ಆ್ಯಪ್ನಗರ

Sourav Ganguly: ಧೋನಿಯನ್ನು ಎಲ್ಲಿಂದ ಪಡೆದಿದ್ದೀರಿ? ದಾದಾಗೆ ಮುಷರಫ್ ಪ್ರಶ್ನೆ

ಧೋನಿಯನ್ನು ವಾಘಾ ಗಡಿಯಿಂದ ಎಳೆದು ತರಲಾಗಿತ್ತೇ?

Vijaya Karnataka Web 27 Nov 2018, 11:50 am
ಹೊಸದಿಲ್ಲಿ: ದಶಕದ ಹಿಂದೆ ಸೌರವ್ ಗಂಗೂಲಿ ನೇತೃತ್ವದಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡ ಟೀಮ್ ಇಂಡಿಯಾ ಅಮೋಘ ನಿರ್ವಹಣೆ ನೀಡಿತ್ತು. ಅಂದು ಭಾರತ ತಂಡದಲ್ಲಿದ್ದ ಯುವ ವಿಕೆಟ್ ಕೀಪರ್ ಹೊಡೆಬಡಿಯ ದಾಂಡಿಗ ಮಹೇಂದ್ರ ಸಿಂಗ್ ಧೋನಿ ಉದ್ದನೆಯ ಕೂದಲು ಬಿಟ್ಟುಕೊಂಡು ಎಲ್ಲರ ಗಮನ ಸಳೆಯುತ್ತಿದ್ದರು.
Vijaya Karnataka Web dhoni-musharraf-ganguly


ಅಷ್ಟೇ ಯಾಕೆ 46 ಎಸೆತಗಳಲ್ಲಿ ಅಜೇಯ 72 ರನ್ ಚಚ್ಚುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಅಂದಿನ ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ಸಹ ಧೋನಿ ಬ್ಯಾಟಿಂಗ್‌ನಿಂದ ಪ್ರಭಾವಿತರಾಗಿದ್ದರು. ಅಲ್ಲದೆ ಧೋನಿ ಜೊತೆಗೆ ನಡೆಸಿದ ಸಮಾಲೋಚನೆ ಹೆಚ್ಚು ಚರ್ಚಿತವಾಗಿತ್ತು. ಈ ಲುಕ್ ನಿಮಗೆ ಚೆನ್ನಾಗಿ ಕಾಣಿಸುತ್ತಿದ್ದು, ಕೂದಲನ್ನ ಕತ್ತರಿಸದಂತೆ ಸೂಚಿಸಿದ್ದರು.

ಇದೀಗ ಮುಷರಫ್ ಜೊತೆಗಿನ ಮಾತುಕತೆಯನ್ನು ಸೌರವ್ ಗಂಗೂಲಿ ನೆನಪಿಸಿಕೊಂಡಿದ್ದಾರೆ. ಧೋನಿ ಬಿರುಸಿನ ಬ್ಯಾಟಿಂಗ್‌ಗೆ ಮಾರು ಹೋದ ಮುಷರಫ್ ದಾದಾ ಬಳಿ ಬಂದು "ನೀವು ಇವರನ್ನು ಎಲ್ಲಿಂದ ಪಡೆದಿದ್ದೀರಿ?" ಎಂಬ ಪ್ರಶ್ನೆ ಕೇಳಿದ್ದರು.

ಇದಕ್ಕೆ ಪ್ರತಿಯಾಗಿ ದಾದಾ, "ವಾಘಾ ಗಡಿಯ ಸಮೀಪ ನಡೆದುಕೊಂಡು ಹೋಗುತ್ತಿದ್ದರು. ಅಲ್ಲಿಂದ ಎಳೆದು ತಂದೆ" ಎಂದು ನಗುಮುಖದಿಂದಲೇ ಉತ್ತರಿಸಿದರು.

ಅಲ್ಲಿಂದ ಬಳಿಕ ಧೋನಿ ಕ್ರಿಕೆಟ್ ಇತಿಹಾಸದ ಪುಟ ಸೇರಿದ್ದಾರೆ. 2007ರಲ್ಲಿ ಚೊಚ್ಚಲ ಟ್ವೆಂಟಿ-20 ಹಾಗೂ 2011 ಏಕದಿನ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಅದೇ ಹೊತ್ತಿಗೆ 2019ರ ಏಕದಿನ ವಿಶ್ವಕಪ್‌ನಲ್ಲಿ ಧೋನಿ ಆಡಬೇಕು ಎಂಬುದನ್ನು ದಾದಾ ಹೇಳಿದರು. ಈ ನಿಟ್ಟಿನಲ್ಲಿ ಉತ್ತಮ ನಿರ್ವಹಣೆ ನೀಡಬೇಕಿದೆ. ಧೋನಿ ಚಾಂಪಿಯನ್ ಆಗಿದ್ದು, ಚಾಂಪಿಯನ್‌ಗಳು ಚಾಂಪಿಯನ್ ರೀತಿಯಲ್ಲೇ ಮೈದಾನ ಬಿಟ್ಟು ತೆರಳಬೇಕಿದೆ ಎಂಬುದನ್ನು ಉಲ್ಲೇಖಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌