ಆ್ಯಪ್ನಗರ

ಯಮುನಾ ಮುಡಿಗೆ ಚಾಂಪಿಯನ್‌ ಮುಕುಟ

ದೇಬಸ್ಮಿತಾ ದತ್ತಾ ಅವರ ಅದ್ಭುತ ಆಲ್‌ರೌಂಡ್‌ ಪ್ರದರ್ಶನ(7ಕ್ಕೆ 3 ವಿಕೆಟ್‌ ಮತ್ತು ಅಜೇಯ 29 ರನ್‌)ದ ನೆರವಿನಿಂದ ಯಮುನಾ ತಂಡ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಸಹಯೋಗದಲ್ಲಿ ನಡೆದ ಮೊತ್ತಮೊದಲ ಮಹಿಳಾ ಕ್ರಿಕೆಟ್‌ ಲೀಗ್‌ ಟಿ20 ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

Vijaya Karnataka Web 9 Aug 2019, 5:00 am
ಬೆಂಗಳೂರು: ದೇಬಸ್ಮಿತಾ ದತ್ತಾ ಅವರ ಅದ್ಭುತ ಆಲ್‌ರೌಂಡ್‌ ಪ್ರದರ್ಶನ(7ಕ್ಕೆ 3 ವಿಕೆಟ್‌ ಮತ್ತು ಅಜೇಯ 29 ರನ್‌)ದ ನೆರವಿನಿಂದ ಯಮುನಾ ತಂಡ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಸಹಯೋಗದಲ್ಲಿ ನಡೆದ ಮೊತ್ತಮೊದಲ ಮಹಿಳಾ ಕ್ರಿಕೆಟ್‌ ಲೀಗ್‌ ಟಿ20 ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.
Vijaya Karnataka Web BNG-0808-2-2-TEAM YAMUNA (WINNERS)


ಗುರುವಾರ ನಡೆದ ಫೈನಲ್‌ನಲ್ಲಿ ಯಮುನಾ ತಂಡ ರನ್‌ ಸರಾಸರಿ ಆಧಾರದಲ್ಲಿ ಕಾವೇರಿ ತಂಡದ ವಿರುದ್ಧ ಜಯ ಗಳಿಸಿತು. ಮೊದಲು ಬ್ಯಾಟ್‌ ಮಾಡಿದ ಕಾವೇರಿ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 89 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಯಮುನಾ ತಂಡ 17.4 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 83 ರನ್‌ ಗಳಿಸಿದ್ದಾಗ ಮಳೆ ಸುರಿಯತೊಡಗಿದ್ದರಿಂದ ಪಂದ್ಯ ಸ್ಥಗಿತಗೊಂಡಿತು. ಉತ್ತಮ ರನ್‌ ರೇಟ್‌ ಆಧಾರದಲ್ಲಿ ಯಮುನಾ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಚಾಂಪಿಯನ್‌ ತಂಡ 30 ಸಾವಿರ ಹಾಗೂ ರನ್ನರ್‌ಅಪ್‌ ತಂಡ 20 ಸಾವಿರ ರೂಪಾಯಿ ಜೇಬಿಗಿಳಿಸಿದವು.

ಸಂಕ್ಷಿಪ್ತ ಸ್ಕೋರ್‌: ಟೀಮ್‌ ಕಾವೇರಿ : 20 ಓವರ್‌ಗಳಲ್ಲಿ 7ಕ್ಕೆ 89 (ವೇದಾ ಕೃಷ್ಣಮೂರ್ತಿ 16, ಪ್ರೇರಣಾ ಜಿಆರ್‌ 19, ಅದಿತಿ ರಾಜೇಶ್‌ 20; ದೇಬಸ್ಮಿತಾ ದತ್ತಾ 7ಕ್ಕೆ 3, ಸೌಮ್ಯ 17ಕ್ಕೆ 2).
ಟೀಮ್‌ ಯಮುನಾ : 17.4 ಓವರ್‌ಗಳಲ್ಲಿ 6ಕ್ಕೆ 83 (ದೇಬಸ್ಮಿತಾ ದತ್ತಾ 29*, ಅದಿತಿ ರಾಜೇಶ್‌ 8ಕ್ಕೆ 2, ವೇದಾ ಕೃಷ್ಣಮೂರ್ತಿ 12ಕ್ಕೆ 2).


ಟಿ20 ಸಾಧಕರು
ಸರಣಿ ಶ್ರೇಷ್ಠ ಆಟಗಾರ್ತಿ : ವೃಂದಾ ದಿನೇಶ್‌ (ಯಮುನಾ ತಂಡ)
ಬೆಸ್ಟ್‌ ಬ್ಯಾಟ್ಸ್‌ವುಮನ್‌ : ವೇದಾ ಕೃಷ್ಣಮೂರ್ತಿ (ಕಾವೇರಿ)
ಬೆಸ್ಟ್‌ ಬೌಲರ್‌ : ಪ್ರತ್ಯುಷಾ ಸಿ (ನರ್ಮದಾ)
ಬೆಸ್ಟ್‌ ಆಲ್‌ರೌಂಡರ್‌ : ಅದಿತಿ ರಾಜೇಶ್‌ (ಕಾವೇರಿ)
ಬೆಸ್ಟ್‌ ವಿಕೆಟ್‌ಕೀಪರ್‌ : ಸಂಜನಾ ಬಿ (ನರ್ಮದಾ)
ಬೆಸ್ಟ್‌ ಫೀಲ್ಡರ್‌ : ದೇಬಸ್ಮಿತಾ ದತ್ತಾ (ಯಮುನಾ)
ಟೂರ್ನಿಯ ಬೆಸ್ಟ್‌ ಕ್ಯಾಚ್‌ : ವೇದಾ ಕೃಷ್ಣಮೂರ್ತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌