ಆ್ಯಪ್ನಗರ

ಅನುಷ್ಕಾ ಪ್ರಕಾರ ವಿರಾಟ್ ಕೊಹ್ಲಿ ಶಾಂತ ವ್ಯಕ್ತಿಯಂತೆ!

ಮೈದಾನದಲ್ಲಿ ವಿರಾಟ್ ಕೊಹ್ಲಿ ಅಗ್ರೇಸಿವ್ ಆಗಿರುತ್ತಾರೆ. ಆದರೆ ಮೈದಾನದ ಹೊರಗಡೆ ತಾವು ಭೇಟಿ ಮಾಡಿರುವ ಪೈಕಿ ಅತ್ಯಂತ ಶಾಂತ ವ್ಯಕ್ತಿಯಾಗಿದ್ದಾರೆ ಎಂದು ಪತ್ನಿ ಅನುಷ್ಕಾ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 31 Jul 2019, 3:40 pm
ಹೊಸದಿಲ್ಲಿ: ಮೈದಾನದಲ್ಲಿ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಆಕ್ರಮಣಕಾರಿ ಶೈಲಿಯ ನಾಯಕತ್ವವನ್ನು ಮೈಗೂಡಿಸಿ ಬಂದಿರಬಹುದು. ಆದರೆ ತಾವು ಭೇಟಿ ಮಾಡಿರುವ ಪೈಕಿ ಅತ್ಯಂತ ಶಾಂತವಾದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಪತ್ನಿ ಅನುಷ್ಕಾ ಶರ್ಮಾ ಹೇಳಿದ್ದಾರೆ.
Vijaya Karnataka Web virushka-03


ವಿರಾಟ್ ಕೊಹ್ಲಿ ತಮ್ಮ ಅನೇಕ ಸಂದರ್ಶನಗಳಲ್ಲಿ ಪತ್ನಿ ಅನುಷ್ಕಾ ಬೀರಿರುವ ಪ್ರಭಾವದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಈಗ ಪತಿ ಬಗ್ಗೆ ಅನುಷ್ಕಾ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಮೈದಾನದ ಹೊರಗಡೆ ವಿರಾಟ್ ಶಾಂತವಾಗಿರುತ್ತಾರೆ. ನೀವಿದನ್ನು ಬೇಕಾದರೆ ನನ್ನ ಸ್ನೇಹಿತರು ಅಥವಾ ತಂಡದ ಸದಸ್ಯರಲ್ಲಿ ಕೇಳಬಹುದು ಎಂದು ಅನುಷ್ಕಾ ಹೇಳಿದ್ದಾರೆ.

ಟೀಮ್ ಇಂಡಿಯಾ ಪರ ಶ್ರೇಷ್ಠ ನಿರ್ವಹಣೆ ನೀಡಲು ಅತ್ಯಂತ ಭಾವೋದ್ವೇಗವನ್ನು ಹೊಂದಿರುವ ವಿರಾಟ್ ಮೈದಾನದಲ್ಲಿ ಆಕ್ರಮಣಕಾರಿ ಮನೋಭಾವವನ್ನು ಹೊಂದಿರುತ್ತಾರೆ. ಆದರೆ ನಿಜ ಜೀವನದಲ್ಲಿ ಅಗ್ರೇಸಿವ್ ಅಲ್ಲ. ಅದು ಮೈದಾನದಲ್ಲಿರುವ ವರ್ತನೆ ಮಾತ್ರವಾಗಿದೆ. ನನಗೆ ಗೊತ್ತಿರುವ ಪೈಕಿ ಅತ್ಯಂತ ಶಾಂತ ವ್ಯಕ್ತಿಯಾಗಿದ್ದಾರೆ. ನಾನು ಅವರನ್ನು ನೋಡುತ್ತೇನೆ ಮತ್ತು ಇಷ್ಟಪಡುತ್ತೇನೆ. ವಾಹ್ ನೀವು ತುಂಬಾನೇ ಚಿಲ್ ಆಗಿದ್ದೀರಿ ಎಂದು ಅನುಷ್ಕಾ ಅಭಿಪ್ರಾಯಪಟ್ಟರು.

ಅದೇ ಹೊತ್ತಿಗೆ ಪರಸ್ಪರ ಗೌರವದಿಂದ ಬಿಡುವಿಲ್ಲದ ಜೀವನದಲ್ಲೂ ಪ್ರೀತಿಯಿಂದ ಹೊಂದಿಕೊಂಡು ಮುಂದಕ್ಕೆ ಹೋಗಲು ಸಾಧ್ಯವಾಗುತ್ತಿದೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌