಕೆಲವೊಮ್ಮೆ ಅಭಿಮಾನಿಗಳ ವರ್ತನೆಯು ಆ ರೀತಿಯಾಗಿರುತ್ತದೆ ಎಂದರು.

ಇನ್ನು ಮಾಜಿ ಆಶೀಸ್ ನಾಯಕ ರಿಕಿ ಪಾಂಟಿಂಗ್ ಸಹ ಗ್ಯಾಲರಿ ವರ್ತನೆಗೆ ಅಸಮಾಧಾನವನ್ನು ವ್ಯಕ್ತಪಡಿಸಿದರು. ಅಲ್ಲದೆ 2009 ಆ್ಯಶಸ್ ಪ್ರಯಾಣದಲ್ಲಿ ಇಂಗ್ಲೆಂಡ್ ನೆಲದಲ್ಲಿ ತಮಗೆ ಎರಡು ಬಾರಿ ಇಂತಹ ಸನ್ನಿವೇಶ ಎದುರಾಗಿರುವುದನ್ನು ನೆನಪಿಸಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌