ಆ್ಯಪ್ನಗರ

ಮಹಿಳಾ ಟಿ20 ಚಾಲೆಂಜ್‌: ಟ್ರೇಲ್‌ಬ್ಲೇಝರ್‌ vs ಸೂಪರ್‌ ನೋವಾಸ್‌ ಫೈಟ್‌!

ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆಯ ಆರ್ಭಟದ ಹಿನ್ನೆಲೆಯಲ್ಲಿ ಕಳೆದ ವರ್ಷ ಮಹಿಳಾ ಟಿ20 ಚಾಲೆಂಜ್‌ ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸಲಾಗಿರಲಿಲ್ಲ. ಹೀಗಾಗಿ ಐಪಿಎಲ್‌ 2022 ಟೂರ್ನಿಯ ನಾಕ್‌ಔಟ್‌ ಪಂದ್ಯಗಳ ಜೊತೆಗೆ ಮಹಿಳಾ ಟಿ20 ಚಾಲೆಂಜ್‌ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಎಂದಿನಂತೆ ಈ ಬಾರಿಯೂ ಒಟ್ಟು 3 ತಂಡಗಳು ಟಿ20 ಕ್ರಿಕೆಟ್‌ ಗರಿ ಸಲುವಾಗಿ ಕಾದಾಡಲಿವೆ. ಮೊದಲ ಪಂದ್ಯದಲ್ಲಿ ಸ್ಮೃತಿ ಮಂಧಾನಾ ಸಾರಥ್ಯದ ಟ್ರೇಲ್‌ಬ್ಲೇಝರ್ಸ್‌ ಮತ್ತು ಹರ್ಮನ್‌ಪ್ರೀತ್‌ ಕೌರ್‌ ಸಾರಥ್ಯದ ಸೂಪರ್‌ನೋವಾಸ್‌ ತಂಡಗಳು ಮುಖಾಮುಖಿ ಆಗಲಿವೆ.

Authored byವಿಜೇತ್ ಕುಮಾರ್ | Vijaya Karnataka Web 23 May 2022, 5:53 pm

ಹೈಲೈಟ್ಸ್‌:

  • ಮೇ 23ರಿಂದ ಮಹಿಳಾ ಟಿ20 ಕ್ರಿಕೆಟ್‌ ಟೂರ್ನಿ ಆರಂಭ.
  • ಒಟ್ಟು ಮೂರು ತಂಡಗಳ ನಡುವೆ ನಡೆಯಲಿರುವ ಕಾದಾಟ.
  • ಮೊದಲ ಪಂದ್ಯದಲ್ಲಿ ಟ್ರೇಲ್‌ಬ್ಲೇಝರ್ಸ್‌ಗೆ ಸೂಪರ್‌ ನೋವಾಸ್‌ ಚಾಲೆಂಜ್‌.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Harmanpreet Kaur and Smriti Mandhana TB vs SN 2022
ಹರ್ಮನ್‌ಪ್ರೀತ್‌ ಕೌರ್‌ ಮತ್ತು ಸ್ಮೃತಿ ಮಂಧಾನಾ (ಚಿತ್ರ: ಬಿಸಿಸಿಐ).
ಮುಂಬೈ: ಒಂದು ವರ್ಷದ ವಿರಾಮದ ಬಳಿಕ ಮಹಿಳಾ ಟಿ20 ಚಾಲೆಂಜ್‌ ಕ್ರಿಕೆಟ್‌ ಟೂರ್ನಿ ಮತ್ತೆ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಸ್ಮೃತಿ ಮಂಧಾನಾ ಸಾರಥ್ಯದ ಟ್ರೇಲ್‌ಬ್ಲೇಝರ್ಸ್‌ ಮತ್ತು ಹರ್ಮನ್‌ಪ್ರೀತ್‌ ಕೌರ್‌ ಸಾರಥ್ಯದ ಸೂಪರ್‌ನೋವಾಸ್‌ ತಂಡಗಳು ಮುಖಾಮುಖಿ ಆಗಲಿದ್ದು, ಮೇ 23ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಈ ಪಂದ್ಯ ಜರುಗಲಿದೆ.
ಎಂದಿನಂತೆ ಮೂರು ತಂಡಗಳು ನಡುವಣ ಕಾದಾಟ ಇದಾಗಿದೆ. ರೌಂಡ್‌ ರಾಬಿನ್‌ ಮಾದರಿಯಲ್ಲಿ ಪರಸ್ಪರ ಕಾದಾಟ ನಡೆಸಿದ ಬಳಿಕ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ಮೇ 28 ರಂದು ನಡೆಯಲಿರುವ ಫೈನಲ್‌ನಲ್ಲಿ ಸೆಣಸಲಿವೆ. ಮೇ 29ರಂದು ಐಪಿಎಲ್ 2022 ಟೂರ್ನಿಯ ಫೈನಲ್‌ ಜರುಗಲಿದೆ.

ಟೂರ್ನಿಯ ಅಧಿಕೃತ ವೇಳಾಪಟ್ಟಿ ಹೀಗಿದೆ
ಮೇ 23 – ಟ್ರೇಲ್‌ಬ್ಲೇಝರ್ಸ್‌ vs ಸೂಪರ್‌ನೋವಾಸ್‌
ಮೇ 24 – ಸೂಪರ್‌ನೋವಾಸ್‌ vs ವೆಲಾಸಿಟಿ
ಮೇ 26 – ವೆಲಾಸಿಟಿ vs ಟ್ರೇಲ್‌ಬ್ಲೇಝರ್ಸ್‌
ಮೇ 28 – ಫೈನಲ್‌

'ಊಟ ಸಿಗದೆ ಕೇವಲ ಸಮೋಸ ಸೇವಿಸಿದ್ದ ಭಾರತ ಮಹಿಳಾ ಕ್ರಿಕೆಟ್‌ ತಂಡ', ಅಚ್ಚರಿಯ ಸಂಗತಿ ತೆರೆದಿಟ್ಟ ವಿನೋದ್‌ ರಾಯ್!

ನೇರ ಪ್ರಸಾರದ ಮಾಹಿತಿ
ಭಾರತ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ಹಾಟ್‌ಸ್ಟಾರ್‌
ಇಂಗ್ಲೆಂಡ್: ಸ್ಕೈ ಸ್ಪೋರ್ಟ್ಸ್‌ ಕ್ರಿಕೆಟ್‌
ನ್ಯೂಜಿಲೆಂಡ್‌: ಸ್ಕೈ ಸ್ಪೋರ್ಟ್ಸ್‌
ಐರ್ಲೆಂಡ್‌: ಸ್ಕೈ ಸ್ಪೋರ್ಟ್ಸ್‌ ಕ್ರಿಕೆಟ್
ಆಸ್ಟ್ರೇಲಿಯಾ: ಫಾಕ್ಸ್‌ ಸ್ಪೋರ್ಟ್ಸ್‌, ಕಾಯೊ ಸ್ಪೋರ್ಟ್ಸ್‌
ಸ್ಕಾಟ್ಲೆಂಡ್‌: ಸ್ಕೈ ಸ್ಪೋರ್ಟ್ಸ್‌ ಕ್ರಿಕೆಟ್‌

ಪಿಚ್‌ ವರದಿ
ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 15ನೇ ಆವೃತ್ತಿಯಲ್ಲಿ ಎಂಸಿಎ ಪಿಚ್‌ ಹಲವು ಬಾರಿ ಬಳಕೆ ಆಗಿದೆ. ಬಳಕೆ ಮಾಡಿದ ಪಿಚ್‌ ಆಗಿರುವ ಕಾರಣ ಚೆಂಡು ಮಂದಗತಿಯಲ್ಲಿ ಬರುತ್ತದೆ. ಹೀಗಾಗಿ ಬ್ಯಾಟ್‌ ಮಾಡುವುದು ಇಲ್ಲ ಬಹಳಾ ಸವಾಲಿನ ಸಂಗತಿ 130-135 ರನ್‌ ಗಳಿಸಿದರೆ ಇಲ್ಲಿ ಜಯ ದಾಖಲಿಸಬಹುದು. ಟಾಸ್‌ ಗೆದ್ದ್ ತಂಡ ಇಲ್ಲಿ ಮೊದಲು ಬ್ಯಾಟ್‌ ಮಾಡುವ ನಿರ್ಧಾರ ತೆಗೆದುಕೊಳ್ಳಲಿದೆ. ಏಕೆಂದರೆ ಈ ಪಿಚ್‌ನಲ್ಲಿ ರನ್‌ ಚೇಸಿಂಗ್‌ ಸುಲಭವಲ್ಲ.

ಮಹಿಳಾ ಬಿಗ್‌ ಬ್ಯಾಷ್‌ ಗೆದ್ದ ಪರ್ತ್, ಹರ್ಮನ್‌ಪ್ರೀತ್‌ ಟೂರ್ನಿ ಶ್ರೇಷ್ಠ!

ಟ್ರೇಲ್‌ಬ್ಲೇಝರ್ಸ್‌ ಸಂಭಾವ್ಯ 11
ಸ್ಮೃತಿ ಮಂಧಾನ (ನಾಯಕಿ), ಹೇಲಿ ಮ್ಯಾಥ್ಯೂಸ್, ಜೆಮಿಮಾ ರಾಡ್ರಿಗಸ್, ಶರ್ಮಿನ್ ಅಖ್ತರ್, ಸಬ್ಬಿನೇನಿ ಮೇಘನಾ, ರಿಚಾ ಘೋಷ್ (ವಿಕೆಟ್‌ಕೀಪರ್‌), ಸೋಫಿಯಾ ಡಂಕ್ಲೀ, ಪೂನಮ್ ಯಾದವ್, ಅರುಂಧತಿ ರೆಡ್ಡಿ, ರಾಜೇಶ್ವರಿ ಗಾಯಕ್ವಾಡ್, ಸಲ್ಮಾ ಖಾತುನ್.

ಸೂಪರ್‌ನೋವಾಸ್‌ ಪ್ಲೇಯಿಂಗ್ 11
ಡಿಯಾಂಡ್ರಾ ಡಾಟಿನ್, ಪ್ರಿಯಾ ಪುನಿಯಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಯೂನ್‌ ಲೂಸ್, ಹರ್ಲೀನ್ ಡಿಯೋಲ್, ತಾನಿಯಾ ಭಾಟಿಯಾ (ವಿಕೆಟ್‌ಕೀಪರ್‌), ಪೂಜಾ ವಸ್ತ್ರಾಕಾರ್, ಸೋಫಿ ಎಕ್ಲೆಸ್ಟೋನ್, ಅಲಾನಾ ಕಿಂಗ್, ಮಾನ್ಸಿ ಜೋಶಿ, ಮೇಘನಾ ಸಿಂಗ್.

ತಂಡಗಳ ವಿವರ
ಟ್ರೇಲ್‌ಬ್ಲೇಝರ್ಸ್
ಸ್ಮೃತಿ ಮಂಧಾನ (ನಾಯಕಿ), ಜೆಮಿಮಾ ರಾಡ್ರಿಗಸ್, ಸಬ್ಬಿನೇನಿ ಮೇಘನಾ, ಶರ್ಮಿನ್ ಅಖ್ತರ್, ರಿಚಾ ಘೋಷ್ (ವಿಕೆಟ್‌ಕೀಪರ್‌), ಹೇಲಿ ಮ್ಯಾಥ್ಯೂಸ್, ಸೋಫಿಯಾ ಡಂಕ್ಲೀ, ಪೂನಂ ಯಾದವ್, ರಾಜೇಶ್ವರಿ ಗಾಯಕ್‌ವಾಡ್, ಸಲ್ಮಾ ಖಾತುನ್, ರೇಣುಕಾ ಸಿಂಗ್, ಪ್ರಿಯಾಂಕಾ ಪ್ರಿಯಾಂಕಾ, ಅರುಂಧತಿಯಾ ರೆಡ್ಡಿ , ಶ್ರದ್ದಾ ಭಾವು ಪೋಖರ್ಕರ್, ಸುಜಾತಾ ಮಲ್ಲಿಕ್.

ಸೂಪರ್‌ನೋವಾಸ್‌ಹರ್ಮನ್‌ಪ್ರೀತ್ ಕೌರ್ (ನಾಯಕಿ), ಮುಸ್ಕಾನ್ ಮಲಿಕ್, ಪ್ರಿಯಾ ಪೂನಿಯಾ, ತನಿಯಾ ಭಾಟಿಯಾ (ವಿಕೆಟ್‌ಕೀಪರ್‌), ಡಿಯಾಂಡ್ರಾ ಡಾಟಿನ್, ಹರ್ಲೀನ್ ಡಿಯೋಲ್, ಪೂಜಾ ವಸ್ತ್ರಾಕರ್, ಸುನೆ ಲೂಸ್, ಸೋಫಿ ಎಕ್ಲೆಸ್ಟೋನ್, ಅಲಾನಾ ಕಿಂಗ್, ಆಯುಷಿ ಸೋನಿ, ಮಾನ್ಸಿ ಜೋಶಿ, ಮೇಘನಾ ಸಿಂಗ್, ಮೋನಿಕಾ ಪಟೇಲ್, ವಿ ಚಂದು , ರಾಶಿ ಕನೋಜಿಯಾ.
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌