ಆ್ಯಪ್ನಗರ

ಪೊಲಾರ್ಡ್‌, ಬ್ರಾವೊ ಸೇರ್ಪಡೆ; ಗೇಲ್‌ ಅಲಭ್ಯ

ವಿಂಡೀಸ್ ತಂಡಕ್ಕೆ ಡರೆನ್ ಬ್ರಾವೊ, ಕೀರನಾ ಪೊಲಾರ್ಡ್ ಸೇರ್ಪಡೆ

Vijaya Karnataka 9 Oct 2018, 3:38 pm
ಹೊಸದಿಲ್ಲಿ: ಆತಿಥೇಯ ಭಾರತ ತಂಡದ ವಿರುದ್ಧದ ಏಕದಿನ ಸರಣಿಗೆ ಬ್ಯಾಟ್ಸ್‌ಮನ್‌ ಡರೆನ್‌ ಬ್ರಾವೊ ಮತ್ತು ಆಲ್‌ರೌಂಡರ್‌ ಕೀರಾನ್‌ ಪೊಲಾರ್ಡ್‌ ವೆಸ್ಟ್‌ ಇಂಡೀಸ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ. ಆದರೆ, ಆರಂಭಿಕ ಆಟಗಾರ ಕ್ರಿಸ್‌ ಗೇಲ್‌ ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ಎರಡೂ ಸರಣಿಗಳಿಂದ ಹೊರಗುಳಿಯಲು ತೀರ್ಮಾನಿಸಿದ್ದಾರೆ ಎಂದೂ ಅದು ತಿಳಿಸಿದೆ.
Vijaya Karnataka Web pollard-bravo


ಇದೇ ಶುಕ್ರವಾರ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ ಬಳಿಕ 5 ಪಂದ್ಯಗಳ ಏಕದಿನ ಸರಣಿಗೆ (ಅಕ್ಟೋಬರ್‌ 21ರಿಂದ) ಚಾಲನೆ ದೊರೆಯಲಿದೆ.

''ಭಾರತ ಮತ್ತು ಬಾಂಗ್ಲಾದೇಶ ವಿರುದ್ಧ ಮುಂಬರುವ ಎರಡು ಏಕದಿನ ಸರಣಿಗಳಲ್ಲಿ ಪ್ರಮುಖ ಆಟಗಾರ ಕ್ರಿಸ್‌ ಗೇಲ್‌ ಆಡುವುದಿಲ್ಲ. ಆಯ್ಕೆಗೆ ಲಭ್ಯವಿಲ್ಲ ಎಂದು ಅವರೇ ಹೇಳಿದ್ದಾರೆ,'' ಎಂದು ಆಯ್ಕೆ ಸಮಿತಿ ಅಧ್ಯಕ್ಷ ಕಟ್ರ್ನಿ ಬ್ರೌನ್‌ ಭಾನುವಾರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

39 ವರ್ಷದ ಗೇಲ್‌ ಪ್ರಸ್ತುತ ಅಫಘಾನಿಸ್ತಾನ ಪ್ರೀಮಿಯರ್‌ ಲೀಗ್‌ನಲ್ಲಿ ತಲ್ಲೀನರಾಗಿದ್ದಾರೆ. ನಂತರ ಟಿ10 ಲೀಗ್‌, ಬಳಿಕ ಯುಎಇ ಕ್ರಿಕೆಟ್‌ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಏನೇ ಆದರೂ, ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಸರಣಿ ಹಾಗೂ ಅದಾದ ಬಳಿಕ 2019ರ ವಿಶ್ವಕಪ್‌ಗೆ ಲಭ್ಯವಾಗಲಿದ್ದಾರೆ ಎಂದು ಬ್ರೌನ್‌ ತಿಳಿಸಿದ್ದಾರೆ.

ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಮತ್ತು ಸ್ಪಿನ್ನರ್‌ ಸುನಿಲ್‌ ನರೇನ್‌ ಕಾರಣಾಂತರಗಳಿಂದ ಭಾರತ ಪ್ರವಾಸ ಕೈಗೊಂಡಿಲ್ಲ.

ಮೂರು ಹೊಸ ಮುಖ

ಆರಂಭಿಕ ಆಟಗಾರ ಚಂದ್ರಪಾಲ್‌ ಹೇಮರಾಜ್‌, ಆಲ್‌ರೌಂಡರ್‌ ಫ್ಯಾಬಿಯಾನ್‌ ಅಲೆನ್‌ ಮತ್ತು ವೇಗದ ಬೌಲರ್‌ ಒಶಾನೆ ಥಾಮಸ್‌ ಏಕದಿನ ಸರಣಿಯಲ್ಲಿ ಮೊದಲ ಬಾರಿಗೆ ವೆಸ್ಟ್‌ ಇಂಡೀಸ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಟಿ20 ತಂಡದಲ್ಲಿ ರಸೆಲ್‌

ಏಕದಿನ ಸರಣಿ ಬಳಿಕ ನವೆಂಬರ್‌ 4ರಂದು ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌ ಆಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌