ಆ್ಯಪ್ನಗರ

ಟಿ-10 ಲೀಗ್‌ಗೆ ಸೆಹ್ವಾಗ್, ಆಫ್ರಿದಿ, ಮೆಕಲಮ್ ಐಕಾನ್

ಶಾರ್ಜಾದಲ್ಲಿ ನಡೆಯಲಿರುವ ವಿಶ್ವ ಟಿ-10 ಲೀಗ್

TOI.in 4 Oct 2018, 10:55 am
ದುಬೈ: ಎರಡನೇ ಆವೃತ್ತಿಯ ಟ್ವೆಂಟಿ-20 ಲೀಗ್ ನವೆಂಬರ್ 23ರಂದು ಶಾರ್ಜಾದಲ್ಲಿ ನಡೆಯಲಿದೆ. ಇದರಂತೆ ವಿಶ್ವದ ಚೊಚ್ಚಲ ಟಿ-10 ಲೀಗ್‌ಗೆ ಭಾರತದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಜೊತೆಗೆ ಪಾಕಿಸ್ತಾನ ಮಾಜಿ ನಾಯಕ ಶಾಹೀದ್ ಆಫ್ರಿದಿ ಮತ್ತು ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ ಐಕಾನ್ ಆಗಿ ಆಯ್ಕೆಗೊಂಡಿದ್ದಾರೆ.
Vijaya Karnataka Web virender-sehwag-01


ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅನುಮೋದನೆಯೊಂದಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮಾನ್ಯತೆಯಲ್ಲಿ ಟಿ-10 ಲೀಗ್ ಆಯೋಜಿಸಲಾಗುತ್ತಿದೆ.

2018ನೇ ಆವೃತ್ತಿಯು 10 ದಿನಗಳ ಪರ್ಯಂತ ನಡೆಯಲಿದ್ದು, ಒಟ್ಟು 29 ಪಂದ್ಯಗಳು ನಡೆಯಲಿದೆ. ಕಳೆದ ಬಾರಿ ನಾಲ್ಕು ದಿನಗಳು ಮಾತ್ರ ಟೂರ್ನಿ ಆಯೋಜನೆಯಾಗಿತ್ತು.

ಮೊದಲ ಆವೃತ್ತಿಯಲ್ಲಿ ದೊರಕಿದ ಯಶಸ್ಸಿನಿಂದ ಉತ್ಸಾಹಿತರಾಗಿರುವ ಆಯೋಜಕರು ಅನೇಕ ಬದಲಾವಣೆಗಳನ್ನು ತಂದಿದ್ದಾರೆ. ಅನುಭವಿ ಸಿಒಇ ಜೊತೆಗೆ ಹೊಸ ಆಡಳಿತ ಮಂಡಳಿಯನ್ನು ರೂಪಿಸಿದೆ. ಹಾಗೆಯೇ ಐಸಿಸಿ ಪ್ಯಾನೆಲ್ ಅಂಪೈರ್‌ಗಳನ್ನು ನೇಮಕ ಮಾಡಲಾಗಿದೆ. ಇನ್ನು ತಾಂತ್ರಿಕ ಸಮಿತಿಯ ಅಧ್ಯಕ್ಷರಾಗಿ ರೋಶನ್ ಮಹಾನಾಮ ಹಾಗೂ ವಾಸೀಂ ಅಕ್ರಂ ಅವರನ್ನು ನೇಮಕ ಮಾಡಲಾಗಿದೆ.

ಭಾಗವಹಿಸುವ ಎಂಟು ತಂಡಗಳು: ಕೇರಳ ಕಿಂಗ್ಸ್, ಪಂಜಾಬ್ ಲೆಜೆಂಡ್ಸ್, ಮರಾಠ ಅರಬೀಯನ್ಸ್, ಬಂಗಾಳ ಟೈಗರ್ಸ್, ದಿ ಕರಾಚಿಯನ್ಸ್, ರಜಪೂತ್ಸ್, ನಾಥರ್ನ್ ವಾರಿಯರ್ಸ್ ಮತ್ತು ಪಾಕ್ತೂನ್ಸ್.

ದಿನಾಂಕ: ನ. 23ರಿಂದ ಡಿ. 02ರ ವರೆಗೆ
ಸ್ಥಳ: ಶಾರ್ಜಾ ಕ್ರಿಕೆಟ್ ಮೈದಾನ
ಹೊಸದಾಗಿ ಸೇರ್ಪಡೆಯಾದ ತಂಡಗಳು: ಕರಾಚಿಯನ್ಸ್ ಮತ್ತು ನಾಥರ್ನ್ ವಾರಿಯರ್ಸ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌