ಆ್ಯಪ್ನಗರ

ವಿಶ್ವಕಪ್‌ ಉದ್ಘಾಟನೆ

12ನೇ ಆವೃತ್ತಿಯ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ 2019 ಉದ್ಘಾಟನಾ ಪಾರ್ಟಿ ವಿಶ್ವವಿಖ್ಯಾತಿಯ ಲಂಡನ್‌ ಮಾಲ್‌ನಲ್ಲಿ ಭಾರತೀಯ ಕಾಲಮಾನ 9.30ರಿಂದ ನಡೆಯಿತು. ಇಂಗ್ಲೆಂಡ್‌ನಲ್ಲಿ ಇದು ಮುಸ್ಸಂಜೆಯ ಆರು ಗಂಟೆ ಸಮಯ. ವಿಶ್ವ ಕ್ರಿಕೆಟ್‌ನ ಗಣ್ಯರು ಹಾಗೂ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ನಾನಾ ಕಾರ್ಯಕ್ರಮಗಳು ನಡೆದವು.

Vijaya Karnataka 30 May 2019, 5:00 am
ಲಂಡನ್‌ : 12ನೇ ಆವೃತ್ತಿಯ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ 2019 ಉದ್ಘಾಟನಾ ಪಾರ್ಟಿ ವಿಶ್ವವಿಖ್ಯಾತಿಯ ಲಂಡನ್‌ ಮಾಲ್‌ನಲ್ಲಿ ಭಾರತೀಯ ಕಾಲಮಾನ 9.30ರಿಂದ ನಡೆಯಿತು. ಇಂಗ್ಲೆಂಡ್‌ನಲ್ಲಿ ಇದು ಮುಸ್ಸಂಜೆಯ ಆರು ಗಂಟೆ ಸಮಯ. ವಿಶ್ವ ಕ್ರಿಕೆಟ್‌ನ ಗಣ್ಯರು ಹಾಗೂ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ನಾನಾ ಕಾರ್ಯಕ್ರಮಗಳು ನಡೆದವು.
Vijaya Karnataka Web world cup1


ಇಂಗ್ಲೆಂಡ್‌ನ ಧ್ವಜಗಳಿಂದಲೇ ಕಂಗೊಳಿಸುತ್ತಿದ್ದ ಮಾಲ್‌ನಲ್ಲಿ ಸಂಜೆಯಾಗುತ್ತಲೇ ಕ್ರಿಕೆಟ್‌ ಪ್ರಿಯರು ಜಮಾಯಿಸಿದ್ದರು. ಉದ್ಘಾಟನಾ ಪಾರ್ಟಿಯ ಆರಂಭದಲ್ಲಿ ಅಧಿಕೃತ ಹಾಡು 'ಸ್ಟಾಂಡ್‌ ಬೈ' ಅನ್ನು ಬಿಡುಗಡೆ ಮಾಡಲಾಯಿತು. ಕೂಟದಲ್ಲಿ ಪಾಲ್ಗೊಳ್ಳುವ ತಂಡಗಳ ನಾಯಕರು ವೇದಿಕೆಗೆ ಆಗಮಿಸಿದರು. ಇದಾದ ಬಳಿಕ ಆಯಾಯ ದೇಶಗಳ ಕ್ರಿಕೆಟ್‌ ಪ್ರಮುಖರು ಹಾಗೂ ಸೆಲೆಬ್ರಿಟಿಗಳು ಆಗಮಿಸಿದರು. ಭಾರತದ ಪರವಾಗಿ ಅನಿಲ್‌ ಕುಂಬ್ಳೆ ಹಾಗೂ ನಟ ಪರ್ಹಾನ್‌ ಅಖ್ತರ್‌ ಪಾಲ್ಗೊಂಡಿದ್ದರು. ಉಳಿದಂತೆ ಬ್ರೆಟ್‌ಲೀ, ಜಾಕ್‌ ಕಾಲಿಸ್‌, ಕೆವಿನ್‌ ಪೀಟರ್ಸನ್‌, ನೊಬೆಲ್‌ ಪ್ರಶಸ್ತಿ ವಿಜೇತೆ ಯೂಸುಫ್‌ ಝೈ ಮಲಾಲಾ ಮತ್ತಿತರರು ಪಾರ್ಟಿಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌