ರಾಂಚಿ: ಇದೀಗಷ್ಟೇ ಅಂತ್ಯಗೊಂಡ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆದಿದ್ದ ಭಾರತದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್, ಟ್ವೆಂಟಿ-20 ಸರಣಿಯಲ್ಲೂ ಇದೇ ಅಮೋಘ ನಿರ್ವಹಣೆಯನ್ನು ಮುಂದುವರಿಸಿದ್ದಾರೆ.
ರಾಂಚಿಯಲ್ಲಿ ಸಾಗುತ್ತಿರುವ ಮೊದಲ ಟ್ವೆಂಟಿ-20 ಪಂದ್ಯದಲ್ಲೂ ಮ್ಯಾಕ್ಸ್ವೆಲ್ ವಿಕೆಟ್ ಪಡೆದ ಚಹಲ್, ಈ ಆಸೀಸ್ ಬ್ಯಾಟ್ಸ್ಮನ್ರನ್ನು ಬೆಂಬಿಡದೇ ಕಾಡಿದರು.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿಯುವ ಮೂಲಕ ಮ್ಯಾಕ್ಸ್ವೆಲ್, ಭಾರತೀಯ ಪಾಳೇಯದಲ್ಲಿ ಅಚ್ಚರಿ ಮೂಡಿಸಿದ್ದರು. ಇದರಂತೆ ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ಮ್ಯಾಕ್ಸ್ವೆಲ್ 16 ಎಸೆತಗಳಲ್ಲಿ ಎರಡು ಬೌಂಡರಿಗಳಿಂದ 17 ರನ್ ಗಳಿಸಿದ್ದರು.
ಈ ಹಂತದಲ್ಲಿ ನಾಯಕ ವಿರಾಟ್ ಕೋಹ್ಲಿ ಚೆಂಡನ್ನು ಚಹಲ್ಗೆ ನೀಡಿದ್ದರು. ಮೊದಲ ಎಸೆತವು ಸ್ಲಿಪ್ ಮೂಲಕ ಬೌಂಡರಿ ಗೆರೆ ದಾಟಿದರೆ ಎರಡನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಮ್ಯಾಕ್ಸ್ವೆಲ್, ಜಸ್ಪ್ರೀತ್ ಬುಮ್ರಾಗೆ ಕ್ಯಾಚಿತ್ತು ಮರಳಿದರು.
ಈ ವೇಳೆಯಲ್ಲಿ ಮ್ಯಾಕ್ಸ್ವೆಲ್ ಅವರನ್ನು ಪೆವಿಲಿಯನ್ಗೆ ಮರಳಿಸುವಾಗ ಚಹಲ್ ಪ್ರತಿಕ್ರಿಯೆ ಹೆಚ್ಚಿನ ರೋಚಕತೆಗೆ ಸಾಕ್ಷಿಯಾಗಿತ್ತು.