ಆ್ಯಪ್ನಗರ

ಪುಮಾ ದಾಖಲೆ ಒಪ್ಪಂದ; ಬೋಲ್ಟ್ ಅಭಿನಂದನೆ

ಭಾರತೀಯ ಕ್ರಿಕೆಟ್ ತಂಡದ ಆಕ್ರಮಣಕಾರಿ ನಾಯಕ ವಿರಾಟ್ ಕೋಹ್ಲಿ, ಪುಮಾ ಸಂಸ್ಥೆಯ ಜೊತೆಗೆ ದಾಖಲೆಯ 110 ಕೋಟಿ ರೂ.ಗಳ ಜಾಹೀರಾತು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರೊಂದಿಗೆ ಒಂದೇ ಸಂಸ್ಥೆಯ ಜೊತೆಗೆ 100 ಕೋಟಿಗೂ ಹೆಚ್ಚು ಮೊತ್ತದ ಜಾಹೀರಾತು ಒಪ್ಪಂದಕ್ಕೆ ಸಹಿ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 21 Feb 2017, 5:05 pm
ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಆಕ್ರಮಣಕಾರಿ ನಾಯಕ ವಿರಾಟ್ ಕೋಹ್ಲಿ, ಪುಮಾ ಸಂಸ್ಥೆಯ ಜೊತೆಗೆ ದಾಖಲೆಯ 110 ಕೋಟಿ ರೂ.ಗಳ ಜಾಹೀರಾತು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರೊಂದಿಗೆ ಒಂದೇ ಸಂಸ್ಥೆಯ ಜೊತೆಗೆ 100 ಕೋಟಿಗೂ ಹೆಚ್ಚು ಮೊತ್ತದ ಜಾಹೀರಾತು ಒಪ್ಪಂದಕ್ಕೆ ಸಹಿ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
Vijaya Karnataka Web virat kohli strikes rs 100 crore deal with puma
ಪುಮಾ ದಾಖಲೆ ಒಪ್ಪಂದ; ಬೋಲ್ಟ್ ಅಭಿನಂದನೆ


ಜಾಗತಿಕ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬೇಡಿಕೆಯ ಕ್ರಿಕೆಟಿಗ ಎಂದೆನಿಸಿಕೊಂಡಿರುವ ವಿರಾಟ್, ಕ್ರೀಡಾ ಜೀವನಶೈಲಿ ವಸ್ತುಗಳ ಉತ್ಪಾದಕ ಸಂಸ್ಥೆ ಪುಣೆ ಜೊತೆಗೆ ಎಂಟು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ತನ್ಮೂಲಕ ವಿಶ್ವದ ಅತಿ ವೇಗದ ಓಟಗಾರ ಜಮೈಕಾದ ಉಸೈನ್ ಬೋಲ್ಟ್, ಅಸಾಫಾ ಪಾವೆಲ್ ಹಾಗೂ ಖ್ಯಾತ ಫುಟ್ಬಾಲಿಗ ಥಿಯರಿ ಹೆನ್ರಿ ಹಾಗೂ ಓಲಿವರ್ ಗಿರೌಡ್ ಎಂಬವರ ಸಾಲಿಗೆ ಸೇರಿದ್ದಾರೆ.

ಜರ್ಮನಿಯ ಪುಮಾ ಸಂಸ್ಥೆಯ ಕ್ರೀಡಾ ಜೀವನಶೈಲಿ ಉತ್ಪನ್ನಗಳ ಪ್ರಚಾರವನ್ನು ಕೋಹ್ಲಿ ಮಾಡಲಿದ್ದಾರೆ. ಈ ಜಾಹೀರಾತು ಒಪ್ಪಂದದ ಪ್ರಕಾರ ವಾರ್ಷಿಕವಾಗಿ 12ರಿಂದ 14 ಕೋಟಿ ರೂ. ಗಿಟ್ಟಿಸಿಕೊಳ್ಳಲಿದ್ದಾರೆ.

“Great choice @imVkohli Time to go to the next level #ForeverFaster” — Usain St. Leo Bolt (@usainbolt) February 20, 2017 ಈ ನಡುವೆ ಪುಮಾ ಕ್ಲಬ್‌ಗೆ ಸ್ವಾಗತಿಸುತ್ತಾ ಕೋಹ್ಲಿ ಅವರಿಗೆ ಬೋಲ್ಟ್ ಅಭಿನಂದನೆ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕೋಹ್ಲಿ ಧನ್ಯವಾದವನ್ನು ತಿಳಿಸಿದ್ದಾರೆ. ಬೋಲ್ಟ್ ತಮ್ಮ ಟ್ವಿಟ್‌ನಲ್ಲಿ ಅತ್ಯುತ್ತಮ ಆಯ್ಕೆ ಎಂದು ಅಭಿನಂದಿಸಿದ್ದರು.

ವಿರಾಟ್ ಕೋಹ್ಲಿ ಹೊರತುಪಡಿಸಿದರೆ ಭಾರತೀಯ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹಾಗೂ ಏಕದಿನ ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ 100 ಕೋಟಿ ಜಾಹೀರಾತು ಕ್ಲಬ್‌ನಲ್ಲಿದ್ದಾರೆ. ಈ ಪೈಕಿ ಸಚಿನ್ ಇದುವರೆಗೆ 50ಕ್ಕೂ ಬ್ರಾಂಡ್‌ಗಳಿಂದಾಗಿ 500 ಕೋಟಿ ರೂ.ಗಳಿಗೂ ಹೆಚ್ಚು ಜಾಹೀರಾತು ಒಪ್ಪಂದ ಮಾಡಿಕೊಂಡಿದ್ದಾರೆ. I wish I could get as fast as you someday @usainbolt. Thanks legend. @PUMA #ForeverFaster — Virat Kohli (@imVkohli) February 20, 2017

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌