ಆ್ಯಪ್ನಗರ

Virat Kohli: ಟಾಸ್ ಸೋಲಿನಲ್ಲೂ ವಿರಾಟ್ ದಾಖಲೆ

2018ನೇ ಸಾಲಿನಲ್ಲಿ ಒಂಬತ್ತನೇ ಬಾರಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಟಾಸ್ ನಷ್ಟವಾಗಿದೆ. ಈ ಮೂಲಕ ಅನಗತ್ಯ ದಾಖಲೆಗಳ ಪಟ್ಟಿಯಲ್ಲಿ ಧೋನಿ ಹಾಗೂ ಗಂಗೂಲಿ ಬಳಿಕ ಕಾಣಿಸಿಕೊಂಡಿದ್ದಾರೆ.

Vijaya Karnataka Web 14 Dec 2018, 11:22 am
ಪರ್ತ್: ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆಲ್ಲುವಲ್ಲಿ ವಿಫಲವಾಗಿದ್ದಾರೆ.
Vijaya Karnataka Web virat-kohli-toss-01


ಈ ಮೂಲಕ ಅನಗತ್ಯ ರೆಕಾರ್ಡ್ ಪಟ್ಟಿಯಲ್ಲಿ ಮಾಜಿ ಕಪ್ತಾನರುಗಳಾದ ಮಹೇಂದ್ರ ಸಿಂಗ್ ಧೋನಿ ಹಾಗೂ ಸೌರವ್ ಗಂಗೂಲಿ ಸಾಲಿಗೆ ಸೇರಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಕೊಹ್ಲಿ ಒಂಬತ್ತನೇ ಬಾರಿಗೆ ಟಾಸ್ ಕಳೆದುಕೊಂಡಿದ್ದಾರೆ. ಈ ಮೂಲಕ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ಟಾಸ್ ಕಳೆದುಕೊಂಡ ಭಾರತೀಯ ನಾಯಕರುಗಳ ಪೈಕಿ ಧೋನಿ ಹಾಗೂ ಗಂಗೂಲಿ ಬಳಿಕದ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.

2010ರಲ್ಲಿ ಧೋನಿ 12 ಹಾಗೂ 2002ರಲ್ಲಿ ಗಂಗೂಲಿ 11 ಬಾರಿ ಟಾಸ್ ಕಳೆದುಕೊಂಡಿದ್ದರು.

ಇನ್ನು 2018ರಲ್ಲಿ ವಿದೇಶ ನೆಲದಲ್ಲಿ ಕೊಹ್ಲಿಗೆ ಎಂಟನೇ ಬಾರಿಗೆ ಟಾಸ್ ನಷ್ಟವಾಗಿದೆ. ಈ ಮೂಲಕ ಗಂಗೂಲಿ ಹಾಗೂ ಕ್ಲೈವ್ ಲಾಯ್ಡ್ ಪಟ್ಟಿಗೂ ಸೇರಿದ್ದಾರೆ. 2002ರಲ್ಲಿ ಗಂಗೂಲಿ ಹಾಗೂ 1980ರಲ್ಲಿ ಲಾಯ್ಡ್ ತಲಾ ಎಂಟು ಬಾರಿ ಟಾಸ್ ಮಿಸ್ ಮಾಡಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌