ಆ್ಯಪ್ನಗರ

ಡಿಡಿಸಿಎ ಕ್ರಿಕೆಟ್‌ ಸಮಿತಿಯಲ್ಲಿ ಸೆಹ್ವಾಗ್‌-ಗಂಭೀರ್‌

ಒಂದು ಕಾಲದಲ್ಲಿ ಭಾರತ ಕ್ರಿಕೆಟ್‌ ತಂಡದ ಸ್ಫೋಟಕ ಆರಂಭಿಕ ಜೋಡಿ ಎನಿಸಿಕೊಂಡಿದ್ದ ವೀರೇಂದ್ರ ಸೆಹ್ವಾಗ್‌ ಮತ್ತು ಗೌತಮ್‌ ಗಂಭೀರ್‌ ಇದೀಗ ಹೊಸದಾಗಿ ರಚನೆಯಾಗಿರುವ ದಿಲ್ಲಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ(ಡಿಡಿಸಿಎ)ಯ ನೂತನ ಸಮಿತಿಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಲು ಅಣಿಯಾಗಿದ್ದಾರೆ. ದಿಲ್ಲಿ ಆರಂಭಿಕ ಜೋಡಿ ಇನ್ನು ಮುಂದೆ ಆಕಾಶ್‌ ಚೋಪ್ರಾ ಮತ್ತು ರಾಹುಲ್‌ ಸಾಂಘ್ವಿ ಜತೆ ದಿಲ್ಲಿ ತಂಡದ ಕೋಚ್‌ಗಳು ಹಾಗೂ ಆಯ್ಕೆಗಾರರ ಆಯ್ಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Vijaya Karnataka 26 Jul 2018, 10:58 am
ಹೊಸದಿಲ್ಲಿ: ಒಂದು ಕಾಲದಲ್ಲಿ ಭಾರತ ಕ್ರಿಕೆಟ್‌ ತಂಡದ ಸ್ಫೋಟಕ ಆರಂಭಿಕ ಜೋಡಿ ಎನಿಸಿಕೊಂಡಿದ್ದ ವೀರೇಂದ್ರ ಸೆಹ್ವಾಗ್‌ ಮತ್ತು ಗೌತಮ್‌ ಗಂಭೀರ್‌ ಇದೀಗ ಹೊಸದಾಗಿ ರಚನೆಯಾಗಿರುವ ದಿಲ್ಲಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ(ಡಿಡಿಸಿಎ)ಯ ನೂತನ ಸಮಿತಿಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಲು ಅಣಿಯಾಗಿದ್ದಾರೆ. ದಿಲ್ಲಿ ಆರಂಭಿಕ ಜೋಡಿ ಇನ್ನು ಮುಂದೆ ಆಕಾಶ್‌ ಚೋಪ್ರಾ ಮತ್ತು ರಾಹುಲ್‌ ಸಾಂಘ್ವಿ ಜತೆ ದಿಲ್ಲಿ ತಂಡದ ಕೋಚ್‌ಗಳು ಹಾಗೂ ಆಯ್ಕೆಗಾರರ ಆಯ್ಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
Vijaya Karnataka Web virender-sehwag-12


ಆದರೆ, ಸಮಿತಿಯ ವ್ಯಾಪ್ತಿ ಮತ್ತು ಅಧಿಕಾರ ಇದೀಗ ಹಿತಾಸಕ್ತಿ ಸಂಘರ್ಷದ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಗೌತಮ್‌ ಗಂಭೀರ್‌ ಕ್ರಿಕೆಟ್‌ನಲ್ಲಿ ಸಕ್ರಿಯನಾಗಿರುವಾಗಲೇ ಆಯ್ಕೆಗಾರರ ಆಯ್ಕೆಯಲ್ಲಿ ಹೇಗೆ ಭಾಗಿಯಾಗುತ್ತಾರೆ? ಅದಾದ ಬಳಿಕ, ಗಂಭೀರ್‌ ಅವರನ್ನು ತಂಡಕ್ಕೆ ಆಯ್ಕೆ ಮಾಡುವವರು ಯಾರು? ಎಂಬಿತ್ಯಾದಿ ಗೊಂದಲಗಳು ಸೃಷ್ಟಿಯಾಗಿವೆ.

ಇನ್ನು, ಸೆಹ್ವಾಗ್‌ ಬಗ್ಗೆ ಹೇಳಬೇಕೆಂದರೆ, ಭಾರತ ತಂಡದ ಮಾಜಿ ಆರಂಭಿಕ ಆಟಗಾರ ದಿಲ್ಲಿಯಲ್ಲಿ ತಮ್ಮದೇ ಆದ ಕ್ರಿಕೆಟ್‌ ಅಕಾಡೆಮಿಯೊಂದನ್ನು ಹೊಂದಿದ್ದಾರೆ. ಅಲ್ಲದೆ, ಇಂಡಿಯಾ ಟಿವಿ ಚಾನೆಲ್‌ನಲ್ಲಿ ತಜ್ಞ ವಿಶ್ಲೇಷಕರೂ ಆಗಿದ್ದಾರೆ. ಅವರು ದಿಲ್ಲಿ ಕ್ರಿಕೆಟ್‌ ಸಮಿತಿಯಲ್ಲಿ ಸದಸ್ಯನಾದರೆ ಹಿತಾಸಕ್ತಿ ಸಂಘರ್ಷಕ್ಕೆ ದಾರಿ ಮಾಡಿಕೊಡಲಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಈ ಆರೋಪಗಳನ್ನು ಡಿಡಿಸಿಎ ಕಾರ್ಯದರ್ಶಿ ವಿನೋದ್‌ ತಿಹಾರಾ ಅವರು ತಳ್ಳಿಹಾಕಿದ್ದು, ಲೋಧಾ ಸಮಿತಿಯ ಶಿಫಾರಸಿನಂತೆಯೇ ನಡೆದುಕೊಂಡರೆ ನಮಗೆ ಅರ್ಹರು ಸಿಗುವುದಿಲ್ಲ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌