ಆ್ಯಪ್ನಗರ

ಜಯಸೂರ್ಯ ದಾಖಲೆ ಮುರಿದ ಕೋಹ್ಲಿ 29ನೇ ಶತಕ

ಶ್ರೀಲಂಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಅಮೋಘ ಶತಕದ ಸಾಧನೆ ಮಾಡಿದ್ದಾರೆ.

Vijaya Karnataka Web 31 Aug 2017, 4:33 pm
ಕೊಲಂಬೊ: ಶ್ರೀಲಂಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಅಮೋಘ ಶತಕದ ಸಾಧನೆ ಮಾಡಿದ್ದಾರೆ.
Vijaya Karnataka Web virat kohli hits 29th odi ton surpasses sanath jayasuriya
ಜಯಸೂರ್ಯ ದಾಖಲೆ ಮುರಿದ ಕೋಹ್ಲಿ 29ನೇ ಶತಕ


ಇದು ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೋಹ್ಲಿ ಬ್ಯಾಟ್‌ನಿಂದ ಸಿಡಿಯುತ್ತಿರುವ 29ನೇ ಶತಕವಾಗಿದೆ. ಈ ಮೂಲಕ ಶ್ರೀಲಂಕಾದವರೇ ಆಗಿರುವ ಮಾಜಿ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ (28) ಅವರನ್ನು ಹಿಂದಿಕ್ಕಿದ್ದಾರೆ.

ಏಕದಿನದಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದವರ ಪೈಕಿ ಕೋಹ್ಲಿ ಇದೀಗ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯನ್ನು ಭಾರತ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ (49) ಮುನ್ನಡೆಸುತ್ತಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (30) ಅವರಿಗಿಂತಲೂ ಕೋಹ್ಲಿ ಕೇವಲ ಒಂದು ಶತಕ ಮಾತ್ರ ಹಿನ್ನಡೆಯಲ್ಲಿದ್ದಾರೆ.

193 ಏಕದಿನ ಪಂದ್ಯವನ್ನಾಡುತ್ತಿರುವ ಕೋಹ್ಲಿ 185ನೇ ಇನ್ನಿಂಗ್ಸ್‌ನಲ್ಲಿ ಇಂತಹದೊಂದು ಸಾಧನೆ ಮಾಡಿರುವುದು ಇಲ್ಲಿ ಗಮನಾರ್ಹವೆನಿಸುತ್ತದೆ.

ಸಮಕಾಲೀನ ಬ್ಯಾಟ್ಸ್‌ಮನ್‌ಗಳ ಪೈಕಿ ಕೋಹ್ಲಿಗೆ ನಿಕಟ ಪೈಪೋಟಿಯನ್ನು ಒಡ್ಡುತ್ತಿರುವ ದಕ್ಷಿಣ ಆಫ್ರಿಕಾದ ಹಾಶೀಮ್ ಆಮ್ಲಾ 156 ಪಂದ್ಯಗಳಲ್ಲಿ 25 ಶತಕಗಳ ಸಾಧನೆಯನ್ನು ಮಾಡಿದ್ದಾರೆ. ಇನ್ನು ದ.ಆಫ್ರಿಕಾದವರೇ ಆಗಿರುವ ಎಬಿಡಿ ವಿಲಿಯರ್ಸ್ 222 ಪಂದ್ಯಗಳಲ್ಲಿ 24 ಶತಕ ದಾಖಲಿಸಿದ್ದಾರೆ.

ಏಕದಿನದಲ್ಲಿ ಗರಿಷ್ಠ ಶತಕಗಳು

ಸಚಿನ್ ತೆಂಡೂಲ್ಕರ್ (ಭಾರತ): 49, ಪಂದ್ಯ: 463, ಇನ್ನಿಂಗ್ಸ್: 452, ಸರಾಸರಿ: 44.83
ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): 30, ಪಂದ್ಯ: 375, ಇನ್ನಿಂಗ್ಸ್: 365, ಸರಾಸರಿ: 42.03
ವಿರಾಟ್ ಕೋಹ್ಲಿ (ಭಾರತ): 29, ಪಂದ್ಯ: 193*, ಇನ್ನಿಂಗ್ಸ್: 185, ಸರಾಸರಿ: 55.28
ಸನತ್ ಜಯಸೂರ್ಯ (ಶ್ರೀಲಂಕಾ): 28, ಪಂದ್ಯ: 445, ಇನ್ನಿಂಗ್ಸ್: 433, ಸರಾಸರಿ: 32.36
ಹಾಶೀಮ್ ಆಮ್ಲಾ (ದ.ಆಫ್ರಿಕಾ): 25, ಪಂದ್ಯ: 156, ಇನ್ನಿಂಗ್ಸ್: 153, ಸರಾಸರಿ: 50.25

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌