ಆ್ಯಪ್ನಗರ

ಬಾಂಗ್ಲಾ ವಿರುದ್ಧ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಆಡುವುದು ಡೌಟ್!

ಮುಂಬರುವ ಬಾಂಗ್ಲಾದೇಶ ವಿರುದ್ಧದ ಟ್ವೆಂಟಿ-20 ಸರಣಿಯಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಈ ಬಗ್ಗೆ ಅಕ್ಟೋಬರ್ 24ರಂದು ಸ್ಪಷ್ಟ ನಿರ್ಧಾರ ಹೊರಬರಲಿದೆ.

Vijaya Karnataka Web 19 Oct 2019, 3:19 pm
ಹೊಸದಿಲ್ಲಿ: ಮುಂಬರುವ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾಗವಹಿಸುವುದು ಸಂದೇಹವೆನಿಸಿದೆ. ಸತತವಾದ ಕ್ರಿಕೆಟ್ ಹಿನ್ನಲೆಯಲ್ಲಿ ಕೆಲಸದೊತ್ತಡವನ್ನು ನಿಭಾಯಿಸುವ ಹಿನ್ನಲೆಯಲ್ಲಿ ಟೀಮ್ ಇಂಡಿಯಾ ನಾಯಕನಿಗೆ ವಿಶ್ರಾಂತಿ ಸೂಚಿಸುವ ಸಾಧ್ಯತೆಯಿದೆ.
Vijaya Karnataka Web virat-kohli-02


ಕಳೆದೊಂದು ವರ್ಷದಲ್ಲಿ ಟೀಮ್ ಇಂಡಿಯಾ 10 ಟೆಸ್ಟ್, 30 ಏಕದಿನ ಹಾಗೂ 16 ಟ್ವೆಂಟಿ-20 ಪಂದ್ಯಗಳಲ್ಲಿ ಪಾಲ್ಗೊಂಡಿದೆ. ಈ ಪೈಕಿ ಬಹುತೇಕ ಎಲ್ಲ ಪಂದ್ಯಗಳಲ್ಲೂ ಟೀಮ್ ಇಂಡಿಯಾವನ್ನು ಕೊಹ್ಲಿ ಮುನ್ನಡೆಸಿದ್ದರು. ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯಗಳ ಏಕದಿನ, ಮೂರು ಪಂದ್ಯಗಳ ಟ್ವೆಂಟಿ20 ಸೇರಿದಂತೆ ವೆಸ್ಟ್‌ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಟ್ವೆಂಟಿ20 ಸರಣಿಗಳನ್ನು ಮಾತ್ರ ಕೊಹ್ಲಿ ಮಿಸ್ ಮಾಡಿಕೊಂಡಿದ್ದರು.

ಹಿಟ್‌ಮ್ಯಾನ್ 6ನೇ ಶತಕ, 2000 ರನ್ ಮೈಲುಗಲ್ಲು; ಸಿಕ್ಸರ್ ದಾಖಲೆ

ಅಂದರೆ 10 ಟೆಸ್ಟ್, 28 ಏಕದಿನ ಹಾಗೂ 10 ಟ್ವೆಂಟಿ-20 ಪಂದ್ಯಗಳಲ್ಲಿ ಭಾಗವಹಿಸಿದ್ದರು. ಈ ಮೂಲಕ 2018 ಅಕ್ಟೋಬರ್ ಬಳಿಕ ಭಾರತ ಆಡಿದ 56 ಅಂತಾರಾಷ್ಟ್ರೀಯ ಪಂದ್ಯಗಳ ಪೈಕಿ 48ರಲ್ಲಿ ಆಡಿದ್ದರು. ಇದರ ಹೊರತಾಗಿಯೂ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದ್ದರು.

ಬಾಂಗ್ಲಾದೇಶ ವಿರುದ್ಧ ನವೆಂಬರ್ ತಿಂಗಳಲ್ಲಿ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾರತ ಭಾಗವಹಿಸಲಿದೆ. ಆದರೆ ಟಿ20 ಸರಣಿಯಿಂದ ಕೊಹ್ಲಿ ವಿಶ್ರಾಂತಿ ಪಡೆಯುವ ಸಾಧ್ಯತೆ ಹೆಚ್ಚಿದೆ.

ವೀರು ಶೈಲಿಯಲ್ಲಿ ಸಿಕ್ಸರ್ ಬಾರಿಸಿ ಮೂರಂಕಿಯ ಗಡಿ ದಾಟಿದ ರೋಹಿತ್ ಶರ್ಮಾ

ಟಿ20 ಸರಣಿ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಭಾಗವಹಿಸಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಜಾರಿಯಲ್ಲಿರುವುದರಿಂದ ಟೆಸ್ಟ್ ಸರಣಿ ವೇಳೆಗೆ ಕೊಹ್ಲಿ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.

ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಹಿನ್ನಲೆಯಲ್ಲಿ ಭಾರತ ಸೂಕ್ತ ಸಂಯೋಜನೆಯ ತಂಡವನ್ನು ಕಟ್ಟುವ ಯೋಜನೆಯಲ್ಲಿದೆ. ಹಾಗಾಗಿ ಈ ನಿರ್ಣಾಯಕ ಹಂತದಲ್ಲಿ ಕೊಹ್ಲಿ ವಿಶ್ರಾಂತಿ ಪಡೆಯುವುದು ಸರಿಯೇ ಎಂಬುದು ಗೊಂದಲಕ್ಕೀಡು ಮಾಡಿದೆ.

ಯೊ-ಯೊಗೆ ಬೇಡಿಕೆಯಿದ್ದಾಗ ನೀವು ಬಿಸಿಸಿಐ ಅಧ್ಯಕ್ಷ ಆಗಿರಬೇಕಿತ್ತು; ಗಂಗೂಲಿಗೆ ಯುವಿ

ಹಾಗಿದ್ದರೂ ಮುಂಬರುವ ಸರಣಿ ವೇಳೆಗೆ ತಾಜಾತನ ಕಾಪಾಡಿಕೊಳ್ಳುವ ಹಾಗೂ ಹೊಸ ಮನೋಭಾವದಿಂದ ಹೆಚ್ಚು ಉತ್ಸಾಹಭರಿತವಾಗಿ ಅಂಗಣಕ್ಕಿಳಿಯಲು ವಿಶ್ರಾಂತಿ ಅಗತ್ಯ ಎನ್ನಲಾಗಿದೆ.

ವಿರಾಟ್ ಕೊಹ್ಲಿ ಅಲಭ್ಯವಾದರೆ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಅಂದ ಹಾಗೆ ಅಕ್ಟೋಬರ್ 24ರಂದು ಮುಂಬಯಿಯಲ್ಲಿ ಸೇರಲಿರುವ ಆಯ್ಕೆ ಸಮಿತಿ ತಂಡವನ್ನು ಆರಿಸಲಿದ್ದಾರೆ. ಟಿ20 ತಂಡದಲ್ಲಿ ಉದಯೋನ್ಮುಖ ಆಟಗಾರರಾದ ಸಂಜು ಸ್ಯಾಮ್ಸನ್, ಶಿವಂ ದುಬೆ ಹಾಗೂ ಶುಭಮನ್ ಗಿಲ್ ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌