ಆ್ಯಪ್ನಗರ

ಕೋಲ್ಕತ್ತಾ ಪಂದ್ಯ ಬೆಲ್ ರಿಂಗಣಿಸಿದ ವೀರು, ಜೂಲನ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ದ್ವಿತೀಯ ಏಕದಿನ ಪಂದ್ಯಕ್ಕೆ ಇತಿಹಾಸ ಪ್ರಸಿದ್ಧ ಕೋಲ್ಕತ್ತಾದ ಈಡೆನ್ ಗಾರ್ಡೆನ್ ಮೈದಾನ ಆತಿಥ್ಯ ವಹಿಸಿದೆ.

Vijaya Karnataka Web 21 Sep 2017, 3:01 pm
ಕೋಲ್ಕತ್ತಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ದ್ವಿತೀಯ ಏಕದಿನ ಪಂದ್ಯಕ್ಕೆ ಇತಿಹಾಸ ಪ್ರಸಿದ್ಧ ಕೋಲ್ಕತ್ತಾದ ಈಡೆನ್ ಗಾರ್ಡೆನ್ ಮೈದಾನ ಆತಿಥ್ಯ ವಹಿಸಿದೆ.
Vijaya Karnataka Web virender sehwag and jhulan goswami ring the bell at eden gardens
ಕೋಲ್ಕತ್ತಾ ಪಂದ್ಯ ಬೆಲ್ ರಿಂಗಣಿಸಿದ ವೀರು, ಜೂಲನ್


ಪಂದ್ಯಕ್ಕೆ ಮಳೆಯ ಆತಂಕವಿದ್ದರೂ ವರುಣ ದೇವರ ಯಾವುದೇ ಅಡ್ಡಿಯಿಲ್ಲದೆ ಸಮಯಕ್ಕೆ ಸರಿಯಾಗಿ ಪಂದ್ಯ ಆರಂಭವಾಗಿದೆ.

ಇದರಂತೆ ಭಾರತದ ಮಾಜಿ ಸ್ಪೋಟಕ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಹಿರಿಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಜೂಲನ್ ಗೋಸ್ವಾಮಿ, ರಿಂಗ್ ಬೆಲ್ ಬಾರಿಸುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದರು.



ಈಡೆನ್ ಗಾರ್ಡೆನ್ ಮೈದಾನದಲ್ಲಿ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಬಂದು ಟೀಮ್ ಇಂಡಿಯಾವನ್ನು ಬೆಂಬಲಿಸುತ್ತಾರೆ. ಈ ಹಿಂದೆಯೂ ಭಾರತ-ಆಸೀಸ್ ನಡುವಣ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆಯಾಗಿತ್ತು.

ಸೌರವ್ ಗಂಗೂಲಿ ಬಂಗಾಳ ಕ್ರಿಕೆಟ್ ಸಂಸ್ಥೆಯ ನೇತೃತ್ವ ವಹಿಸಿದ ಬಳಿಕ ಈಡೆನ್ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ವಹಿಸಿದ್ದಾರೆ. Eden Gardens - pitch toh turn hogi , kya Australia ki kismat turn hogi ? #IndvsAus #ViruKiCommentary pic.twitter.com/brgoWLv4Mp — Virender Sehwag (@virendersehwag) September 21, 2017

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌