ಆ್ಯಪ್ನಗರ

ಅನುಷ್ಕಾ ಜತೆಗಿನ ರೋಮ್ಯಾಂಟಿಕ್ ಚಿತ್ರ ಹಂಚಿದ ವಿರಾಟ್

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಬೆನ್ನಲ್ಲೇ ತಮ್ಮ ಯಶಸ್ಸಿಗೆ ಪತ್ನಿ ಅನುಷ್ಕಾ ಶರ್ಮಾ ಕಾರಣ ಎಂದು ಹೇಳಿರುವ ಟೀಮ್ ಇಂಡಿಯಾ ನಾಯಕ ಇದೀಗ ರೋಮ್ಯಾಂಟಿಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ.

TIMESOFINDIA.COM 20 Feb 2018, 3:59 pm
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಬೆನ್ನಲ್ಲೇ ತಮ್ಮ ಯಶಸ್ಸಿಗೆ ಪತ್ನಿ ಅನುಷ್ಕಾ ಶರ್ಮಾ ಕಾರಣ ಎಂದು ಹೇಳಿರುವ ಟೀಮ್ ಇಂಡಿಯಾ ನಾಯಕ ಇದೀಗ ರೋಮ್ಯಾಂಟಿಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ.
Vijaya Karnataka Web virats super romantic picture with anushka
ಅನುಷ್ಕಾ ಜತೆಗಿನ ರೋಮ್ಯಾಂಟಿಕ್ ಚಿತ್ರ ಹಂಚಿದ ವಿರಾಟ್


ತಮ್ಮ ಅಧಿಕೃತ ಇನ್‌ಸ್ಟಾಂ ಪುಟದಲ್ಲಿ ವಿರಾಟ್ ಅವರು ಅನುಷ್ಕಾ ಅವರನ್ನು ತಬ್ಬಿಕೊಂಡಿರುವ ಚಿತ್ರವನ್ನು ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ.

ಈ ಚಿತ್ರ ಕ್ಲಿಕ್ಕಿಸಲು ವಿಶೇಷ ಕಾರಣವೊಂದಿದೆ. ಗೋಡೆಯ ಹಿಂದೆ ಪ್ರೀತಿಯ ಸಂಕೇತವಾಗಿ ಗಂಡು ಹೆಣ್ಣು ತಬ್ಬಿಕೊಳ್ಳುವ ಚಿತ್ರವಿತ್ತು. ಇದನ್ನೇ ವಿರುಷ್ಕಾ ಅನುಕರಿಸಿದ್ದಾರೆ.

  A post shared by Virat Kohli (@virat.kohli) on Feb 20, 2018 at 12:14am PST ಕೊಹ್ಲಿ ತಮ್ಮ ಪೋಸ್ಟ್‌ನಲ್ಲಿ 'ಮೈ ಒನ್ ಆ್ಯಂಡ್ ಒನ್ಲಿ' ಎಂಬ ಕ್ಯಾಪ್ಷನ್ ಸಹ ನೀಡಿದ್ದಾರೆ.

ಒಟ್ಟಿನಲ್ಲಿ ತಮ್ಮ ಪತ್ನಿಯ ಜತೆಗಿನ ಪ್ರೀತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವಲ್ಲಿ ವಿರಾಟ್ ಎಂದೂ ಹಿಂಜರಿದಿಲ್ಲ. ಇದಕ್ಕೀಗ ಹೊಸ ಸೇರ್ಪೆಡೆಯಾಗಿದೆ.

ಅಂದ ಹಾಗೆ 2017 ಡಿಸೆಂಬರ್ 11ರಂದು ತಮ್ಮ ದೀರ್ಘ ಕಾಲದ ಪ್ರೇಯಸಿ ಅನುಷ್ಕಾ ಅವರನ್ನು ಇಟಲಿಯ ಮಿಲಾನ್‌ನಲ್ಲಿ ವಿರಾಟ್ ವರಿಸಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌