ಆ್ಯಪ್ನಗರ

ಟೆಸ್ಟ್, ಏಕದಿನ, ಟ್ವೆಂಟಿ-20ನಲ್ಲಿ 50ಕ್ಕೂ ಹೆಚ್ಚು ಸರಾಸರಿ ಕಾಯ್ದುಕೊಂಡ ವಿರಾಟ್ ಕೊಹ್ಲಿ

ಭಾರತೀಯ ಕ್ರಿಕೆಟ್ ತಂಡದ ನಾಯಕ ಮಗದೊಮ್ಮೆ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ಗಳಲ್ಲಿ 50ಕ್ಕೂ ಹೆಚ್ಚು ಬ್ಯಾಟಿಂಗ್ ಸರಾಸರಿಯನ್ನು ಕಾಯ್ದುಕೊಂಡಿದ್ದಾರೆ. ಈ ಮೂಲಕ ಎಲ್ಲ ಪ್ರಕಾರದಲ್ಲೂ ತಾವೇ ಶ್ರೇಷ್ಠ ಬ್ಯಾಟ್ಸ್‌ಮನ್ ಎಂಬದನ್ನು ಸಾಬೀತು ಮಾಡಿದ್ದಾರೆ.

Vijaya Karnataka Web 19 Sep 2019, 4:41 pm
ಮೊಹಾಲಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಗದೊಮ್ಮೆ ಎಲ್ಲ ಪ್ರಕಾರದ ಕ್ರಿಕೆಟ್‌ನಲ್ಲೂ 50ಕ್ಕೂ ಹೆಚ್ಚು ಸರಾಸರಿಯನ್ನು ಕಾಯ್ದುಕೊಂಡಿದ್ದಾರೆ.
Vijaya Karnataka Web virat-kohli-fifty-03


ವಿರಾಟ್ ಕೊಹ್ಲಿ ನಾಯಕನಾಟದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಸರಣಿಯ ಅಂತಿಮ ಪಂದ್ಯವು ಸೆಪ್ಟೆಂಬರ್ 22 ಭಾನುವಾರದಂದು ನಡೆಯಲಿದೆ.

ಹಿಟ್‌ಮ್ಯಾನ್ ರೋಹಿತ್ ದಾಖಲೆ ಮುರಿದ ವಿರಾಟ್ ಟ್ವೆಂಟಿ-20 ಸಾಮ್ರಾಟ್

52 ಎಸೆತಗಳನ್ನು ಎದುರಿಸಿರುವ ವಿರಾಟ್ ಕೊಹ್ಲಿ ನಾಲ್ಕು ಬೌಂಡರಿ ಮೂರು ಸಿಕ್ಸರ್ ನೆರವಿನಿಂದ ಅಜೇಯ 72 ರನ್ ಗಳಿಸಿದ್ದರು. ದ್ವಿತೀಯ ಪಂದ್ಯಕ್ಕೂ ಮುನ್ನ ಕೊಹ್ಲಿ ಟ್ವೆಂಟಿ-20 ಬ್ಯಾಟಿಂಗ್ ಸರಾಸರಿ 49ರ ಅಸುಪಾಸಿನಲ್ಲಿತ್ತು. ಆದರೆ ಮ್ಯಾಚ್ ವಿನ್ನಿಂಗ್ ಅರ್ಧಶತಕ ಬಾರಿಸುವುದರೊಂದಿಗೆ ಮಗದೊಮ್ಮೆ 50ಕ್ಕೂ ಹೆಚ್ಚಿನ ಸರಾಸರಿ ಕಾಯ್ದುಕೊಂಡಿದ್ದಾರೆ. ಈ ಮೂಲಕ ಟೆಸ್ಟ್, ಏಕದಿನ ಸೇರಿದಂತೆ ಟ್ವೆಂಟಿ-20ನಲ್ಲೂ ತಾವೇ ಶ್ರೇಷ್ಠ ಎಂಬುದನ್ನು ಸಾಬೀತು ಮಾಡಿದ್ದಾರೆ.

ಸಮಕಾಲೀನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಸ್ಟೀವ್ ಸ್ಮಿತ್ ನಡುವೆ ಯಾರು ಬೆಸ್ಟ್ ಬ್ಯಾಟ್ಸ್‌ಮನ್ ಎಂಬುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಮೀರಿಸಿದ್ದರು.

ಸೂಪರ್‌ಮ್ಯಾನ್ ವಿರಾಟ್ ಕೊಹ್ಲಿ; ನೋಡಲು ಮರೆಯದಿರಿ ಅದ್ಭುತ ಕ್ಯಾಚ್!

ಈ ನಡುವೆ ಉಪನಾಯಕ ರೋಹಿತ್ ಶರ್ಮಾ ದಾಖಲೆಯನ್ನು ಮುರಿದಿರುವ ವಿರಾಟ್ ಕೊಹ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ. ಈ ಮೊದಲು ವಿರಾಟ್ ಹೆಸರಲ್ಲೇ ಈ ದಾಖಲೆಯಿದ್ದರೂ ಬಳಿಕ ರೋಹಿತ್ ಶರ್ಮಾ ಮುರಿದಿದ್ದರು. ಇದೀಗ ಮತ್ತೆ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಟ್ವೆಂಟಿ-20 ಕ್ರಿಕೆಟ್‌ಗೂ ತಾವೇ ಸಾಮ್ರಾಟ್ ಎಂಬುದನ್ನು ಸಾಬೀತು ಮಾಡಿದ್ದಾರೆ.

ವಿರಾಟ್ ಕೊಹ್ಲಿ ಬ್ಯಾಟಿಂಗ್ ಸರಾಸರಿ:
ಟೆಸ್ಟ್: 53.14
ಏಕದಿನ: 60.31
ಟ್ವೆಂಟಿ-20: 50.85


ವಿರಾಟ್ ಕೊಹ್ಲಿ ವೃತ್ತಿ ಜೀವನ:
ಟೆಸ್ಟ್: ಪಂದ್ಯ: 79, ಇನ್ನಿಂಗ್ಸ್: 135, ಅಜೇಯ: 8, ರನ್: 6749, ಸರಾಸರಿ: 53.14, ಶತಕ: 25, 50: 22,
ಏಕದಿನ: ಪಂದ್ಯ: 239, ಇನ್ನಿಂಗ್ಸ್: 230, ಅಜೇಯ: 39, ರನ್: 11520, ಸರಾಸರಿ: 60.31, ಶತಕ: 43, 50: 54,
ಟ್ವೆಂಟಿ-20: ಪಂದ್ಯ: 71, ಇನ್ನಿಂಗ್ಸ್: 66, ಅಜೇಯ: 18, ರನ್: 2441, ಸರಾಸರಿ: 50.85, 50: 22.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌