ಆ್ಯಪ್ನಗರ

ದ್ರಾವಿಡ್‌ಗೆ ಸಿಕ್ತು; ಸಚಿನ್‌ಗೆ ಏಕಿಲ್ಲ 'ಹಾಲ್ ಆಫ್ ಫೇಮ್' ಗೌರವ?

ರಾಹುಲ್ ದ್ರಾವಿಡ್‌ಗೆ ಹಾಲ್ ಆಫ್ ಫೇಮ್ ಗೌರವ

Vijaya Karnataka Web 1 Nov 2018, 4:45 pm
ಬೆಂಗಳೂರು: ಈ ಪ್ರಶ್ನೆ ಸಹಜವಾಗಿಯೇ ಅಭಿಮಾನಿಗಳ ಹೃದಯದಲ್ಲಿ ಮೂಡಿ ಬರುತ್ತಿದೆ. ಈಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ (ಐಸಿಸಿ) 'ಹಾಲ್ ಆಫ್ ಫೇಮ್' ಗೌರವಕ್ಕೆ ರಾಹುಲ್ ದ್ರಾವಿಡ್ ಪಾತ್ರವಾಗಿದ್ದರು. ಆದರೆ 'ಕ್ರಿಕೆಟ್ ದೇವರು' ಎಂದೇ ಪರಿಗಣಿಸಲ್ಪಟ್ಟಿರುವ ಮಾಜಿ ಐಕಾನ್ ಸಚಿನ್ ತೆಂಡೂಲ್ಕರ್‌ ಹೆಸರನ್ನು ಇದುವರೆಗೆ ಹಾಲ್ ಆಫ್ ಫೇಮ್ ಎಲೈಟ್ ಪಟ್ಟಿಗೆ ಏಕೆ ಸೇರಿಸಿಲ್ಲ ಎಂಬುದು ಬಹಳಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
Vijaya Karnataka Web dravid-sachin


ಸತ್ಯಾಂಶವೇನು?
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ ಒಟ್ಟು 84 ಮಂದಿ ಮಾಜಿ ಆಟಗಾರರಿಗೆ ಹಾಲ್ ಆಫ್ ಫೇಮ್ ಗೌರವ ನೀಡಲಾಗಿದೆ. ಈ ಪೈಕಿ ಐವರು ಆಟಗಾರರು ಭಾರತೀಯರಾಗಿದ್ದಾರೆ. ಅವರೆಂದರೆ ಬಿಷನ್ ಸಿಂಗ್ ಬೇಡಿ, ಸುನಿಲ್ ಗವಾಸ್ಕರ್, ಕಪಿಲ್ ದೇವ್, ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್.

ಹಾಲ್ ಆಫ್ ಫೇಮ್ ಎಂದರೇನು?
ಕ್ರಿಕೆಟ್‌ಗೆ ನೀಡಿರುವ ಕೊಡುಗೆಗಳನ್ನು ಗಮನಿಸಿ ಮಾಜಿ ಆಟಗಾರರಿಗೆ ಹಾಲ್ ಆಫ್ ಫೇಮ್ ಗೌರವವನ್ನು ನೀಡಲಾಗುತ್ತದೆ. ಇದನ್ನು 2009ರಲ್ಲಿ ಅವಿಷ್ಕರಿಸಲಾಗಿತ್ತು.

ಹಾಲ್ ಆಫ್ ಪಟ್ಟಿಗೆ ಸೆೇರಲು ಕೆಲವೊಂದು ಮಾನದಂಡಗಳಿವೆ. ಬ್ಯಾಟ್ಸ್‌ಮನ್‌ಗಳು 8000 ರನ್ ಮತ್ತು 20 ಶತಕಗಳನ್ನು ಗಳಿಸಿರಬೇಕು. ಇನ್ನು ಬೌಲರ್‌ಗಳು 200ಕ್ಕೂ ಹೆಚ್ಚು ವಿಕೆಟ್ ಪಡೆದಿರಬೇಕು.

ಹಾಗಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 30 ಸಾವಿರಕ್ಕೂ ಹೆಚ್ಚು ರನ್ ಗಳಿಸಿಯೂ ಸಚಿನ್‌ಗೆ ಏಕೆ ಹಾಲ್ ಆಫ್ ಫೇಮ್ ಏಕೆ ಸಿಕ್ಕಿಲ್ಲ ? ಎಂಬ ಪ್ರಶ್ನೆ ಮೂಡುತ್ತದೆ. ಅದೇನೆಂದರೆ ಹಾಲ್ ಆಫ್ ಫೇಮ್ ಪಟ್ಟಿಗೆ ಸೇರಲು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಕನಿಷ್ಠ ಐದು ವರ್ಷವಾಗಿರಬೇಕು.

ನಿಮ್ಮ ಮಾಹಿತಿಗಾಗಿ, ಸಚಿನ್ ತೆಂಡೂಲ್ಕರ್ 2013ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಪ್ರಸ್ತುತ 2018ನೇ ವರ್ಷ ಚಾಲ್ತಿಯಲ್ಲಿರುವುದರಿಂದ ಮುಂಬರುವ ವರ್ಷಗಳಲ್ಲಿ ನಿಸ್ಸಂಶಯವಾಗಿಯೂ ಹಾಲ್ ಆಫ್ ಫೇಮ್ ಗೌರವ ಸಿಗಲಿದೆ ಎಂಬುದರಲ್ಲಿ ಸಂಶಯವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌