ಆ್ಯಪ್ನಗರ

ಭಾರತ-ಪಾಕ್ ಬಿಗು ವಾತಾವರಣದಲ್ಲೂ ಕ್ರೀಡಾ ಸ್ಪೂರ್ತಿ ಮೆರೆದ ಯುವಿ

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಮೆಂಟ್‌ನ ಪಂದ್ಯದಲ್ಲಿ ಸಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿರುವ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಶುಭಾರಂಭ ಮಾಡಿಕೊಂಡಿದೆ.

ಏಜೆನ್ಸೀಸ್ 6 Jun 2017, 5:51 pm
ಹೊಸದಿಲ್ಲಿ: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಮೆಂಟ್‌ನ ಪಂದ್ಯದಲ್ಲಿ ಸಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿರುವ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಶುಭಾರಂಭ ಮಾಡಿಕೊಂಡಿದೆ.
Vijaya Karnataka Web yuvraj singh wins heart with lovely sportsmanship against pakistan
ಭಾರತ-ಪಾಕ್ ಬಿಗು ವಾತಾವರಣದಲ್ಲೂ ಕ್ರೀಡಾ ಸ್ಪೂರ್ತಿ ಮೆರೆದ ಯುವಿ


ಭಾರತ ಹಾಗೂ ಪಾಕಿಸ್ತಾನ ನಡುವಣ ಹೈ ವೋಲ್ಟೇಜ್ ಪಂದ್ಯ ಆಯೋಜನೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ಪ್ರೋತ್ಸಾಹ ನೀಡುತ್ತಿರುವ ಹಿನ್ನಲೆಯಲ್ಲಿ ವೈರಿಯ ಜೊತೆಗೆ ಯಾವುದೇ ರೀತಿಯ ಬಾಂಧವ್ಯ ಮಾಡಬಾರದು ಎಂಬುದು ಹಲವರ ನಿಲುವಾಗಿತ್ತು.

ಈ ನಡುವೆ ಲಂಡನ್‌ನಲ್ಲಿ ನಡೆದ ದಾಳಿಯ ನಡುವೆಯೂ ಬಿಗಿ ಭದ್ರತೆಯಲ್ಲಿ ಪಂದ್ಯ ಆಯೋಜಿಸಲಾಗಿತ್ತು. ಎಂದಿನಂತೆ ಐಸಿಸಿ ಟೂರ್ನಿಗಳಲ್ಲಿ ಪಾಕ್ ವಿರುದ್ಧ ಮೇಲುಗೈ ಸಾಧಿಸಿದ್ದ ವಿರಾಟ್ ಕೋಹ್ಲಿ ಪಡೆ ಈ ಬಾರಿಯೂ ಅಭಿಮಾನಿಗಳಲ್ಲಿ ಹರ್ಷ ಮೂಡಿಸಿದ್ದರು.

ಇತರೆಲ್ಲ ಪಂದ್ಯಗಳಿಗಿಂತಲೂ ವಿಭಿನ್ನವಾಗಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಪಂದ್ಯವು ಶಾಂತಚಿತ್ತವಾಗಿ ಮುಂದುವರಿದಿತ್ತು. ಇತ್ತಂಡಗಳ ಆಟಗಾರರಿಂದ ಯಾವುದೇ ವಾಗ್ವಾದಗಳು ಉಂಟಾಗಿಲ್ಲ. ಅನೇಕ ಕ್ರೀಡಾ ಪ್ರೇಮಿಗಳಲ್ಲಿ ಇದು ಭಾರತ-ಪಾಕ್ ಪಂದ್ಯವೇ ಎಂಬುದು ಸಹ ಸಂದೇಹವನ್ನುಂಟು ಮಾಡಿತ್ತು.

ಏತನ್ಮಧ್ಯೆ ಕ್ರೀಸಿನಲ್ಲಿದ್ದ ಯುವರಾಜ್ ಸಿಂಗ್ ಗಾಯಕ್ಕೆ ತುತ್ತಾದ ಪಾಕ್ ವೇಗಿ ವಹಾಬ್ ರಿಯಾಜ್ ಅವರತ್ತ ತೆರಳಿ ಆರೋಗ್ಯ ವಿಚಾರಿಸಿಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿ ಹರಡಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಬಿಗುವಾದ ವಾತಾವರಣದ ನಡುವೆಯೂ ಯುವಿ ಕ್ರೀಡಾಸ್ಪೂರ್ತಿ ಮೆರೆದಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಅಂದ ಹಾಗೆ ವಿಂಟೇಜ್ ಯುವಿ ಶೈಲಿಗೆ ಮರಳಿದ್ದ ಈ ಪಂಜಾಬ್ ಎಡಗೈ ಬ್ಯಾಟ್ಸ್‌ಮನ್ ಕೇವಲ 28 ಎಸೆತಗಳಲ್ಲಿ ಅರ್ಧಶತಕವನ್ನು ಚಚ್ಚಿದ್ದರು.

ಅತ್ತ ವಹಾಬ್ 8.4 ಓವರ್‌ಗಳಲ್ಲಿ 87 ರನ್ ಬಿಟ್ಟುಕೊಡುವ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಂತ ದುಬಾರಿ ಬೌಲರ್‌ ಎಂಬ ಅಪಖ್ಯಾತಿಗೆ ಒಳಗಾಗಿದ್ದರು. ಅಂದ ಹಾಗೆ ಗಾಯಕ್ಕೆ ತುತ್ತಾಗಿರುವ ವಹಾಬ್ ಸಂಪೂರ್ಣ ಟೂರ್ನಿಯಿಂದಲೇ ಹೊರ ನಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌