ಆ್ಯಪ್ನಗರ

ನಂ. 4 ಕ್ರಮಾಂಕದಲ್ಲಿ ಯಾರು? ಕೊಹ್ಲಿ ಬಳಿಯಿದೆ ಉತ್ತರ

ಕೊನೆಗೂ ನಂ.4 ಕ್ರಮಾಂಕದ ಬ್ಯಾಟ್ಸ್‌ಮನ್ ಸಮಸ್ಯೆಗೆ ಪರಿಹಾರ ಹುಡುಕಿದ ಕೊಹ್ಲಿ

Vijaya Karnataka Web 20 Oct 2018, 5:22 pm
ಗುವಾಹಟಿ: ಇಂಗ್ಲೆಂಡ್‌ನಲ್ಲಿ ಮುಂಬರುವ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ದೃಷ್ಟಿಕೋನದಲ್ಲಿ ನಂ.4 ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದು ಹೆಚ್ಚಿನ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
Vijaya Karnataka Web virat-kohli-loss-01


ಈ ಕ್ರಮಾಂಕದಲ್ಲಿ ಹಲವು ಆಟಗಾರರನ್ನು ಕ್ರೀಸಿಗಿಳಿಸುವ ಮೂಲಕ ಅನೇಕ ಪರೀಕ್ಷೆಗಳನ್ನು ನಡೆಸಿದರೂ ಯಾವುದು ಕೂಡಾ ಫಲ ಕಂಡಿರಲಿಲ್ಲ.

ಆದರೆ ಇದೀಗ ನಾಯಕ ವಿರಾಟ್ ಕೊಹ್ಲಿ ಇವೆಲ್ಲವಕ್ಕೂ ಉತ್ತರವನ್ನು ಕಂಡುಕೊಂಡಿದ್ದಾರೆ. ನ.4 ಕ್ರಮಾಂಕದಲ್ಲಿ ರಾಯುಡು ಸ್ಥಿರ ಪ್ರದರ್ಶನವು ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ ಎಂದು ಕೊಹ್ಲಿ ಹೇಳಿದ್ದಾರೆ.

ದೀರ್ಘ ಸಮಯದಿಂದ ನಾಲ್ಕನೇ ಸ್ಥಾನಕ್ಕಾಗಿ ಸೂಕ್ತ ಹೊಂದಾಣಿಕೆಯ ಹುಡುಕಾಟದಲ್ಲಿದ್ದೇವೆ. ನಾವು ಅನೇಕ ಪ್ರಯೋಗಗಳನ್ನು ನಡೆಸಿದ್ದೇವೆ. ಆದರೆ ದುರದೃಷ್ಟವಶಾತ್ ಯಾರು ಕೂಡಾ ಯಶಸ್ವಿ ಕಾಣಲಿಲ್ಲ ಎಂದರು.

ಏಷ್ಯಾ ಕಪ್‌ನಲ್ಲೂ ಉತ್ತಮ ನಿರ್ವಹಣೆ ನೀಡಿರುವ ರಾಯುಡು ಅವರಿಗೆ ಬೇಕಾದಷ್ಟು ಅವಕಾಶ ನೀಡಲಾಗುವುದು. ಇದು ತಂಡಕ್ಕೆ ಹೆಚ್ಚಿನ ಸಮತೋಲನವನ್ನು ನೀಡಲಿದೆ ಎಂದರು.

ನಾಲ್ಕನೇ ಸ್ಥಾನಕ್ಕೆ ರಾಯುಡು ಸೂಕ್ತ ಆಯ್ಕೆ ಎಂಬುದು ನಮ್ಮ ನಂಬಿಕೆಯಾಗಿದೆ. ಅವರು ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಅನೇಕ ಪಂದ್ಯಗಳನ್ನು ಗೆಲ್ಲಿಸಿದ ಅನುಭವ ಅವರಲ್ಲಿದೆ. ಇದರೊಂದಿಗೆ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಉತ್ತರ ಸಿಗಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌