ಆ್ಯಪ್ನಗರ

ದಾದಾ ದಾಖಲೆ ಮುರಿದು ಮಹೇಂದ್ರ ಸಿಂಗ್ ಧೋನಿ ಎಲೈಟ್ ಪಟ್ಟಿಗೆ ಸೇರಿದ ಕಿಂಗ್ ಕೊಹ್ಲಿ

ಮಹೇಂದ್ರ ಸಿಂಗ್ ಧೋನ ಬಳಿಕ ಟೀಮ್ ಇಂಡಿಯಾ ಟೆಸ್ಟ್ ತಂಡವನ್ನು 50 ಪಂದ್ಯಗಳಲ್ಲಿ ಮುನ್ನಡೆಸಿದ ಗೌರವಕ್ಕೆ ವಿರಾಟ್ ಕೊಹ್ಲಿ ಭಾಜನವಾಗಿದ್ದಾರೆ. ಈ ಮೂಲಕ ಸೌರವ್ ಗಂಗೂಲಿ ದಾಖಲೆಯನ್ನು ಮುರಿದಿದ್ದಾರೆ.

Vijaya Karnataka Web 10 Oct 2019, 10:22 am
ಪುಣೆ: ಟೆಸ್ಟ್ ಕ್ರಿಕೆಟ್‌ನಲ್ಲಿ 50 ಪಂದ್ಯಗಳಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಿದ ಗೌರವಕ್ಕೆ ವಿರಾಟ್ ಕೊಹ್ಲಿ ಭಾಜನವಾಗಿದ್ದಾರೆ. ಈ ಮೂಲಕ ಮಾಜಿ ಯಶಸ್ವಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಮುರಿದಿರುವ ಕಿಂಗ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜತೆಗೆ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
Vijaya Karnataka Web virat-kohli-06


ಅಷ್ಟೇ ಯಾಕೆ ಮಹಿ ಬಳಿಕ ಟೀಮ್ ಇಂಡಿಯಾ ಟೆಸ್ಟ್ ತಂಡವನ್ನು 50ಕ್ಕೂ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ಎರಡನೇ ಕಪ್ತಾನ ಎಂದೆನಿಸಿಕೊಂಡಿದ್ದಾರೆ.

ರೋಹಿತ್ ವಿಕೆಟ್ ಪತನ; ಭಾರತ vs ದಕ್ಷಿಣ ಆಫ್ರಿಕಾ ಲೈವ್ ಸ್ಕೋರ್ ಕಾರ್ಡ್

ಇನ್ನು ಗೆಲುವಿನ ವಿಚಾರಕ್ಕೆ ಬಂದರೆ ಆಗಲೇ ಸೌರವ್ ಗಂಗೂಲಿ ಹಾಗೂ ಎಂಎಸ್ ಧೋನಿ ದಾಖಲೆಯನ್ನು ಮುರಿದಿರುವ ವಿರಾಟ್ ಕೊಹ್ಲಿ ಈಗಾಗಲೇ 29 ಗೆಲುವು ದಾಖಲಿಸಿ, ಭಾರತದ ಅತ್ಯಂತ ಯಶಸ್ವಿ ಕಪ್ತಾನ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ.

ಅತಿ ಹೆಚ್ಚು ಪಂದ್ಯಗಳಲ್ಲಿ ಟೆಸ್ಟ್ ಕಪ್ತಾನಗಿರಿ ವಹಿಸಿದ ಭಾರತೀಯ ನಾಯಕರುಗಳು:

ಮಹೇಂದ್ರ ಸಿಂಗ್ ಧೋನಿ: 60 ಪಂದ್ಯ, ಗೆಲುವು: 27
ವಿರಾಟ್ ಕೊಹ್ಲಿ: ಪಂದ್ಯ: 50*, ಗೆಲುವು: 29
ಸೌರವ್ ಗಂಗೂಲಿ: ಪಂದ್ಯ: 49, ಗೆಲುವು: 21
ಸುನಿಲ್ ಗವಾಸ್ಕರ್: ಪಂದ್ಯ: 47, ಗೆಲುವು: 9
ಮೊಹಮ್ಮದ್ ಅಜುರುದ್ದೀನ್: ಪಂದ್ಯ: 47, ಗೆಲುವು: 14
ಎಂಎಕೆ ಪಟೌಡಿ: ಪಂದ್ಯ: 40, ಗೆಲುವು: 9

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನಂ.1 ಆಗಿದ್ದರೂ ವಿರಾಟ್ ಕೊಹ್ಲಿ ಬದಲಾವಣೆ ಬಯಸಿದ್ದೇಕೆ?

49 ಟೆಸ್ಟ್ ಪಂದ್ಯ ಆಗುವ ವೇಳೆಯಲ್ಲಿ ಆಸ್ಟ್ರೇಲಿಯಾದ ಮಾಜಿ ದಿಗ್ಗಜರಾದ ಸ್ಟೀವ್ ವ್ಹಾ ಹಾಗೂ ರಿಕಿ ಪಾಟಿಂಗ್ ಮಾತ್ರ ಕೊಹ್ಲಿಗಿಂತಲೂ ಹೆಚ್ಚು ಗೆಲುವುಗಳನ್ನು ದಾಖಲಿಸಿದ್ದಾರೆ.

49 ಟೆಸ್ಟ್ ವೇಳೆಯಲ್ಲಿ ಅತಿ ಹೆಚ್ಚು ಗೆಲುವು ದಾಖಲಿಸಿದ ನಾಯಕರು:
ಸ್ಟೀವ್ ವ್ಹಾ: ಗೆಲುವು: 36
ರಿಕಿ ಪಾಂಟಿಂಗ್: ಗೆಲುವು: 34
ವಿರಾಟ್ ಕೊಹ್ಲಿ: ಗೆಲುವು: 29

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌