ಆ್ಯಪ್ನಗರ

ಟ್ವೆಂಟಿ-20 ವಿಶ್ವ ಚಾಂಪಿಯನ್ನರಿಗೆ ಭಾರತ ಸವಾಲು; ಕೋಹ್ಲಿ ಓಪನರ್

ಏಕದಿನ ಸರಣಿಯಲ್ಲಿ 3-1ರ ಅಂತರದ ಗೆಲುವು ದಾಖಲಿಸಿರುವ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ ಭಾನುವಾರ ನಡೆಯಲಿರುವ ಏಕಮಾತ್ರ ಟ್ವೆಂಟಿ-20 ಪಂದ್ಯದಲ್ಲಿ ಆತಿಥೇಯ ವೆಸ್ಟ್ಇಂಡೀಸ್ ಸವಾಲನ್ನು ಎದುರಿಸಲಿದೆ.

ಟೈಮ್ಸ್ ಆಫ್ ಇಂಡಿಯಾ 8 Jul 2017, 3:23 pm
ಕಿಂಗಸ್ಟನ್‌‌: ಏಕದಿನ ಸರಣಿಯಲ್ಲಿ 3-1ರ ಅಂತರದ ಗೆಲುವು ದಾಖಲಿಸಿರುವ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ ಭಾನುವಾರ ನಡೆಯಲಿರುವ ಏಕಮಾತ್ರ ಟ್ವೆಂಟಿ-20 ಪಂದ್ಯದಲ್ಲಿ ಆತಿಥೇಯ ವೆಸ್ಟ್ಇಂಡೀಸ್ ಸವಾಲನ್ನು ಎದುರಿಸಲಿದೆ.
Vijaya Karnataka Web virat kohli may open as india start favourites despite chris gayle factor
ಟ್ವೆಂಟಿ-20 ವಿಶ್ವ ಚಾಂಪಿಯನ್ನರಿಗೆ ಭಾರತ ಸವಾಲು; ಕೋಹ್ಲಿ ಓಪನರ್


ಪಂದ್ಯಾರಂಭ: ಭಾರತೀಯ ಕಾಲಮಾನ ರಾತ್ರಿ 9ಕ್ಕೆ.

ವಿಂಡೀಸ್ ತಂಡಕ್ಕೆ ಅನುಭವಿ ಕ್ರಿಸ್ ಗೇಲ್ ಪುನರಾಗಮನದ ಹೊರತಾಗಿಯೂ ಟೀಮ್ ಇಂಡಿಯಾ ಗೆಲುವಿನ ಫೇವರಿಟ್ ಎನಿಸಿಕೊಂಡಿದೆ. ಅತ್ತ 15 ತಿಂಗಳುಗಳ ಬಳಿಕ ತವರಿನ ಅಂಗಳದಲ್ಲಿ ಮೊದಲ ಬಾರಿಗೆ ಗೇಲ್ ತಮ್ಮ ಬಲಾಬಲವನ್ನು ತೋರ್ಪಡಿಸುವ ಇರಾದೆಯಲ್ಲಿದ್ದಾರೆ.

ಭಾರತ ತಂಡದಲ್ಲಿ ಓಪನರ್ ಆಗಿ ಮಗದೊಮ್ಮೆ ವಿರಾಟ್ ಕೋಹ್ಲಿ ಬ್ಯಾಟಿಂಗ್ ಆರಂಭಿಸುವ ಸಾಧ್ಯತೆಯಿದೆ. ಈ ಮೂಲಕ ಚುಟುಕು ಕ್ರಿಕೆಟ್‌ನಲ್ಲೂ ಅಮೋಘ ಫಾರ್ಮ್ ಮುಂದುವರಿಸುವ ಇರಾದೆಯಲ್ಲಿದ್ದಾರೆ.

ಭಾರತದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಗೆದ್ದ ಸಾಧನೆ ಮಾಡಿರುವ ವಿಂಡೀಸ್ ತಂಡವನ್ನು ದುರ್ಬಲವಾಗಿ ಕಡೆಗಣಿಸುವಂತಿಲ್ಲ. ವಿಶ್ವಕಪ್ ವಿಜೇತ ತಂಡದಲ್ಲಿದ್ದ ಗೇಲ್, ಮಾರ್ಲನ್ ಸ್ಯಾಮುವೆಲ್ಸ್, ಸುನಿಲ್ ನರೈನ್ ಹಾಗೂ ಸ್ಯಾಮುವೆಲ್ ಬದ್ರೀ ಭಾರತಕ್ಕೆ ಕಠಿಣ ಸವಾಲು ಒಡ್ಡುವ ನಿರೀಕ್ಷೆಯಿದೆ.

ನಾಯಕ ಜಾಸನ್ ಹೋಲ್ಡರ್‌ಗೆ ವಿಶ್ರಾಂತಿ ಕಲ್ಪಿಸಿರುವ ಹಿನ್ನೆಲೆಯಲ್ಲಿ ತಂಡವನ್ನು ಕಾರ್ಲಸ್ ಬ್ರಾತ್‌ವೇಟ್ ಮುನ್ನಡೆಸಲಿದ್ದಾರೆ. ಕಳೆದ ವರ್ಷ ಫ್ಲೋರಿಡಾದಲ್ಲಿ ನಡೆದ ಪಂದ್ಯದಲ್ಲಿ ಕೇವಲ 49 ಎಸೆತಗಳಲ್ಲಿ 100 ರನ್ ಗಳಿಸಿದ ಎವಿನ್ ಲೆವಿಸ್ ಸಹ ಪ್ರವಾಸಿಗರಿಗೆ ಕಬ್ಬಿಣದ ಕಡಲೆಯಾಗಲಿದ್ದಾರೆ.

ಭಾರತ ತಂಡದಲ್ಲಿ ನಾಯಕ ಕೋಹ್ಲಿ ಹೊರತಾಗಿ ಶಿಖರ್ ಧವನ್, ಅಜಿಂಕ್ಯಾ ರಹಾನೆ, ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್, ಕೇದರ್ ಜಾಧವ್, ಹಾರ್ದಿಕ್ ಪಾಂಡ್ಯ ಮುಂತಾದ ಅನುಭವಿ ಪಡೆಯನ್ನು ಹೊಂದಿದೆ. ಬೌಲಿಂಗ್ ವಿಭಾಗವನ್ನು ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ದಿನೇಶ್ ಕಾರ್ತಿಕ್, ಮೊಹಮ್ಮದ್ ಶಮಿ ಮುನ್ನಡೆಸಲಿದ್ದಾರೆ. ಈ ನಡುವೆ ರಿಷಬ್ ಪಂತ್ ಹಾಗೂ ಕುಲ್‌ದೀಪ್ ಯಾದವ್ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ತಂಡಗಳು ಇಂತಿದೆ:

ಭಾರತ: ವಿರಾಟ್ ಕೋಹ್ಲಿ (ನಾಯಕ), ಶಿಖರ್ ಧವನ್, ಅಜಿಂಕ್ಯಾ ರಹಾನೆ, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ಯುವರಾಜ್ ಸಿಂಗ್, ಕೇದರ್ ಜಾಧವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್‌ದೀಪ್ ಯಾದವ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ದಿನೇಶ್ ಕಾರ್ತಿಕ್ ಮತ್ತು ಮೊಹಮ್ಮದ್ ಶಮಿ.

ವೆಸ್ಟ್ಇಂಡೀಸ್: ಕಾರ್ಲಸ್ ಬ್ರಾತ್‌ವೇಟ್ (ನಾಯಕ), ಸ್ಯಾಮುವೆಲ್ ಬದ್ರೀ, ರಾನ್ಸ್‌ಫಾರ್ಡ್ ಬೀಟನ್, ಕ್ರಿಸ್ ಗೇಲ್, ಎವಿನ್ ಲೆವಿಸ್, ಜಾಸನ್ ಮೊಹಮ್ಮದ್, ಸುನಿಲ್ ನರೈನ್, ಕೀರಾನ್ ಪೊಲಾರ್ಡ್, ರೋವ್‌ಮ್ಯಾನ್ ಪವೆಲ್, ಮರ್ಲನ್ ಸ್ಯಾಮುವೆಲ್ಸ್, ಜೆರಮ್ ಟೇಲರ್, ಚಾಂದ್‌ವಿಕ್ ವಾಲ್ಟನ್ (ವಿಕೆಟ್ ಕೀಪರ್) ಮತ್ತು ಕೆರ್ಸಿಕ್ ವಿಲಿಯಮ್ಸ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌