ಆ್ಯಪ್ನಗರ

ಲಂಕಾ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಭರ್ಜರಿ ಜಯ

ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಎರಡು ವಿಭಾಗಗಳಲ್ಲೂ ಮಿಂಚಿದ ವೆಸ್ಟ್‌ ಇಂಡೀಸ್‌ ತಂಡ ಇಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ಧ 226 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕೆರಿಬಿಯನ್ನರು 1-0 ಅಂತರದಲ್ಲಿ ಮುನ್ನಡೆ ಕಂಡುಕೊಂಡಿದ್ದಾರೆ.

Vijaya Karnataka 12 Jun 2018, 5:00 am
ಪೋರ್ಟ್‌ ಆಫ್‌ ಸ್ಪೇನ್‌: ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಎರಡು ವಿಭಾಗಗಳಲ್ಲೂ ಮಿಂಚಿದ ವೆಸ್ಟ್‌ ಇಂಡೀಸ್‌ ತಂಡ ಇಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ಧ 226 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕೆರಿಬಿಯನ್ನರು 1-0 ಅಂತರದಲ್ಲಿ ಮುನ್ನಡೆ ಕಂಡುಕೊಂಡಿದ್ದಾರೆ.
Vijaya Karnataka Web west-indies-02


ಇಲ್ಲಿನ ಕ್ವೀನ್ಸ್‌ ಪಾರ್ಕ್‌ ಓವಲ್‌ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ 453 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ 83.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ನಷ್ಟಕ್ಕೆ 226 ರನ್‌ ಗಳಿಸಿಲಷ್ಟೇ ಶಕ್ತಗೊಂಡು ಹೀನಾಯ ಸೋಲನುಭವಿಸಿದೆ. ಲಂಕಾ ಪರ ಆರಂಭಿಕ ಬ್ಯಾಟ್ಸ್‌ಮನ್‌ ಕುಸಾಲ್‌ ಮೆಂಡಿಸ್‌(102) ಶತಕ ದಾಖಲಿಸಿದರೂ ಉಳಿದ ಬ್ಯಾಟ್ಸ್‌ಮನ್‌ಗಳ ಅಸ್ಥಿರ ಪ್ರದರ್ಶನದಿಂದ ಸೋಲಿಗೆ ತುತ್ತಾಗಿದೆ.

ಅಂತಿಮ ದಿನದ ವಿರಾಮದಲ್ಲಿ 189ಕ್ಕೆ 3 ವಿಕೆಟ್‌ ಕಳೆದುಕೊಂಡರೂ ಸುಸ್ಥಿತಿಯಲ್ಲಿದ್ದ ಲಂಕಾ, ಭೋಜನ ವಿರಾಮದ ನಂತರ ನಾಟಕೀಯ ಕುಸಿತ ಕಂಡಿತು. ಮಧ್ಯಮ ಮತ್ತು ಕೆಳ ಕ್ರಮಾಂಕದ ಯಾವೊಬ್ಬ ಬ್ಯಾಟ್ಸ್‌ಮನ್‌ಗಳು ದಿಟ್ಟ ಪ್ರತಿರೋಧ ಒಡ್ಡುವಲ್ಲಿ ವಿಫಲಗೊಂಡರು. ವೆಸ್ಟ್‌ ಇಂಡೀಸ್‌ ಪರ ಆಲ್‌ರೌಂಡರ್‌ ರಾಸ್ಟನ್‌ ಚೇಸ್‌ ನಾಲ್ಕು ಮತ್ತು ದೇವೇಂದ್ರ ಬಿಶೂ 3 ವಿಕೆಟ್‌ ಉರುಳಿಸಿ ತಂಡಕ್ಕೆ ಸುಲಭ ಜಯ ಒದಗಿಸಿದರು.

ಸಂಕ್ಷಿಪ್ತ ಸ್ಕೋರ್‌

ವೆಸ್ಟ್‌ ಇಂಡೀಸ್‌: 414/8ಡಿಕ್ಲೇರ್‌ ಮತ್ತು 223/7 ಡಿಕ್ಲೇರ್‌.

ಶ್ರೀಲಂಕಾ: 185 ಮತ್ತು ದ್ವಿತೀಯ ಇನಿಂಗ್ಸ್‌ 83.2 ಓವರ್‌ಗಳಲ್ಲಿ 226(ಕುಸಾಲ್‌ ಮೆಂಡಿಸ್‌ 102; ರಾಸ್ಟನ್‌ ಚೇಸ್‌ 15ಕ್ಕೆ 4, ದೇವೇಂದ್ರ ಬಿಶೂ 48ಕ್ಕೆ 3).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌