ಆ್ಯಪ್ನಗರ

ಜಸ್ಪ್ರೀತ್ ಬುಮ್ರಾ ಯಶಸ್ಸಿನ ಹಿಂದಿನ ರಹಸ್ಯ ಬಿಚ್ಚಿಟ್ಟ ಮಾಜಿ ವೇಗಿ ಜಹೀರ್ ಖಾನ್

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಾಪುಗಾಲನ್ನಿಟ್ಟ ಕಿರು ಅವಧಿಯಲ್ಲೇ ಜಸ್ಪ್ರೀತ್ ಬುಮ್ರಾ ಹೇಗೆ ಯಶಸ್ವಿ ಬೌಲರ್ ಆಗಿ ಪರಿವರ್ತನೆಗೊಂಡಿದ್ದಾರೆ ಎಂಬುದರ ಬಗ್ಗೆ ಮಾಜಿ ವೇಗಿ ಜಹೀರ್ ಖಾನ್ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

Vijaya Karnataka Web 24 Sep 2019, 11:08 am
ಹೊಸದಿಲ್ಲಿ: ಭಾರತದ ಸಾರ್ವಕಾಲಿಕ ಶ್ರೇಷ್ಠ ಎಡಗೈ ವೇಗಿಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಆಧುನಿಕ ಕ್ರಿಕೆಟ್‌ನ ಬೌಲಿಂಗ್ ಸೆನ್ಸೇಷನಲ್ ಜಸ್ಪ್ರೀತ್ ಬುಮ್ರಾ ಯಶಸ್ಸಿನ ಬಗ್ಗೆ ಮಹತ್ವದ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
Vijaya Karnataka Web jasprit-bumrah-test


ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಮೂಲಕ ಛಾಪು ಮೂಡಿಸಿರುವ ಜಸ್ಪ್ರೀತ್ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಾಪುಗಾಲನ್ನಿಟ್ಟಿರುವ ಅತ್ಯಂತ ಕಿರು ಅವಧಿಯಲ್ಲೇ ಹೆಚ್ಚಿನ ಯಶಸ್ಸು ಪಡೆದಿದ್ದಾರೆ.

ವಿಜಯ್ ಹಜಾರೆ ಟ್ರೋಫಿ; ಕರ್ನಾಟಕಕ್ಕೆ ಹೈದರಾಬಾದ್ ಮೊದಲ ಸವಾಲು

ಸೀಮಿತ ಓವರ್‌ಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಗಳಿಸಿರುವ ಯಶಸ್ಸು ನಿಜಕ್ಕೂ ಅಧ್ಭುತ. ಅಲ್ಲದೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ವೆಸ್ಟ್‌ಇಂಡೀಸ್ ನೆಲದಲ್ಲಿ ಐದು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.

ಬುಮ್ರಾ ವಿಶೇಷ ಪ್ರತಿಭೆಯಾಗಿದ್ದು, ವಿಚಿತ್ರ ಬೌಲಿಂಗ್ ಶೈಲಿಯಿಂದಲೇ ಬ್ಯಾಟ್ಸ್‌ಮನ್‌ಗಳ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ಮತ್ತಷ್ಟು ಕಲಿತುಕೊಳ್ಳುವ ಉತ್ಸಾಹವಿದೆ. ತಮ್ಮ ಫಿಟ್ನೆಸ್ ಮೇಲೂ ಕಾರ್ಯ ನಿರ್ವಹಿಸುತ್ತಿದ್ದು, ಹೊಸ ಅಂಶಗಳನ್ನು ಆಳವಡಿಸಿಕೊಳ್ಳುತ್ತಿದ್ದಾರೆ. ಕಿರು ಅವಧಿಯಲ್ಲೇ ಓರ್ವ ಬೌಲರ್ ಆಗಿ ಅತೀವ ಪರಿಶ್ರಮ ವಹಿಸುತ್ತಾರೆ. ಇದುವೇ ಯಶಸ್ಸಿಗೆ ಕಾರಣವಾಗಿದೆ ಎಂದು ಜಹೀರ್ ವಿವರಿಸಿದ್ದಾರೆ.

ಯಶಸ್ಸಿಗೆ ಬೇಕಾದ ಎಲ್ಲ ಅಂಶಗಳನ್ನು ಬುಮ್ರಾ ತೋರ್ಪಡಿಸಿದ್ದಾರೆ. ಪಂದ್ಯವನ್ನು ಸಮೀಪಿಸುತ್ತಿರುವ ರೀತಿ ಮೆಚ್ಚುವಂತದ್ದು ಎಂದು ಜಹೀರ್ ಸೇರಿಸಿದರು.

ಯುವರಾಜ್ ಸಿಂಗ್‌ ಗೌರವ ಸೂಚಕವಾಗಿ ಜೆರ್ಸಿ 'ನಂ 12' ನಿವೃತ್ತಿ ನೀಡಬೇಕೇ?

ವೆಸ್ಟ್‌ಇಂಡೀಸ್ ಪ್ರವಾಸದ ಎರಡು ಟೆಸ್ಟ್ ಸರಣಿಯಲ್ಲಿ ತಲಾ ಐದು ವಿಕೆಟ್ ಸಾಧನೆ ಮಾಡಿರುವ ಜಸ್ಪ್ರೀತ್ ಬುಮ್ರಾ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ನೆಗೆತ ಕಂಡಿದ್ದಾರೆ. ಆಗಲೇ ಏಕದಿನದಲ್ಲಿ ನಂ.1 ಪಟ್ಟವನ್ನು ಆಲಂಕರಿಸಿದ್ದಾರೆ.

ಸದ್ಯ ದಕ್ಷಿಣ ಆಫ್ರಿಕಾ ತವರಿನಲ್ಲಿ ನಡೆದ ಟ್ವೆಂಟಿ-20 ಸರಣಿ ವೇಳೆ ವಿಶ್ರಾಂತಿಯಲ್ಲಿದ್ದ ಬುಮ್ರಾ ಟೆಸ್ಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯವು ಅಕ್ಟೋಬರ್ 2ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌