ಆ್ಯಪ್ನಗರ

ಮ್ಯಾಕ್ಸ್‌ವೆಲ್ ವಿರುದ್ಧ ಚಹಲ್ ಹ್ಯಾಟ್ರಿಕ್ ಸಾಧನೆ

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಕೋಲ್ಕತ್ತಾದ ಈಡೆನ್ ಗಾರ್ಡೆನ್ ಮೈದಾನದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಚೈನಾಮನ್ ಬೌಲಿಂಗ್ ಖ್ಯಾತಿಯ ಕುಲ್‌ದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ ದಾಖಲೆ ಎಲ್ಲರಿಗೂ ತಿಳಿದೇ ಇದೆ.

Vijaya Karnataka Web 24 Sep 2017, 5:40 pm
ಇಂದೋರ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಕೋಲ್ಕತ್ತಾದ ಈಡೆನ್ ಗಾರ್ಡೆನ್ ಮೈದಾನದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಚೈನಾಮನ್ ಬೌಲಿಂಗ್ ಖ್ಯಾತಿಯ ಕುಲ್‌ದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ ದಾಖಲೆ ಎಲ್ಲರಿಗೂ ತಿಳಿದೇ ಇದೆ.
Vijaya Karnataka Web yuzvendra chahal has got glenn maxwell thrice in odis series against australia
ಮ್ಯಾಕ್ಸ್‌ವೆಲ್ ವಿರುದ್ಧ ಚಹಲ್ ಹ್ಯಾಟ್ರಿಕ್ ಸಾಧನೆ


ಹಾಗಿರುವಾಗ ಯಜುವೇಂದ್ರ ಚಹಲ್ ಇದೆಂಥ ಹ್ಯಾಟ್ರಿಕ್ ಸಾಧನೆ ಅಂತ ಗಾಬರಿಯಾಗದಿರಿ. ವಿಷಯ ಏನೆಂದರೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕಾಂಗಾರೂ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಸತತ ಮೂರನೇ ಬಾರಿಗೆ ವಿಕೆಟ್ ಪಡೆಯುವಲ್ಲಿ ಭಾರತದ ಲೆಗ್ ಸ್ಪಿನ್ನರ್ ಚಹಲ್ ಯಶಸ್ವಿಯಾಗಿದ್ದಾರೆ.

ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ಮ್ಯಾಕ್ಸ್‌ವೆಲ್ ಲೆಗ್ ಸ್ಪಿನ್ನರ್ ಚಹಲ್ ಎಸೆತದಲ್ಲಿ ಕ್ಯಾಚ್‌ಗೆ ಬಲಿಯಾಗಿದ್ದರು. ಇದಾದ ಬಳಿಕ ಕೋಲ್ಕತ್ತಾ ಏಕದಿನದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಅಮೋಘ ಸ್ಟಂಪಿಂಗ್‌ಗೆ ಬಲಿಯಾಗಿದ್ದರು.



ಇದೀಗ ಮತ್ತೆ ಇಂದೋರ್ ಏಕದಿನದಲ್ಲಿ ಚಹಲ್ ಎಸೆತದಲ್ಲೇ ಧೋನಿ ಸ್ಟಂಪಿಂಗ್‌ಗೆ ಮ್ಯಾಕ್ಸ್‌ವೆಲ್ ಪೆವಿಲಿಯನ್ ಸೇರಿದ್ದಾರೆ. 13 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ಕೇವಲ 5 ರನ್ ಗಳಿಸಲಷ್ಟೇ ಶಕ್ತವಾದರು.

ಈ ಮೂಲಕ ಮೊದಲ ಮೂರು ಪಂದ್ಯಗಳಲ್ಲೂ ಮ್ಯಾಕ್ಸ್‌ವೆಲ್ ವಿಕೆಟ್ ಕಬಳಿಸುವ ಮೂಲಕ ಚಹಲ್ ಆಸೀಸ್ ರನ್ ಬೇಟೆಗೆ ಕಡಿವಾಣ ಹಾಕಿದ್ದರು. ಅಂತಿಮವಾಗಿ ತಮ್ಮ 10 ಓವರ್‌ಗಳ ಕೋಟಾದಲ್ಲಿ ಚಹಲ್ 54 ರನ್ ಬಿಟ್ಟು ಕೊಟ್ಟು ಒಂದು ವಿಕೆಟ್ ಪಡೆದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌