ಆ್ಯಪ್ನಗರ

ಯುವಿಗೆ ಬರ್ತ್‌ಡೇ ಸಂಭ್ರಮ; ಮಗದೊಂದು ವಿಶ್ವಕಪ್ ಗುರಿ!

ಭಾರತ ಕ್ರಿಕೆಟ್ ತಂಡದ ಜನಪ್ರಿಯ ಕ್ರಿಕೆಟಿಗ ಯುವರಾಜ್ ಸಂಗ್ 37ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಅಲ್ಲದೆ ಮುಂದಿನ ವರ್ಷ ನಡೆಯಲಿರುವ 2019 ಏಕದಿನ ವಿಶ್ವಕಪ್‌ನಲ್ಲಿ ಆಡಲು ಸಾಧ್ಯವೇ ಎಂಬುದು ಬಹಳಷ್ಟು ಕುತೂಹಲ ಮೂಡಿಸಿದೆ.

Vijaya Karnataka Web 12 Dec 2018, 11:02 am
ಹೊಸದಿಲ್ಲಿ: ಭಾರತೀಯ ಕ್ರಿಕೆಟಿಗ ಎರಡು ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ ಯುವರಾಜ್ ಸಿಂಗ್ ಇಂದು (ಡಿಸೆಂಬರ್ 12) 37ನೇ ವರ್ಷಕ್ಕೆ ಕಾಲಿರಿಸಿದ್ದಾರೆ.
Vijaya Karnataka Web yuvraj-singh-03


ಪ್ರಸ್ತುತ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಯುವಿಗೆ ಕ್ರಿಕೆಟ್ ದಿಗ್ಗಜರು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದಾರೆ.

37ನೇ ವರ್ಷಕ್ಕೆ ಕಾಲಿರಿಸಿರುವ ಯುವಿಗೆ ಸದ್ಯ ಮುಂದಿರುವ ಗುರಿ ಒಂದೇ ಆಗಿದೆ. ಅದು ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಆಡುವುದಾಗಿದೆ.

2007 ಟ್ವೆಂಟಿ-20 ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಯುವಿಗೆ ಮಗದೊಂದು ವಿಶ್ವಕಪ್ ಆಡಲು ಸಾಧ್ಯವಾಗಲಿ. ಈ ಮೂಲಕ ಕ್ರಿಕೆಟ್ ಜೀವನದ ಅತ್ಯುನ್ನತ್ತ ಶಿಖರವನ್ನೇರಿ ವಿದಾಯ ಸಲ್ಲಿಸಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

ಕ್ಯಾನ್ಸರ್ ಎಂಬ ಮಾರಕ ರೋಗವನ್ನೇ ಗೆದ್ದು ಬಂದಿರುವ ಯುವಿ ಈಗ ತಂಡಕ್ಕೆ ಪುನರಾಗಮನ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಣಜಿ ಪಂದ್ಯದಲ್ಲಿ ಆಟವನ್ನು ಮುಂದುವರಿಸಿದರೂ ಆಯ್ಕೆ ಸಮಿತಿಯಲ್ಲಿ ಪ್ರಭಾವ ಮೂಡಿಸಲು ಸಾಧ್ಯವಾಗುತ್ತಿಲ್ಲ.

ಸದ್ದಲ್ಲದೆ ನಿವೃತ್ತಿ ಸಲ್ಲಿಸಿರುವ ಗೌತಮ್ ಗಂಭೀರ್ ತರಹನೇ ಯುವಿ ಕೆರಿಯರ್ ಮುಕ್ತಾಯವಾಗಬಹುದೇ ಎಂಬ ಆಂತಕವೂ ಅಭಿಮಾನಿಗಳಲ್ಲಿ ಮನೆ ಮಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌