ಆ್ಯಪ್ನಗರ

ಐರ್ಲೆಂಡ್‌ಗೆ ಶಾಕ್‌ ಕೊಟ್ಟ ನಮಿಬಿಯಾಗೆ ಸೂಪರ್ 12 ಟಿಕೆಟ್‌!

ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಅಂತ್ಯಗೊಂಡಿದೆ. ಶುಕ್ರವಾರ ನಡೆದ 'ಎ' ಗುಂಪಿನ ಕೊನೇ ಪಂದ್ಯದಲ್ಲಿ ಐರ್ಲೆಂಡ್‌ಗೆ ಸೋಲುಣಿಸಿದ ನಮಿಬಿಯಾ ತಂಡ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌ 12 ಹಂತಕ್ಕೆ ಅರ್ಹತೆ ಪಡೆಯಲಿವೆ.

Vijaya Karnataka Web 22 Oct 2021, 9:44 pm

ಹೈಲೈಟ್ಸ್‌:

  • ಯುಎಇ ಮತ್ತು ಒಮಾನ್‌ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ.
  • ಅಕ್ಟೋಬರ್ 23ರಂದು ಶುರುವಾಗಲಿರುವ ಸೂಪರ್‌ 12 ಹಂತದ ಪಂದ್ಯಗಳು.
  • 'ಎ' ಗುಂಪಿನ ಕೊನೆಯ ಪಂದ್ಯದಲ್ಲಿ ಐರ್ಲೆಂಡ್‌ಗೆ ಸೋಲುಣಿಸಿದ ನಮಿಬಿಯಾ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Namibia WT20
ಗೆದ್ದ ಸಂಭ್ರಮದಲ್ಲಿ ನಮಿಬಿಯಾ ತಂಡ (ಚಿತ್ರ: ಐಸಿಸಿ/ಟ್ವಿಟರ್).
ಶಾರ್ಜಾ: ಇದೇ ಮೊದಲ ಬಾರಿ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಂಡಿರುವ ನಮಿಬಿಯಾ ತಂಡ ಸೂಪರ್ 12 ಹಂತಕ್ಕೆ ಅರ್ಹತೆ ಪಡೆದಿದೆ. ಶುಕ್ರವಾರ ನಡೆದ 'ಎ' ಗುಂಪಿನ ಕೊನೆಯ ಲೀಗ್‌ ಪಂದ್ಯದಲ್ಲಿ ಅಪಾಯಕಾರಿ ಐರ್ಲೆಂಡ್‌ ಎದುರು 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿ ಸೂಪರ್‌ 12 ಹಂತದ ಟಿಕೆಟ್ ಪಡೆದಿದೆ.

'ಎ' ಗುಂಪಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದ ನಮಿಬಿಯಾ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಸೂಪರ್‌ 12 ಹಂತದ ಎರಡನೇ ಗುಂಪಿನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ ಅಗ್ರಸ್ಥಾನ ಪಡೆದು ಸೂಪರ್‌ 12 ಹಂತದ ಮೊದಲ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿದೆ. 'ಎ' ಗುಂಪಿನಿಂದ ಐರ್ಲೆಂಡ್‌ ಮತ್ತು ನೆದರ್ಲೆಂಡ್‌ ತಂಡಗಳು ಸ್ಪರ್ಧೆಯಿಂದ ಹೊರಬಿದ್ದಿವೆ.
ಇಲ್ಲಿನ ಶಾರ್ಜಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಐರ್ಲೆಂಡ್‌ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 125 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಅನುಭವಿಗಳಾದ ಪಾಲ್‌ ಸ್ಟಿರ್ಲಿಂಗ್ (38), ಕೆವಿನ್ ಒ'ಬ್ರಿಯಾನ್‌ (25) ಮತ್ತು ನಾಯಕ ಆಂಡಿ ಬಾಲ್ಬಿರ್ನಿ (21) ಉತ್ತಮ ಆರಂಭ ಪಡೆದರಾದರೂ ದೊಡ್ಡ ಇನಿಂಗ್ಸ್‌ ಆಗಿ ಪರಿವರ್ತಿಸಲಾಗಲಿಲ್ಲ. ತಂಡದ ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳು ಒಂದಂಕಿಯ ಸ್ಕೋರ್‌ಗೆ ವಿಕೆಟ್‌ ಒಪ್ಪಿಸಿದರಿಂದ ಐರ್ಲೆಂಡ್‌ ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟಿತು. ನಮಿಬಿಯಾ ಪರ ಜಾನ್‌ ಫ್ರೈಲಿಂಕ್ (21ಕ್ಕೆ 3) ಮತ್ತು ಡೇವಿಡ್ ವೈಸ್‌ (22ಕ್ಕೆ 2) ಯಶಸ್ವಿ ಬೌಲರ್‌ಗಳೆನಿಸಿದರು.

ಟೀಮ್ ಇಂಡಿಯಾ-ಇಂಗ್ಲೆಂಡ್‌ ನಡುವಣ 5ನೇ ಟೆಸ್ಟ್‌ಗೆ ವೇದಿಕೆ ಸಜ್ಜು!

ಬಳಿಕ ಗುರಿ ಬೆನ್ನತ್ತಿದ ನಮಿಬಿಯಾ ತಂಡದ ಪರ ನಾಯಕ ಜೆರಾಡ್‌ ಎರಾಸ್ಮಸ್‌ 49 ಎಸೆತಗಳಲ್ಲಿ ಅಜೇಯ 53 ರನ್‌ ಸಿಡಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಆಲ್‌ರೌಂಡ್‌ ಆಟವಾಡಿದ ಅಜೇಯ 28 ರನ್‌ ಮತ್ತು ಝೇನ್‌ ಗ್ರೀನ್‌ (24) ಉತ್ತಮ ಕೊಡುಗೆ ಕೊಟ್ಟು ಇನ್ನು 9 ಎಸೆತಗಳಲ್ಲಿ ಬಾಕಿ ಇರುವಾಗಲೇ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು.

ನಮಿಬಿಯಾ ತಂಡ ಇದಕ್ಕೂ ಮುನ್ನ ನೆದರ್ಲೆಂಡ್ಸ್‌ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಈಗ ಸೂಪರ್‌ 12 ಹಂತದಲ್ಲಿ ಟೀಮ್ ಇಂಡಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಅಫಘಾನಿಸ್ತಾನ ಮತ್ತು ಸ್ಕಾಟ್ಲೆಂಡ್‌ ವಿರುದ್ಧ ಪೈಪೋಟಿ ನಡೆಸಲಿದೆ.

ಪಾಕ್‌ ವಿರುದ್ಧದ ಕದನಕ್ಕೆ ಲಕ್ಷ್ಮಣ್ ಆಯ್ಕೆಯ ಟೀಮ್ ಇಂಡಿಯಾ XI ಹೀಗಿದೆ!

ಸಂಕ್ಷಿಪ್ತ ಸ್ಕೋರ್‌
ಐರ್ಲೆಂಡ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 125 ರನ್‌ (ಪಾಲ್‌ ಸ್ಟಿರ್ಲಿಂಗ್‌ 38, ಕೆವಿನ್‌ ಒ'ಬ್ರಿಯನ್ 25; ಜಾನ್‌ ಫ್ರೈಲಿಂಕ್ 21ಕ್ಕೆ 3).
ನಮಿಬಿಯಾ: 18.3 ಓವರ್‌ಗಳಲ್ಲಿ 2 ವಿಕೆಟ್‌ಗೆ 126 ರನ್‌ (ಜೆರಾಡ್‌ ಎರಾಸ್ಮಸ್‌ ಅಜೇಯ 53, ಡೇವಿಡ್‌ ವೈಸ್‌ ಅಜೇಯ 28; ಕರ್ಟಿಸ್‌ ಕ್ಯಾಂಫರ್‌ 14ಕ್ಕೆ 2).
ಪಂದ್ಯಶ್ರೇಷ್ಠ: ಡೇವಿಡ್‌ ವೈಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌